ಕಳೆದ ಹತ್ತು ದಿನಗಳಿಂದ ಫೇಸ್‌ಬುಕ್‌ನ ನನ್ನ ಗೆಳೆಯ-ಗೆಳತಿಯರ ವಾಲುಗಳು ‘ತಂಗಲಾನ್’ ಮತ್ತು ‘ವಾಳೈ’ ಸಿನಿಮಾಗಳ ಕುರಿತು ಮೆಚ್ಚುಗೆ, ಪ್ರಶಂಸೆ, ಚರ್ಚೆಗಳಿಂದ ತುಂಬಿಹೋಗಿವೆ. ತಮಿಳಿನ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಸಿನಿಮಾಗಳ ಬಗ್ಗೆ ಯಾಕೆ ಈ ಮಟ್ಟದ ಚರ್ಚೆ ಆಗುತ್ತಿದೆ ಎನ್ನುವುದಕ್ಕೆ ಕಾರಣ ಅವರು ಕೇವಲ ‘ತಮಿಳು’ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಲ್ಲ. ಈ ಇಬ್ಬರೂ ಭಾರತೀಯ ಸಿನಿಮಾರಂಗ ನೂರು ವರ್ಷಗಳ ತನ್ನ ಇತಿಹಾಸದಲ್ಲಿ ‘ಜಾತಿ’ ಎನ್ನುವ ಭಾರತೀಯ ಸಮಾಜದ ವಾಸ್ತವವನ್ನು ಮರೆಮಾಚಿದ್ದರ ಹಿಂದಿನ ರಾಜಕಾರಣದ ಮೇಲೆ ಸೇಡು ತೀರಿಸಿಕೊಳ್ಳುವವರಂತೆ ಮಾಡುತ್ತಿರುವ ‘ಜಾತಿ ಪ್ರಶ್ನೆ’ಯ ಸಿನಿಮಾ ರಾಜಕಾರಣದ ಕಾರಣಕ್ಕೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಳೆದ ಹತ್ತು ವರ್ಷಗಳಲ್ಲಿ ಮರಾಠಿಯ ನಾಗರಾಜ್ ಮಂಜುಳೆ, ತಮಿಳಿನ ಪ. ರಂಜಿತ್ ಮತ್ತು ಮಾರಿಸೆಲ್ವರಾಜ್ ತರದ ನಿರ್ದೇಶಕರ ಸಿನಿಮಾಗಳು ಕೇವಲ ಕರ್ನಾಟಕದಲ್ಲಲ್ಲಷ್ಟೇ ಅಲ್ಲ ಇಡೀ ಭಾರತದ ಮಟ್ಟದಲ್ಲಿ, ಅಷ್ಟೇಕೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಒಳಗಾಗುತ್ತಿವೆ.
ಅಕಾಡೆಮಿಕ್ ಮತ್ತು ಬೌದ್ಧಿಕ ವಲಯ ಕೂಡ ಇವರ ಸಿನಿಮಾಗಳನ್ನು ಜಾತಿ ಪದ್ಧತಿಯನ್ನು ಅರ್ಥಮಾಡಿಕೊಳ್ಳುವ ಪಠ್ಯಗಳಾಗಿ ನೋಡುತ್ತಿವೆ. ಈ ಮೂವರ ಸಿನಿಮಾಗಳು ಕಟ್ಟಿಕೊಡುತ್ತಿರುವ Anti-Caste aesthetics, ಮುರಿಯುತ್ತಿರುವ Upper caste gaze ನ ಅರಿವಿರುವ ಯಾರೂ ಇವರನ್ನು ಭಾಷೆಗೆ ಕಟ್ಟಿಹಾಕಲಾರರು. ‘ತಂಗಲಾನ್’, ‘ವಾಳೈ’ ತರದ ಸಿನಿಮಾಗಳನ್ನು ಕೇವಲ ತಮಿಳು ಭಾಷೆಯ ಚಿತ್ರಗಳು ಅಂತ ಸೀಮಿತಗೊಳಿಸಿ ಮಾತನಾಡುವುದು ಈ ಸಿನಿಮಾಗಳ Artistic value, ideology, political understanding ಅನ್ನು ನಗಣ್ಯಗೊಳಿಸಿದಂತೆ ಅಥವಾ ಈ ಸಿನಿಮಾಗಳು ಎತ್ತುತ್ತಿರುವ ಜಾತಿ ಅಸಮಾನತೆಯ ಪ್ರಶ್ನೆಗಳಿಗೆ ಕುರುಡಾದಂತೆ.
ಕನ್ನಡವನ್ನು ಕೇವಲ ‘ಭಾಷೆ’ ಅಷ್ಟೇ ಅಂತ ಸೀಮಿತಗೊಳಿಸಿ ಮಾತನಾಡುವುದು. ಕನ್ನಡ ಸಿನಿಮಾದ ಬಗ್ಗೆ ಅಭಿಮಾನ ಇದ್ದರೆ ಮಾತ್ರ ಕನ್ನಡಿಗರಾಗುವುದಕ್ಕೆ ಲಾಯಕ್ಕು ಎನ್ನುವ toxic ಚಿಂತನೆಗಳನ್ನು ಹರಿಬಿಡುವುದು ಕನ್ನಡ ಮಾತನಾಡುವ ಸಮುದಾಯಗಳಿಗೆ ಮಾಡುವ ಅವಮಾನ. ಕನ್ನಡ ಮಾತನಾಡುವ ಸಮುದಾಯಗಳು ಎದುರಿಸುವ ಎಷ್ಟೋ ಸಮಸ್ಯೆಗಳ ಬಗ್ಗೆ ಕುರುಡಾಗಿದ್ದುಕೊಂಡು ಕೇವಲ ಕನ್ನಡ ಸಿನಿಮಾ ಉಳಿಸುವ ಹೋರಾಟದ ಮಾತನಾಡುವವರನ್ನು ಕಂಡರೆ ಉರಿದು ಹೋಗುತ್ತದೆ.
‘ತಂಗಲಾನ್’, ‘ವಾಳೈ’ ತರದ ಸಿನಿಮಾಗಳು ಯಾವ ಭಾಷೆಯಲ್ಲಿ ಬಂದರೂ ಅವುಗಳಿಗೆ ಇಷ್ಟೇ ಮಹತ್ವ ಇದೆ. ಯಾಕೆಂದರೆ ಈ ಸಿನಿಮಾಗಳ ಮಹತ್ವ ಇರುವುದು ಅವು ಮೈದುಂಬಿಕೊಂಡಿರುವ ಅನುಭವಲೋಕ, ಸಂವೇದನೆ ಮತ್ತು ಸಾಮುದಾಯಿಕ ಪ್ರಜ್ಞೆಯಲ್ಲಿಯೇ ಹೊರತು ಈ ಸಿನಿಮಾಗಳನ್ನು ಜನರಿಗೆ ತಲುಪಿಸಲು ಬಳಸಿಕೊಂಡಿರುವ ಭಾಷೆಯೆನ್ನುವ toolನಲ್ಲಲ್ಲ.
ರಂಜಿತ್, ಮಾರಿಸೆಲ್ವರಾಜ್ ಸಿನಿಮಾಗಳನ್ನು ತಮಿಳು ಭಾಷೆಗೆ ಸೀಮಿತಗೊಳಿಸಿ ಮಾತನಾಡುವವರು ಸತ್ಯಜಿತ್ ರೇ, ಮಣಿರತ್ನಂ ಸಿನಿಮಾಗಳ ಬಗ್ಗೆ ಇದೇ ಪ್ರಶ್ನೆಗಳನ್ನು ಎತ್ತುತ್ತಾರೆಯೇ ? ಬಹುಶಃ ಇಲ್ಲ! ಯಾಕೆಂದರೆ ಮೇಲುಜಾತಿಯ ಸಿನಿಮಾ ನಿರ್ದೇಶಕರ ಸಿನಿಮಾಗಳ ‘ಕಲಾತ್ಮಕತೆ’.
ಸೂಕ್ಷ್ಮತೆ ಇರುವವರು, ಸಂವೇದನಾಶೀಲರೂ ಅಂದುಕೊಂಡವರು ಕೂಡ Linguistic Chauvinistಗಳ ರೀತಿ ರಂಜಿತ್, ಮಾರಿಸೆಲ್ವರಾಜ್ ಸಿನಿಮಾಗಳ ಬಗ್ಗೆ ಬಂದ ಮೆಚ್ಚುಗೆ ಸ್ವೀಕರಿಸಲು ಕಸಿವಿಸಿ ಪಡುತ್ತಾರೆ ಅಂದಾಗ ಇಲ್ಲಿ ಕೇವಲ ‘ಭಾಷೆ’ ನೆಪಮಾತ್ರ ಅನಿಸಿ ‘ಜಾತಿ’ ಎಷ್ಟು ಕೆಲಸ ಮಾಡುತ್ತದೆ ಅನಿಸುತ್ತದೆ.
– ವಿ.ಎಲ್.ನರಸಿಂಮಮೂರ್ತಿ, ಸಾಮಾಜಿಕ ಹೋರಾಟಗಾರರು




