ಚಾಮರಾಜನಗರ: ಕಾವ್ಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವುದು, ಕಾವ್ಯದ ಓದುಗರನ್ನು ಕೇಳುಗರನ್ನು ಸಮರ್ಥವಾಗಿ ಹಾಗು ಸುಲಭವಾಗಿ ತಲುಪುವುದು ಮತ್ತು ಸಹೃದಯ ಓದುಗರನ್ನು ಕಾವ್ಯದೆಡೆಗೆ ಸೆಳೆಯುವ ಉದ್ದೇಶದಿಂದ ಬೆಂಗಳೂರಿನ ರಂಗಮಂಡಲ ಹಾಗೂ ಚಾಮರಾಜನಗರ ರಂಗ ವಾಹಿನಿ (ರಿ) ಸಂಸ್ಥೆಯ ಸಹಕಾರದೊಂದಿಗೆ ಜುಲೈ 3ನೇ ಭಾನುವಾರ ಒಂದು ದಿನದ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಜಿಲ್ಲೆಯ ಕವಿ ಹಾಗೂ ಕವಿಯತ್ರಿಯರು ಸೇರಿದಂತೆ ವಿಶೇಷವಾಗಿ ಜಿಲ್ಲೆಯ ಸ್ನಾತಕೋತ್ತರ, ಪದವಿ, ಪದವಿ ಪೂರ್ವ ವಿದ್ಯಾರ್ಥಿ ಕವಿಗಳಿಗೆ ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು.
ಕಾವ್ಯ ಸಂಸ್ಕೃತಿ ಯಾನದಲ್ಲಿ ಭಾಗವಹಿಸುವ ಕವಿಗಳಿಗೆ ಉಚಿತ ಊಟ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಯಾಣ ಭತ್ಯೆ ನೀಡುವುದಿಲ್ಲ. ಈ ಯಾನದಲ್ಲಿ ಹತ್ತಕ್ಕೂ ಹೆಚ್ಚು ನಾಡಿನ ಪ್ರಸಿದ್ಧ ಹಿರಿಯ ಕವಿಗಳು ಭಾಗವಹಿಸಲಿದ್ದಾರೆ.
ಈ ಕಾವ್ಯ ಸಂಸ್ಕೃತಿ ಯಾನದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರುಗಳನ್ನು ಪ್ರಧಾನ ಸಂಚಾಲಕ ಡಿ.ಬಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731,ಜಿಲ್ಲಾ ಸಂಚಾಲಕರಾದ ಸ್ವಾಮಿ ಪೊನ್ನಾಚಿ 998087186, ಸಿಎಂ ನರಸಿಂಹಮೂರ್ತಿ 9916115263 ಇವರನ್ನು ಸಂಪರ್ಕಿಸಲು ಕೋರಲಾಗಿದೆ.




