ಮಂಗಳೂರು: ಸಾರ್ವಭೌಮ ರಾಷ್ಟ್ರ ವೆನಿಜುವೆಲಾ ದೇಶದ ಮೇಲೆ ಅಮೇರಿಕ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡೊರೊ ಮತ್ತು ಅವರ ಪತ್ನಿಯನ್ನು ಅಪಹರಿಸಿ ದಕ್ಷಿಣ ಅಮೆರಿಕಾದ ಪುಟ್ಟ ದೇಶವಾದ ವೆನೆಜುವೆಲಾ ಮೇಲೆ ಅಘೋಷಿತ ಯುದ್ಧ ಸಾರಿದ ಅಮೆರಿಕ ನೀತಿಯನ್ನು ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರತಿಭಟನೆ ಉದ್ದೇಶಿಸಿ ಸಿಪಿಐಮ್ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಅಮೆರಿಕಾ ಜಗತ್ತಿನ ತೈಲ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾರುವುದಕ್ಕಾಗಿ ದಕ್ಷಿಣ ಅಮೆರಿಕಾದ ಪುಟ್ಟ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ಮಾನವ ಹತ್ಯೆ ಮಾಡಿದೆ. ವೆನೆಜುವೆಲಾ ಸೇನಾ ನೆಲೆಗಳನ್ನು ವಶಪಡಿಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡೊರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವ ಕೃತ್ಯ ಅತ್ಯಂತ ಅಮಾನವೀಯವಾದುದು ಮತ್ತು ಜಾಗತಿಕ ಶಾಂತಿಗೆ ಅಮೆರಿಕ ಹಿಂಸೆಯ ಮೂಲಕ ತಡೆ ಒಡ್ದುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡಿ, ಅಮೆರಿಕ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಜಗತ್ತಿನ ಅನೇಕ ದೇಶಗಳನ್ನು ಪರಸ್ಪರ ಯುದ್ಧ, ಸಂಘರ್ಷ ಸೃಷ್ಟಿಸಿದೆ. ಇರಾಕ್, ಆಫಘನಿಸ್ಥಾನ, ವಿಯೆಟ್ನಾಮ್, ಚಿಲಿ, ಮೆಕ್ಸಿಕೋ, ಕ್ಯೂಬಾ ದೇಶದ ಮೇಲೆ ಸುಳ್ಳು ಅಪವಾದ ಹೊರಿಸಿ ಆ ದೇಶಗಳ ಸಂಪತ್ತನ್ನು ದೋಚಿದೆ. ಅಮೇರಿಕ ವೆನೆಜುವೆಲಾ ದೇಶದ ಮೇಲೆ ನಡೆಸಿರುವ ಧಾಳಿಯನ್ನು ಭಾರತ ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಸಮುದಾಯದ ವಾಸುದೇವ ಉಚ್ಚಿಲ ಹಾಗೂ ದಲಿತ ನಾಯಕರಾದ ಎಂ ದೇವದಾಸ್ ರವರು ಮಾತನಾಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಡಾ ಕೃಷ್ಣಪ್ಪ ಕೊಂಚಾಡಿ, ಬಿ.ಕೆ ಇಮ್ತಿಯಾಜ್, ಜಯಂತಿ ಶೆಟ್ಟಿ, ಪ್ರಮೀಳಾ, ಭಾರತಿ ಬೋಳಾರ, ಪ್ರಮೋದಿನಿ, ಯೋಗೀತಾ ಸುವರ್ಣ ವಿಲಾಸಿನಿ, ಸುಹಾಸಿನಿ, ಸುನಿಲ್ ಕುತ್ತಾರ್, ಜಗದೀಶ್ ಬಜಾಲ್, ಪಿ ಜಿ ರಫೀಕ್, ಬಿಲ್ಲಾಳ್ ಬೆಂಗ್ರೆ, ಕೃಷ್ಣ ತಣ್ಣೀರುಬಾವಿ, ನಾಗೇಶ್, ರಾಕೇಶ್ ಕುಂದರ್, ವಿಶ್ವನಾಥ ಮಂಜನಾಡಿ, ರಫೀಕ್ ಹರೇಕಳ, ಕೆ ಎಚ್ ಇಕ್ಬಾಲ್,ನಾಗೇಶ್ ಕೋಟ್ಯಾನ್, ತಿಮ್ಮಪ್ಪ ಕೊಂಚಾಡಿ, ಶ್ರೀನಾಥ್ ಕುಲಾಲ್, ರೋಹಿದಾಸ್ ಭಟ್ನಗರ, ಮುಜಾಫರ್ ಅಹ್ಮದ್, ಎಂ ಎನ್ ಶಿವಪ್ಪ, ಮೈಖೆಲ್ ಡಿಸೋಜಾ, ರಮೇಶ್ ಉಳ್ಳಾಲ್, ರಮೇಶ್ ಸುವರ್ಣ ಮೂಲ್ಕಿ ಮುಂತಾದವರು ಇದ್ದರು.






