ಲಕ್ಷಾಂತರ ರೂಪಾಯಿ ದೋಚಿದ ಲಿವಿಂಗ್ ಟುಗೆದರ್ ಜೋಡಿ

3 years ago

ಬೆಂಗಳೂರು: ಬಾಡಿಗೆ ಮನೆಯಲ್ಲಿ ಸಹಜೀವನ ( ಲಿವಿಂಗ್ ಟುಗೆದರ್​)ದಲ್ಲಿದ್ದ ಖತರ್ನಾಕ್ ಜೋಡಿ ಮಾಲೀಕರ ಮನೆಯನ್ನೇ ಲೂಟಿ ಮಾಡಿದ ಘಟನೆ ಸುಬ್ರಮಣ್ಯಪುರದ ಎಜಿಎಸ್ ಲೇಔಟ್​ನಲ್ಲಿ ನಡೆದಿದೆ.

ಲೂಟಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸುಬ್ರಮಣ್ಯಪುರ ಪೊಲೀಸರು ಲೂಟಿ ಮಾಡಿದ್ದ ಲಿಖಿತ ಹಾಗೂ ಸುಮಂತ್ ಜೋಡಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.


ಇವರಿಬ್ಬರು ಬಾಡಿಗೆ ಮನೆ ಪಡೆದುಕೊಂಡು ಲಿವಿಂಗ್​ ಟುಗೆದರ್​ನಲ್ಲಿ ಪ್ರೇಮಲತ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದರು. ಮನೆ ಕಳ್ಳತನ ಮಾಡಲು ಯೋಚಿಸಿ ಬರೋಬ್ಬರಿ ನಾಲ್ಕು ತಿಂಗಳು ಲಿಖಿತ ಹಾಗೂ ಸುಮಂತ್ ಅಲ್ಲೇ ವಾಸವಿದ್ದರು. ನಾಲ್ಕೂವರೆ ತಿಂಗಳಿಂದ ಮಾಲೀಕನ ಚಲನ ವಲನ ವೀಕ್ಷಿಸಿದ್ದ ಜೋಡಿ ನಂತರ ಮನೆ ಖಾಲಿ ಮಾಡಿದ್ದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕನ ಮನೆಯಲ್ಲಿ ಕಳ್ಳತನ ಮಾಡಿದ್ದು, ಆರೋಪಿಗಳ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಮನೆ ಮಾಲೀಕ ಪ್ರೇಮಲತ ಬಾಡಿಗೆ ಜಾಸ್ತಿ ಬರಲಿದೆ ಎಂದು ಲಿವಿಂಗ್ ಟುಗೆದರ್ ಜೋಡಿಗೆ ಮನೆ ಬಾಡಿಗೆ ಕೊಟ್ಟಿದ್ದರು. ಆದರೆ ಖತರ್ನಾಕ್​ ಜೋಡಿಗಳು ಮಾಲೀಕನ ಚಲನ ವಲನ ಗಮನಿಸಿ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಚಿನ್ನದ ಒಡವೆಗಳನ್ನ ಮಾರಿ ಶಿವಮೊಗ್ಗದಲ್ಲಿದ್ದರು.

ಕದ್ದ ಹಣ ಖಾಲಿಯಾದ ಹಿನ್ನೆಲೆಯಲ್ಲಿ ಮತ್ತೊಂದು ಕೃತ್ಯವೆಸಗಲು ಸಿದ್ದರಾಗಿದ್ದ ಈ ಜೋಡಿಯನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆ ವೇಳೆ ಮತ್ತೊಂದು ಕೃತ್ಯವೆಸಗಲು ಜೋಡಿ ಸಿದ್ಧವಾಗಿರುವುದು ಪತ್ತೆಯಾಗಿದೆ.

Leave a Reply