ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಜನ್ಮ ದಿನಾಚರಣೆ

4 years ago

ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಜನ್ಮ ದಿನಾಚರಣೆ ಮತ್ತು ಶಿವಯೋಗಿ ಕೃತಿ ಲೋಕರ್ಪಣೆ ಸಮಾರಂಭ

ಬೆಂಗಳೂರು: ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಆದರ್ಶ, ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಆಳವಡಿಕೊಳ್ಳಿ ಎಂದು ಸಚಿವ ವಿ.ಸೋಮಣ್ಣ ಕರೆ ನೀಡಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಮೂಡಲಪಾಳ್ಯ ವಾರ್ಡ್ ನಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಜನ್ಮ ದಿನಾಚರಣೆಯಲ್ಲಿ ಮಾತಾಡಿದ ಅವರು,

ಇದು ಅಪರೂಪದ ಪವಿತ್ರ ಕಾರ್ಯಕ್ರಮ. ಅನ್ನ, ಅಕ್ಷರ, ಆಶ್ರಯ ನೀಡಿ 6 ಕೋಟಿ ಕನ್ನಡಿಗರ ಮನದಲ್ಲಿ ನೆಲೆ ನಿಂತಿರುವ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರು ಹುಟ್ಟಿದ ದಿನ. ಮಹಾನ್ ಸಂತ, ಮಹಾನ್ ತಪಸ್ವಿ ಶಿವಕುಮಾರ ಸ್ವಾಮಿಜೀರವರ ಆದರ್ಶ, ಸಿದ್ದಾಂತವನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಿ ಸಾಧನೆ ಮಾಡಲು ಸಾಧ್ಯ ಎಂದರು.

ಶಿವಕುಮಾರ ಮಹಾಸ್ವಾಮಿಜೀಗಳ ಸಂದೇಶಗಳನ್ನು ಹೇಳಿದಾಗ ಮನಸ್ಸಿಗೆ ನೆಮ್ಮದ್ದಿ ಶಾಂತಿ ಲಭಿಸುತ್ತದೆ.
ಸಿದ್ದಗಂಗಾ ಮಠಕ್ಕೆ ಕಳೆದ 40 ವರ್ಷಗಳಿಂದ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಭಂದವಿದೆ.
ರಾಜಕೀಯ ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿರವರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದ, ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ ಎಂದರು.

ದಿವ್ಯಸಾನಿಧ್ಯವನ್ನು ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ವಹಿಸಿಕೊಂಡರು. ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಅನಂತ್ ಕುಮಾರ್, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ವಿ.ಸೋಮಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ದಾಸೇಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಲೇಖಕರಾದ ಡಾ.ಸಂತೋಷ್ ಹಾನಗಲ್ ರವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ನಂತರ ಶಿವಯೋಗಿ ಕೃತಿ ಲೋಕಾರ್ಪಣೆ ಮಾಡಿದರು.

ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿರವರು ಮಾತನಾಡಿ, ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿರವರು ಮಹಾನ್ ಶಿವಯೋಗಿ. ಸಿದ್ದಗಂಗಾ ಮಠ ಮತ್ತು ನಿಡಿಮಾಮಿಡಿ ಮಠಕ್ಕೆ ಅವಿನಾಭಾವ ಸಂಭಂದವಿದೆ ಎಂದರು.

ದಾಸೋಹ ಸೋಜಿಗ ಎಂದರೆ ಸಿದ್ದಗಂಗಾ ಶ್ರೀಗಳು. ಗಗನಕ್ಕೆ ಗಗನವೇ ಹೋಲಿಕೆ ಎಂಬಂತೆ ದಾಸೋಹಕ್ಕೆ ಶಿವಕುಮಾರ ಸ್ವಾಮೀಜಿಗಳೆ ಆದರ್ಶ, ಸ್ಪೂರ್ತಿಯಾಗಿದ್ದಾರೆ. ದೇಶದ ಮಹಾನ್ ಸಂತರು, ಶಿವಕುಮಾರ ಸ್ವಾಮೀಜಿರವರು ಭಾರತ ಕಂಡ ಸಾರ್ವಕಾಲಿಕ ಶೇಷ್ಠ ಸ್ವಾಮೀಜಿಗಳು ಎಂದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಡಾ.ಎಸ್.ರಾಜು, ಮೋಹನ್ ಕುಮಾರ್, ವಾಗೇಶ್,
ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ಜಯರತ್ನ, ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ಪಾಲ್ಗೊಂಡಿದ್ದರು.

Leave a Reply