ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರಿಂದ ಸ್ಥಾಪಿತವಾದ “ಕನ್ನಡ ಚಲನಚಿತ್ರ ಕಲಾವಿದರ ಸಂಘ” ಕ್ಕೆ “ಕರ್ನಾಟಕ ಸಹಕಾ ಸಂಘಗಳ ಕಾಯ್ದೆ, 1959” ( Karnataka Co-operative Societies Act, 1959) ರ ನಿಯಮಗಳನ್ವಯ ಪ್ರತಿ ವರ್ಷ ಕಡ್ಡಾಯವಾಗಿ ನಡೆಯಲೇಬೇಕಿದ್ದ ಸಂಘದ “ವಾರ್ಷಿಕ ಚುನಾವಣೆ”, ಕನಿಷ್ಠ ಒಂದು “ಸರ್ವ ಸದಸ್ಯರ ಸಾಮಾನ್ಯ ಸಭೆ” ಗಳನ್ನು ಕಳೆದ 16 ವರ್ಷಗಳಿಂದ ನಡೆಸದೇ ಹಾಗೂ ಪ್ರತಿ ವರ್ಷ “ಸಹಕಾರ ಸಂಘಗಳ ಉಪ ನಿಬಂಧಕರು” ಕಛೇರಿಗೆ ಸಲ್ಲಿಸಲೇಬೇಕಾದ “ವಾರ್ಷಿಕ ಲೆಕ್ಕ ಪರಿಶೋಧನಾ ವರದಿ” ( Annual Audit Report) ಅನ್ನು 2008 ರಿಂದ ಇದುವರೆಗೆ ಸಲ್ಲಿಸದೇ ಸದರಿ “ಕನ್ನಡ ಚಲನಚಿತ್ರ ಕಲಾವಿದರ ಸಂಘ” ದ ಹಾಲಿ ಪದಾಧಿಕಾರಿಗಳು (ಖಜಾಂಚಿ ದೊಡ್ಡಣ್ಣ ಸೇರಿದಂತೆ) ಕಾನೂನಿನ ನಿಯಮಗಳಿಗೆ ಕವಡೆ ಕಾಸಿನಷ್ಟೂ ಬೆಲೆ ಕೊಡದೆ ಅಕ್ಷಮ್ಯ ಅಪರಾಧ ಎಸಗಿರುವ ಹಿನ್ನೆಲೆಯಲ್ಲಿ ಸದರಿ ಸಂಘದ ಹಾಲಿ ಪದಾಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ 14/08/2024 ರಂದು “ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳು” ಇವರಿಗೆ ದಾಖಲೆಗಳ ಸಹಿತ ದೂರನ್ನು ನೀಡಲಾಗಿತ್ತು.

ದೂರನ್ನು ಗಂಭೀರವಾಗಿ ಪರಿಗಣಿಸಿದ “ಜಿಲ್ಲಾ ಸಂಘಗಳ ನೊಂದಣಾಧಿಕಾರಿಗಳು ಮತ್ತು ಸಹಕಾರ ಸಂಘಗಳ ಉಪ ನಿಬಂಧಕರು” – ಇವರು ದಿನಾಂಕ 19/08/2024 ರಂದು Notice ಅನ್ನು ಜಾರಿ ಮಾಡಿ ” 15 ದಿನಗಳ ಒಳಗಾಗಿ ಲಿಖಿತ ವಿವರಣೆ ಮತ್ತು ದಾಖಲಾತಿಗಳನ್ನು ಸಲ್ಲಿಸಬೇಕು” ಎಂದು ಅಧ್ಯಕ್ಷರು / ಕಾರ್ಯದರ್ಶಿ , ಕನ್ನಡ ಕಲಾವಿದರ ಸಂಘ, ಚಾಮರಾಜಪೇಟೆ, ಬೆಂಗಳೂರು- 560018 ಇವರಿಗೆ ಸೂಚಿಸಿದೆ.
– ರಮೇಶ್ ಎನ್.ಆರ್., ಅಧ್ಯಕ್ಷ, ಭ್ರಷ್ಟಾಚಾರ ವಿರೋಧಿ ವೇದಿಕೆ


