ಸೃಜನಾತ್ಮಕ ನಾಟಕಗಳನ್ನು ರಂಗಾಯಣ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿ: ಡಾ ಸಿದ್ದಲಿಂಗ ಪಟ್ಟಣಶೆಟ್ಟಿ
ಧಾರವಾಡ: ಬೇರೆ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಅಲ್ಲಿನ ಸ್ಥಳೀಯ ಸೊಗಡನ್ನು ಸಾರುವಂತಹ ವಿಭಿನ್ನ ಬಗೆಯ ಸೃಜನಾತ್ಮಕ ನಾಟಕಗಳನ್ನು ರಂಗಾಯಣ ಪ್ರದರ್ಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ರಂಗಾಯಣ ಧಾರವಾಡ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ “ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ವನ್ನು ಅವರು ಉದ್ಘಾಟಿಸಿ, ಮಾತನಾಡಿದರು.
ರಂಗಾಯಣ ಕನ್ನಡ ಮಾತ್ರವಲ್ಲದೇ ಹಿಂದಿ ಭಾಷೆಯ ನಾಟಕವನ್ನು ಸಿದ್ದಪಡಿಸಿ ಪ್ರದರ್ಶನ ನೀಡುವ ಮೂಲಕ ನೋಡುಗರಿಗೆ ಬೇರೆ ಭಾಷೆಯ ಕುರಿತು ಅರಿವು ಮೂಡಿಸುತ್ತಿದೆ. ನಾಟಕಗಳು ಎಂದಿಗೂ ಹಳೆಯದಾಗುವುದಿಲ್ಲ. ಕಾಲದಿಂದ ಕಾಲಕ್ಕೆ ಹೊಸತನದ ರೂಪವನ್ನು ಪಡೆದು ರಂಗಾಸಕ್ತರಿಗೆ ನಾಟಕದ ಹೊಸರುಚಿಯನ್ನು ನೀಡುತ್ತದೆ. ಪ್ರತಿನಿತ್ಯದ ಜೀವನದಲ್ಲಿ ಪ್ರತಿಯೊಬ್ಬರು ನಾಟಕಕಾರರೆ ಎಂದು ಹೇಳಿ, ಧಾರವಾಡ ರಂಗಾಯಣದ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ಚನ್ನೂರ ಮಾತನಾಡಿ, ರಂಗಾಯಣಕ್ಕೆ ನೇಮಕಗೊಳ್ಳುವ ನಿರ್ದೇಶಕರು ಅವರ ಕಾಲಘಟ್ಟದಲ್ಲಿ ಹಲವಾರು ವಿಭಿನ್ನ ಬಗೆಯ ನಾಟಕೋತ್ಸವಗಳನ್ನು ಮಾಡುವ ಮೂಲಕ ರಂಗಭೂಮಿಗೆ ಹೊಸತನದ ರೂಪವನ್ನು ನೀಡುತ್ತಾ ಬರುತ್ತಿದ್ದಾರೆ ಎಂದರು.
ಧಾರವಾಡ ರಂಗಾಯಣ ಆಯೋಜಿಸಿರುವ ಕನ್ನಡ, ಹಿಂದಿ, ಮಲೆಯಾಳಂ, ಮರಾಠಿ ನಾಟಕಗಳ ಬಹುಭಾಷಾ ನಾಟಕೋತ್ಸವವವು ಅದಕ್ಕೆ ಸಾಕ್ಷಿಯಾಗಿದೆ. ಇದೇ ನಿಟ್ಟಿನಲ್ಲಿ ಧಾರವಾಡ ರಂಗಾಯಣದ ನಿರ್ದೇಶಕರು ಧಾರವಾಡಕ್ಕೆ ಸ್ವತಂತ್ರ ರಂಗಾಯಣವನ್ನು ಶಾಶ್ವತವಾಗಿ ನೀಡಲು ಪ್ರಯತ್ನಿಸಬೇಕು ಎಂದರು.
ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ ರಂಗಾಯಣ ‘ರಂಗಾಂತರಂಗ’ ಬಹುಭಾಷಾ ನಾಟಕೋತ್ಸವದ ಮೂಲಕ ಒಂದು ಆರೋಗ್ಯಕರ, ಬೌದ್ಧಿಕ, ಭಾವನಾತ್ಮಕ ಸಂವಾದವನ್ನು ಸೃಷ್ಟಿಸುತ್ತಿದೆ ಎಂದರು.
ಕನ್ನಡದ ಜೊತೆಗೆ ಹಿಂದಿ, ಮರಾಠಿ, ಮಲೆಯಾಳಂ ಭಾಷೆಯ ಉತ್ತಮ ಸಂದೇಶಗಳನ್ನು ಹೊಂದಿರುವ ನಾಟಕಗಳನ್ನು ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ಕಲಾರಸಿಕರಿಗೆ ಮನರಂಜನೆಯನ್ನು ನೀಡುತ್ತಿದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಭಿಮಾನಿಗಳು ಭಾಗವಹಿಸಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ರಂಗಾಯಣ ಆಡಳಿತಾಧಿಕಾರಿಗಳು ಸ್ವಾಗತಿಸಿದರು. ನಾಟಕ ನಿರ್ದೇಶಕರಾದ ನರೇಂದ್ರ ಸಾಚರ ಮತ್ತು ಮಾಯಾರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಹುಭಾಷಾ ನಾಟಕೋತ್ಸವದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ನಂತರ “ಗ್ವಾಲೆ ಮತವಾಲೆ”(ಹಿಂದಿ ಭಾಷೆ) ನಾಟಕವನ್ನು ರಂಗಾಯಣ ತಾತ್ಕಾಲಿಕ ರೆಪರ್ಟರಿ, ಲಿವಿಂಗ್ ಲೈಟ್ಲಿ ಹಾಗೂ ಬಾಂಬೆ ಥಿಯೇಟರ್ ಗ್ರೂಪ್ ಪ್ರಸ್ತುತಪಡಿಸಿದರು.













