ಮಾನ್ಯ ಸೋಮಣ್ಣನವರು ಶ್ರೀ ಶಿವಕುಮಾರ ಸ್ವಾಮೀಜಿರವರ ಹೆಸರನ್ನು ಯಾವುದಾದರೂ ಒಂದು ಪ್ರಮುಖ ರೈಲಿಗೆ ನಾಮಕರಣ ಮಾಡಿ. ನಡೆದಾಡುವ ದೇವರು ಎಂಬ ಮಾತಿನೊಂದಿಗೆ ಕೋಟ್ಯಾಂತರ ಜನರ ಮನಸ್ಸಿನಲ್ಲಿ ಅಪಾರವಾದ ಭಕ್ತಿಯ ಆರಾಧ್ಯ ದೇವರಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಇವರ ಬಗ್ಗೆ ಅಪಾರವಾದಂತಹ ಗೌರವ ಮತ್ತು ಭಕ್ತಿಯನ್ನು ಹೊಂದಿರುವರು ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರು ಮತ್ತು ವಿಶೇಷವಾಗಿ ಕೇಂದ್ರದ ರೈಲ್ವೆ ರಾಜ್ಯ ಸಚಿವರಾಗಿರುವ ಸೋಮಣ್ಣನವರು.
ಸೋಮಣ್ಣನವರು ಈಗಲಾದರೂ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿರವರ ಹೆಸರುನ್ನು ಯಾವುದಾದರೂ ಒಂದು ಪ್ರಮುಖವಾದಂತಹ ರೈಲಿಗೆ ನಾಮಕರಣ ಮಾಡಬೇಕು. ಹಾಗೆ ಮಾಡಿದರೆ ಇದರಿಂದ ಕೋಟ್ಯಾಂತರ ಭಕ್ತರಿಗೆ ಸಂತೋಷವಾಗುತ್ತದೆ ಮತ್ತು ಇವರ ಹಿರಿಮೆಯನ್ನ ಮತ್ತಷ್ಟು ಜನರಿಗೆ ಮುಟ್ಟಿಸಿದಂತಾಗುತ್ತದೆ. ಇವರಿಗೆ ಭಾರತರತ್ನ ಗೌರವವೂ ದೊರೆತಿಲ್ಲ. ಈಗಲಾದರೂ ಮಾನ್ಯ ಸೋಮಣ್ಣನವರು ಪ್ರಮುಖವಾದ ರೈಲಿಗೆ ಇವರ ಹೆಸರನ್ನು ನಾಮಕರಣ ಮಾಡಿ ಮಾಡಿ ಪದೇಪದೇ ಇವರ ಹೆಸರನ್ನು ಸ್ಮರಿಸಿಕೊಳ್ಳುವಂತೆ ಮಾಡಬೇಕೆಂದು ಕೋರಿಕೊಳ್ಳುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




