ಬೆಂಗಳೂರು: ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಆದಾಯ ತೆರಿಗೆ ಮರುಪಾವತಿ ಪಡೆಯಲು ಪ್ರಯತ್ನಿಸಿರುವ 1,441 ಗಂಭೀರ ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದೆ. ಈ ಮೂಲಕ 110 ಕೋಟಿ ಮೊತ್ತದ ತೆರಿಗೆ ಮರುಪಾವತಿಗೆ ಬೇಡಿಕೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
- ನಕಲಿ ದಾಖಲೆ ಸೃಷ್ಟಿಸಿ 110 ಕೋಟಿ ರೂ. ತೆರಿಗೆ ಮರುಪಾವತಿಗೆ ಬೇಡಿಕೆ
- 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ: ಎಂ.ಬಿ.ಪಾಟೀಲ್
- ಬಾಕಿ ವೇತನ ಪಾವತಿ , ಕನಿಷ್ಠ ಕೂಲಿ ಜಾರಿ, ಪಿಎಫ್ ಇಎಸ್ಐ ಸೌಲಭ್ಯಕ್ಕಾಗಿ ಹೋರಾಟ
- ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದ ಟೀಕೆ ಏಕೆ?
- ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ
ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಆದಾಯ ತೆರಿಗೆ ಇಲಾಖೆ, ಗುರುತಿಸಲಾದ ತೆರಿಗೆದಾರರಿಗೆ ನೋಟಿಸ್ ಕೊಡಲು ಆರಂಭಿಸಿದೆ. ಮರುಪಾವತಿಗಾಗಿ ಸಲ್ಲಿಸಿರುವ ಕ್ಲೇಮ್ಗಳಿಗೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡುವಂತೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಅಧಿಕಾರಿಗಳ ಅನುಮಾನಕ್ಕೆ ಅನುಗುಣವಾಗಿ, ನಕಲಿ ದಾಖಲೆಗಳನ್ನು ಸಲ್ಲಿಸಿ ಆದಾಯ ತೆರಿಗೆ ರಿಟನ್ಸ್ನಲ್ಲಿ ಮರುಪಾವತಿ ಕೋರುವ ಪ್ರಕರಣಗಳನ್ನು ಹೈರಿಸ್ಕ್ ಅಥವಾ ಗಂಭೀರ ಪ್ರಕರಣಗಳೆಂದು ಗುರುತಿಸಲಾಗಿದೆ.
ಇಂತಹ ಪ್ರಕರಣಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ನೋಟಿಸ್ಗಳಿಗೆ ಕೆಲವರು ಈಗಾಗಲೇ ಪ್ರತಿಕ್ರಿಯಿಸಿದ್ದು, ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಗುಪ್ತಚರ ಮತ್ತು ಅಪರಾಧ ತನಿಖಾ ನಿರ್ದೇಶನಾಲಯದ ಮಾಹಿತಿ ಪ್ರಕಾರ, ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇ 90ರಷ್ಟು ಪ್ರಕರಣಗಳು ವೇತನ ಪಡೆಯುವ ಉದ್ಯೋಗಿಗಳಿಗೆ ಸಂಬಂಧಿಸಿವೆ. ಇನ್ನು ಕೆಲವರು ತಮ್ಮ ಆದಾಯ ತೆರಿಗೆ ಸಲಹೆಗಾರರು ತಪ್ಪಾಗಿ ರಿಟನ್ಸ್ಗೆ ವಿನಾಯಿತಿ ಕೋರಿ ಕ್ಲೇಮ್ ಸಲ್ಲಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಕ್ಲೇಮ್ಗಳ ವಿವರಗಳನ್ನು ಒದಗಿಸುವಂತೆ ಇಲಾಖೆ ಸೂಚನೆ ನೀಡುತ್ತಿದೆ ಎಂದು ಆದಾಯ ಇಲಾಖೆ ತಿಳಿಸಿದೆ.




