ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ಗೆ ಉತ್ತಮವಾದ ವಾತಾವರಣ ಇದ್ದು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಮೈಸೂರಿನಲ್ಲಿ ಮತದಾನ ಮಾಡಿದ ಬಳಿಕ ಮಾತಾನಾಡಿದ ಅವರು, ಮೊದಲ ಹಂತದ 14ರಲ್ಲಿ ಹೆಚ್ಚು ಸ್ಥಾನವನ್ನು ನಾವೇ ಗೆಲ್ಲುತ್ತೇವೆ. ಆದರೆ ಅದರಲ್ಲಿ ಎಷ್ಟು ಅಂಥ ಹೇಳಲು ಸಾಧ್ಯವಿಲ್ಲ ಎಂದರು.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಜನ ಗ್ಯಾರೆಂಟಿಗೆ ಮತ ಹಾಕುತ್ತಾರೆ. ಹಾಗಾಗಿ ನಾವು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ಕಳೆದ 3 ದಿನಗಳಿಂದ ಮೋದಿ ಮಾಡುತ್ತಿರುವ ಭಾಷಣ ಹತಾಶೆಯಿಂದ ಮಾಡಿದಂತಿದೆ. ಅವರ ಭಾಷಣ ಓಲೈಕೆ ಅಲ್ಲ ಪ್ರಚೋದನೆಯಿಂದ ಕೂಡಿದೆ. ಅವರ ಭಾಷಣ ಆರ್ ಎಸ್ ಎಸ್ ನ ಭಾಷಣ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಸವಲತ್ತುಗಳನ್ನ ಮುಸ್ಲಿಂರಿಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲ ಆರ್ ಎಸ್ ಎಸ್ ನ ಹಿಡನ್ ಅಜೆಂಡಾ. ಮೋದಿ ಬಂದು ಪ್ರಚಾರ ಮಾಡಲಿ ಎಂದು ಹೇಳಿದರು. ಇದೇ ವೇಳೆ ದೇವೇಗೌಡರ ಬಗ್ಗೆಯೂ ವಾಗ್ದಾಳಿ ನಡೆಸಿದ ಅವರು, ದೇವೇಗೌಡರ ಕಣ್ಣೀರು ಕೃತಕವಾದದ್ದು ಎಂದರು.
ರಾಜಕಾರಣ ವಿಚಾರದಲ್ಲಿ ಕಣ್ಣೀರು ಬರಬಾರದು. ಆದರೆ ದೇವೇಗೌಡರ ಕುಟುಂಬದವರು ಯಾವಾಗಲೂ ಕಣ್ಣೀರು ಹಾಕುತ್ತಾರೆ. ಇದೆಲ್ಲ ಕೃತಕವಾದದ್ದು ಎಂದು ಟೀಕಿಸಿದರು.
ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಆದರೂ ಮೋದಿ ಅದೇ ರೀತಿ ಭಾಷಣ ಮುಂದುವರೆಸುತ್ತಿದ್ದಾರೆ ಎಂದು ದೂರಿದರು.




