ಕಾವ್ಯ ಸಂಸ್ಕೃತಿ ಯಾನ ಸರ್ವಾಧ್ಯಕ್ಷರಾಗಿ ಡಾ ಮೂಡ್ನಾಕೂಡು ಚಿನ್ನಸ್ವಾಮಿ ಆಯ್ಕೆ 

2 years ago

ಚಾಮರಾಜನಗರ: ಬೆಂಗಳೂರಿನ ರಂಗಮಂಡಲ ಹಾಗು ರಂಗವಾಹಿನಿ (ರಿ) ಸಂಸ್ಥೆಯ ಸಹಯೋಗದಲ್ಲಿ ಜನರೆಡೆಗೆ ಕಾವ್ಯ ಎಂಬ ಧ್ಯೇಯೋದ್ದೇಶದೊಂದಿಗೆ ಇದೆ ಜುಲೈ 21 ಭಾನುವಾರ ಇಲ್ಲಿನ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆಸಲು ಉದ್ದೇಶಿಸಿರುವ ಪ್ರಥಮ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮದ ಸರ್ವಾಧ್ಯಕ್ಷರನ್ನಾಗಿ ಖ್ಯಾತ ಕವಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಮಹಾಮನೆ ಹಾಗು ರಂಗವಾಹಿನಿ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply