ಬೆಂಗಳೂರು: ಆರ್ಥಿಕ ನೆರವು, ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ನಡುವೆಯೂ ರಾಜ್ಯದ ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಮಾಡಬೇಕಾದ 2,186.20 ಕೋಟಿ ರೂಪಾಯಿ ಅನುದಾನ ತಡೆಹಿಡಿದಿದೆ.
- ಭಾರತ ಕೇವಲ ವೈಮಾನಿಕ ಮಾರುಕಟ್ಟೆಯಾಗದೆ, ಜಾಗತಿಕ ಆವಿಷ್ಕಾರದ ಕೇಂದ್ರವಾಗಿ ಬೆಳೆಯಬೇಕು: ಡಾ.ಕೆ.ಸುಧಾಕರ್
- ಮಹಿಳಾ ಮೀಸಲು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನ ಅಂಗೀಕಾರ ನಿರೀಕ್ಷೆ: ಡಿ.ಕೆ.ಶಿವಕುಮಾರ್
- ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಎಸ್.ಎಲ್.ಪಿ.: ಈಶ್ವರ್ ಖಂಡ್ರೆ ಸೂಚನೆ
- ನಕಲಿ ದಾಖಲೆ ಸೃಷ್ಟಿಸಿ 110 ಕೋಟಿ ರೂ. ತೆರಿಗೆ ಮರುಪಾವತಿಗೆ ಬೇಡಿಕೆ
- 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ: ಎಂ.ಬಿ.ಪಾಟೀಲ್
ಕ್ಷುಲ್ಲಕ ಕಾರಣ ನೀಡಿ ಕೇಂದ್ರ ಸರ್ಕಾರ ಅನುದಾನ ತಡೆಹಿಡಿದಿದೆ ಎಂದು ಆರೋಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್.ಎಲ್.ಪಿ.) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರೊಂದಿಗೆ ಸಮಾಲೋಚಿಸಿದ ಅವರು, ರಾಜ್ಯ ಸರ್ಕಾರ ಹಲವು ಮನವಿ ಮಾಡಿದರೂ, ಅಗತ್ಯ ದಾಖಲಾತಿ ಸಲ್ಲಿಸಿದರೂ 2025-26ನೇ ಸಾಲಿನ 2,186.20 ಕೋಟಿ ರೂ. ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಮಾತ್ರ ಉಳಿದಿರುವ ಏಕೈಕ ಮಾರ್ಗ ಎಂದರು.
ರಾಜ್ಯದಲ್ಲಿ ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಕೊರತೆಯಾಗಿದ್ದು ಬರಪರಿಸ್ಥಿತಿ ತಲೆದೋರಿದೆ. ಪಂಚಾಯತಿಗಳಲ್ಲಿ ದುರಸ್ತಿಗೂ ಹಣವಿಲ್ಲ. ಕೇಂದ್ರ ಸರ್ಕಾರ ಈ ರೀತಿ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನೇ ತಡೆ ಹಿಡಿದಿರುವುದು ಸರಿಯಲ್ಲ. ಹೀಗಾಗಿ ವಿಳಂಬ ಮಾಡದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಈ ಹಿಂದೆ ಕೂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯ ಸಮ್ಮತವಾಗಿ ಬಿಡುಗಡೆ ಮಾಡಬೇಕಾದ ಹಣ ಬಿಡುಗಡೆ ಮಾಡಿರಲಿಲ್ಲ. ಆಗ ನ್ಯಾಯಾಲಯದ ಮೊರೆ ಹೋಗಿದ್ದೇವು. ಈ ಪ್ರಕರಣದಲ್ಲೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.




