ಬೆಂಗಳೂರು: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಸರ್ಕಾರಿ ಕಲಾ ಕಾಲೇಜು, ಬೆಂಗಳೂರು, ಕನ್ನಡ ಸಂಘದ ಸಹಯೋಗದಲ್ಲಿ ಕಳೆದ 25 ದಿನಗಳಿಂದ ಆಯೋಜಿಸಿದ ಬಂಜಾರ ಕಸೂತಿ ಕಲಿಕೆ ಕಾರ್ಯಾಗಾರದ ಸಮಾರೋಪ ಸಮಾರಂಭ ದಿನಾಂಕ: 10.10.2024 ರಂದು ಸರ್ಕಾರಿ ಕಲಾ ಕಾಲೇಜು ಬೆಂಗಳೂರು ಇಲ್ಲಿ ನಡೆಯಿತು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಸಮಾರೋಪ ಭಾಷಣವನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್ ಗೋವಿಂದಸ್ವಾಮಿ ಮಾಡಿ ಮಾತನಾಡುತ್ತ, ಬಂಜಾರರ ಪ್ರತಿ ಕಸೂತಿಗೂ ಬಿನ್ನ ಹೆಸರುಗಳಿವೆ ಎಂದು ಪ್ರತಿ ಹೆಸರನ್ನು ಪ್ರಸ್ತಾಪಿಸಿದರು. ಉದಾಹರಣೆಗೆ: ಹಮಾರೋ ಲತಾಪರ್ ಘಣ್ ಘಣೋ ಕಲಾ ಛ,
ಹಮಾರ್ ಅಂಗಲಿ, ಆಠೀ, ಆಸ್ತರ್, ಲೇಪೋ, ಲೇಪೋ, ಛಾಟೀಯಾ ಛ ,
ಹಮಾರ್ ಅಸರ್, (ಪೇಟಿಯಾ), ಅಲ್ಲಿ (ಕಸೂತಿ) ಛ
ಹಮಾರ್ ಆಟಿ (ಕಡಗ), ಕಠಾರಿ (ಕತ್ತಿ) ಛ||
ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಪ್ರಾಂಶುಪಾಲ ಡಾ. ಪಿ.ಟಿ ಶ್ರೀನಿವಾಸ ನಾಯಕ್, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯಕ್, ಸೈದುಲು ಅಡಾವತ್, ಉಪ ಪೊಲೀಸ್ ಆಯುಕ್ತರು, ಬೆಂಗಳೂರು ಉತ್ತರ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ್, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಹೆಬ್ಬಸೂರು, ಕನ್ನಡ ಸಂಘದ ಡಾ.ರುದ್ರೇಶ್ ಅದರಂಗಿ ಮುಂತಾದವರು ಭಾಗವಹಿಸಿದರು.
ಸೈದುಲು ಅಡಾವತ್ ಮಾತನಾಡಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಂಜಾರ ಸಂಶೋಧನೆಗೆ ಅಧ್ಯತೆ ಕೊಡಬೇಕು ಹಾಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು.
ಎನ್. ಜಯದೇವ ನಾಯಕ್ ಮಾತನಾಡಿ, ನಮ್ಮ ನಿಗಮದಲ್ಲಿ 120 ಕೋಟಿ ಇದೆ. ಮುಂದಿನ ದಿನಗಳಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯೊಂದಿಗೆ ಸಹಯೋಗದಲ್ಲಿ ನಾವು ಕಲೆ, ಸಾಹಿತ್ಯ, ಸಂಸ್ಕೃತಿ ಒಳಪಟ್ಟಾಗೆ ಕಾರ್ಯ ನಿರ್ವಹಿಸುತ್ತೇವೆ ಕಾರ್ಯಾಗಾರಗಳನ್ನು ನಡೆಸುತ್ತೇವೆ ಎಂದರು. ಬಂಜಾರ ಸಾಹಿತ್ಯ ಹಾಗೂ ಬಂಜಾರ ಕಸೂತಿ ಇತಿಹಾಸದ ಬಗ್ಗೆ ತಿಳಿಸಿದರು.
ಕಾಂತಾ ನಾಯಕ್ ಅವರು ಕೂಡ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಬಂಜಾರದ ಕೌಶಲ್ಯವನ್ನು ಬೆಳೆಸುವ ನಿಟ್ಟಲ್ಲಿ ಬಂಜಾರ ಸಂಸ್ಕೃತಿ ಮತ್ತು ಬಾಷಾ ಅಕಾಡೆಮಿ ಜೊತೆ ಸಹಯೋಗದೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದರು.
ಶ್ರೀನಿವಾಸ ನಾಯಕ್ ಹಾಗೂ ಗೋವಿಂದಸ್ವಾಮಿ ಅವರು ವಿಭಿನ್ನ ರಂಗದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.
ನಿರಂತರ ಅಕಾಡೆಮಿಯು ಸಮಯ ವ್ಯರ್ಥ ಮಾಡದೆ ಒಂದಲ್ಲ ಒಂದು ಕಾರ್ಯಾಗಾರಗಳು , ವಿಚಾರ ಸಂಕಿರಣಗಳು, ಕಾವ್ಯ , ಸಾಹಿತ್ಯ , ನಾಟಕ, ರಚನಾ ಕಮ್ಮಟ್ಟಗಳನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳೂ, ಎಲ್ಲಾ ಕಾಲೇಜುಗಳಲ್ಲಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಕಾಲೇಜಿನ ವಿದ್ಯಾರ್ಥಿ ಎನ್ನುವುದಕ್ಕೆ ಹೆಮ್ಮೆ ಅನಿಸುತ್ತದೆ. ಹೀಗೆ ಇವರು ದೊಡ್ಡ ಸಾಧನೆ ಮಾಡಲಿ ಎಂದು ತಿಳಿಸಿದರು.
ಪ್ರಶಾಂತ್ ಹೆಬ್ಬಸೂರು ಅವರು ಮಾತನಾಡಿ, ದೊಡ್ಡ ನಾಟಕ ರಂಗಾಯಣ ನಾಟಕ ನಟಿಸಿದಾಗ, ತಯಾರಿಸಿದಾಗ ಡಾ. ಗೋವಿಂದಸ್ವಾಮಿ ಅವರು ನಾಟಕದಲ್ಲಿ ಕೆಲಸ ಮಾಡುತ್ತ ಬಂಜಾರ ಕಸೂತಿ ಬಗ್ಗೆ ನಮಗೆ ತಿಳಿಸಿ ಪುಸ್ತಕದ ಫಲವಾಗಿ ನಾವು ಸಂಶೋದನೆಯನ್ನು ಮಾಡಿ ಬಂಜಾರ ಗೋರ್ ಮಾಟಿ ನಾಟಕವನ್ನು ಯಶಸ್ವಿಯಾಗಿ ಇದರ ವೇಷಭೂಷಣವನ್ನು ವಿನ್ಯಾಸಗೊಳಿಸಿದಾಗ ಕಲಿತ ಅನುಭವದಿಂದಾಗಿ ಇಲ್ಲಿ ಕಸೂತಿಯಲ್ಲಿ ನಾವು ಕೆಲಸ ಮಾಡಲು ಸಾಧ್ಯವಾಗಿತು ಎಂದರು.
ವಿದ್ಯಾರ್ಥಿಗಳು ಅತ್ಯುತ್ತಮವಾದ ಕಸೂತಿಯ ಕರ್ಚಿಫ್ ಗಳು, ಬಟ್ಟೆ ಕಸೂತಿಯನ್ನು ತಯಾರಿಸಿ ಖುಷಿಪಟ್ಟರು.



