ಶಿಕ್ಷಣ ಕ್ಷೇತ್ರಕ್ಕೆ ರಾಧಾಕೃಷ್ಣನ್ ಕೊಡುಗೆ ಅಪಾರ

3 years ago

#Radhakrishnan #contribution #field #education #immense

ಸುರಪುರ:  ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅರ್ಥವತ್ತಾದ ಚೌಕಟ್ಟು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನಕ್ಕೆ ಹಾಗೂ ರಾಷ್ಟ್ರದ ಪ್ರಗತಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು  ತಾಲೂಕಾ ಬಿಐಆರ್ ಟಿ ತಂಡದ ನಾಯಕ ಮಹಾದೇವಪ್ಪ ಗುತ್ತೆದಾರ ಹೇಳಿದರು.

ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಡಾ.ರಾಧಾಕೃಷ್ಣನ್ ರವರು ರಾಷ್ಟ್ರಪತಿಗಳಷ್ಟೇ ಅಲ್ಲದೆ, ಶಿಕ್ಷಕರು, ಪ್ರಾಧ್ಯಾಪಕರು ವಿದ್ವಾಂಸರು ಮತ್ತು ತತ್ವಜ್ಞಾನಿಯೂ ಆಗಿದ್ದರು. ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದಾಗ, ಆ ಬೇಡಿಕೆ ನಿರಾಕರಿಸಿದ ಅವರು ತಮ್ಮ ಜನ್ಮದಿನದ ಬದಲು ಶಿಕ್ಷಕರ ದಿನವನ್ನಾಗಿ ಆಚರಿಸಿ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದರು ಎಂದು ಸ್ಮರಿಸಿದರು.

ಕರಡಕಲ್ ಕ್ಲಸ್ಟರ್ ಸಿಆರ್ ಪಿ ಸಿದ್ದರಾಮ ಭಜಂತ್ರಿ ಮಾತನಾಡಿ, ನಮಗೆ ಕಣ್ಣಿಗೆ ಕಾಣುವ ದೇವರೆಂದರೆ ತಂದೆ ತಾಯಿ ಮತ್ತು ಗುರು ಇಂತಹ ಪವಿತ್ರ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ನಾವೆಲ್ಲರೂ ಪುಣ್ಯವಂತರು ಎಂದರು.

ದೇಶದ ಭವಿಷ್ಯ ಉಜ್ವಲವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸಮಾಜದ ಬಗ್ಗೆ ಗೌರವಭಾವನೆ ಮೂಡಿಸಿದರೆ ಪ್ರಗತಿ ಸಾಧ್ಯ ಎಂದರು.

ಮಲ್ಲಣ್ಣ ಸುರಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಪುಷ್ಪಗುಚ್ಛ, ನೆನಪಿನ ಕಾಣಿಕೆ ನೀಡಲಾಯಿತು. ಶಿಕ್ಷಕರಾದ ಮಾಣಿಕಪ್ಪ ಕಲ್ಯಾಣಿ, ಮಹಾಂತೇಶ ವಸ್ತ್ರದ್ , ಅಬ್ಬಾಸಲಿ ಮಕಾಂದರ್, ಯಮನಪ್ಪ ಎಚ್, ಪುಷ್ಪಾವತಿ ಚಿಡಬಿ, ಉಮಾಕ್ಷೀ ಅಂಗಡಿ ಇದ್ದರು. ಮುತ್ತುರಾಜ್ ಬಡಿಗೇರ ನಿರೂಪಿಸಿ, ವಂದಿಸಿದರು.

Leave a Reply