ಚಿತ್ರದುರ್ಗದಲ್ಲಿ ನೂತನ ಲಿಡ್ಕರ್ ಭವನದಲ್ಲಿ ಲೆದರ್ ಎಂಪೋರಿಯಂ ಪ್ರಾರಂಭ

4 months ago

ಮಕ್ಕಳಿಗಾಗಿ ಲೆದರ್ ಶೂ ಹಾಗೂ ಬ್ಯಾಗ್ ಪರಿಚಯ

ಶೇ.20ರ ರಿಯಾಯಿತಿ ದರದಲ್ಲಿ ಮಾರಾಟ

ಜರ್ಮನ್ ಕಂಪನಿಯೊಂದಿಗೆ ಸಹಯೋಗ

ಗುಣಮಟ್ಟದಲ್ಲಿ ರಾಜಿ ಇಲ್ಲ

ಚಿತ್ರದುರ್ಗ: ಉನ್ನತ ಗುಣಮಟ್ಟದ ಚರ್ಮೋತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲಿಡ್ಕರ್, ಮುಂಬರುವ ದಿನಗಳಲ್ಲಿ ಮಕ್ಕಳಿಗಾಗಿ ಲೆದರ್ ಶೂ ಹಾಗೂ ಬ್ಯಾಗ್ಗರಳನ್ನು ಮಾರಾಟ ಮಾಡಲಿದೆ. ಈ ಮೂಲಕ ಲಿಡ್ಕರ್ ಉತ್ಪನ್ನಗಳಲ್ಲಿ ವೈವಿಧ್ಯತೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ. ವಸುಂಧರಾ.ಕೆ.ಎಂ ಹೇಳಿದರು.

ಹೊಸ ವರ್ಷದ ಆರಂಭದ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಬಳಿ ಇರುವ ಲಿಡ್ಕರ್ ಭವನಕ್ಕೆ ಸ್ಥಳಾಂತರಗೊಂಡಿರುವ ಲಿಡ್ಕರ್ ಲೆದರ್ ಎಂಪೋರಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

1976ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪನೆಯಾದ ಡಾ.ಬಾಬು ಜಗಜೀವನ್ ರಾಮ್ ಚರ್ಮದ ಉತ್ಪನ್ನಗಳ ಅಭಿವೃದ್ಧಿ ನಿಗಮ, ರಾಜ್ಯದ ಪರಿಶಿಷ್ಟ ವರ್ಗದ ಚರ್ಮ ಕುಶಲಕರ್ಮಿಗಳ ಏಳಿಗೆಗೆ ಶ್ರಮಿಸುತ್ತಿದೆ. ಲಿಡ್ಕರ್ ಎನ್ನುವ ಬ್ರಾಂಡ್ನೊಂ್ದಿಗೆ ಉತ್ತಮ ಗುಣಮಟ್ಟದ ಚರ್ಮದ ಚಪ್ಪಲಿ, ಬ್ಯಾಗು, ಪರ್ಸ್, ಬೆಲ್ಟ್ ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ ಸರಾಸರಿ ರೂ.25 ರಿಂದ 30 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಸೇರಿದಂತೆ ಇತರೆ 8 ನಗರಗಳಲ್ಲಿ ಲಿಡ್ಕರ್ ಲೆದರ್ ಎಂಪೋರಿಯಂಗಳನ್ನು ತರೆದು ನೇರವಾಗಿ ಗ್ರಾಹಕರಿಗೆ ಚರ್ಮದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಲಿಡ್ಕರ್ ಲಾಭದ ಹಾದಿಗೆ ಮರಳಿದೆ ಎಂದರು.

ಗುಣಮಟ್ಟದಲ್ಲಿ ರಾಜಿ ಇಲ್ಲ: ಲಿಡ್ಕರ್ ವತಿಯಿಂದ ಚರ್ಮದ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಅತ್ಯುನ್ನತ ಗುಣಮಟ್ಟದ ಚರ್ಮದ ವಸ್ತುಗಳನ್ನು ಸಿದ್ದಪಡಿಸಲಾಗುತ್ತಿದೆ. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ. ಜೊತೆಗೆ ಕುಶಲಕರ್ಮಿಗಳ ಶ್ರಮಕ್ಕೆ ತಕ್ಕ ಬೆಲೆ ದೊರಕಬೇಕು ಎನ್ನುವುದು ನಿಗಮದ ಮುಖ್ಯ ಆಶಯವಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟ ಇರದ ಚರ್ಮದ ವಸ್ತುಗಳು ಅಗ್ಗದ ದರದಲ್ಲಿ ದೊರೆಯಬಹುದು. ಆದರೆ ಅವುಗಳು ಬಹುದಿನಗಳ ಕಾಲ ಬಾಳಿಕೆ ಬರುವುದಿಲ್ಲ. ಹೆಸರಾಂತ ದೇಶಿ ಹಾಗೂ ವಿದೇಶಿ ಚರ್ಮದ ಉತ್ಪನ್ನಗಳ ಬ್ರಾಂಡ್ಗಣಳಿಂತಲೂ ಹೆಚ್ಚಿನ ಗುಣಮಟ್ಟದ ಚರ್ಮದ ಉತ್ಪನ್ನಗಳನ್ನು ಲಿಡ್ಕರ್, ಕಡಿಮೆ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿದೆ. ಗ್ರಾಹಕರು ಸಹ ಲಿಡ್ಕರ್ ಉತ್ಪನ್ನಗಳ ಗುಣಮಟ್ಟಕ್ಕೆ ಮನಸೋತಿದ್ದಾರೆ. ಈ ಹಿಂದಿಗಿಂತಲೂ ಲೆದರ್ ಎಂಪೋರಿಯಂಗಳಲ್ಲಿ ವಹಿವಾಟು ಹೆಚ್ಚಾಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಆನ್ಲೈಲನ್ ಮೂಲಕವೂ ಲಿಡ್ಕರ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಆನ್ ಲೈನ್ ನಲ್ಲಿ ಕೂಡ ತಮಗೆ ಇಷ್ಟಬಂದ ಉತ್ಪನ್ನಗಳನ್ನು ಮನೆಯ ಬಾಗಿಲಿನಲ್ಲಿಯೇ ಪಡೆಯಬಹುದಾಗಿದೆ ಎಂದರು.

ಜರ್ಮನ್ ಕಂಪನಿಯೊಂದಿಗೆ ಸಹಯೋಗ:  ಕೊಲ್ಲಾಪುರಿ ಚಪ್ಪಲಿಗೆ ಜಿ.ಐ. ಮಾರ್ಕಿಂಗ್ ಸ್ಟೇಟಸ್ ಇದ್ದು, ಜರ್ಮನಿಯ ಪ್ರೆಡಾ ಎನ್ನುವ ಹೆಸರಾಂತ ಕಂಪನಿ, ಕೊಲ್ಲಾಪುರಿ ಚಪ್ಪಲಿಗಳನ್ನು ಮಾರಾಟ ಮಾಡಲು ಲಿಡ್ಕರ್ನೊಂಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದ ಕುಶಲಕರ್ಮಿಗಳು ತಯಾರಿಸುವ ಕೊಲ್ಲಾಪುರ ಚಪ್ಪಲಿ ಹಾಗೂ ಇತರೆ ಚರ್ಮದ ಉತ್ಪನ್ನಗಳನ್ನು ಖರೀದಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಕಂಪನಿ ಮುಂದೆ ಬಂದಿದೆ. ಈ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಚರ್ಮ ಉತ್ಪನಗಳ ನಿಗಮಗಳೊಂದಿಗೆ ಒಡಂಬಡಿಕೆಯಾಗಿದೆ ಎಂದರು.

ನಿಗಮದ ಲೆಕ್ಕಪತ್ರಗಳ ವಾರ್ಷಿಕ ಆಡಿಟ್ ಬಾಕಿಯಿದೆ. ಇದನ್ನು ಪೂರೈಸಿ ಸರ್ಕಾರದಿಂದ ಟೆಂಡರ್ನಈಲ್ಲಿ ಭಾಗವಹಿಸಲು ತೆರಿಗೆ ವಿನಾಯತಿ ಕೋರಲಾಗುತ್ತಿದೆ. ಇದು ಸಾಧ್ಯವಾದರೆ ಲಿಡ್ಕರ್ ವತಿಯಿಂದ  ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳ ಮಕ್ಕಳ ಶೂ, ಸಾಕ್ಸ್, ಬ್ಯಾಗ್ಗಕಳನ್ನು ಸರಬರಾಜು ಟೆಂಡರ್ ಪಡೆಯಬಹುದು. ಇದರಿಂದ ಕುಶಲಕರ್ಮಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುತ್ತವೆ. ಇದರೊಂದಿಗೆ ಸಣ್ಣ ಪ್ರಮಾಣದಲ್ಲಿ ಉತ್ಪಾದನ ಘಟಕಗಳನ್ನು ತೆರೆಯಲು ಸಹ ಸರ್ಕಾರದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ಶೇ.20ರ ರಿಯಾಯಿತಿ ದರದಲ್ಲಿ ಮಾರಾಟ: ಚಿತ್ರದುರ್ಗದ ಲಿಡ್ಕರ್ ಭವನದಲ್ಲಿ ಲೆದರ್ ಎಂಪೋರಿಯಂ ಪ್ರಾರಂಭವಾಗಿದ್ದು ಜ.1 ರಿಂದ ಜ.18ವರೆಗೆ ಶೇ.20 ವಿಶೇಷ ರಿಯಾಯಿತಿ ದರದಲ್ಲಿ ಚರ್ಮದ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕು.  ಲಿಡ್ಕರ್ 2010 ರಿಂದಲೂ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಚರ್ಮದ ಉತ್ಪನ್ನಗಳ ತಯಾರಿಕೆ,  ಸ್ವ ಉದ್ಯೋಗ, ತರಬೇತಿ, ಉದ್ಯಮಗಳ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ನಿಗಮದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 62 ಜನರು ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಸಾವಿರಾರು ಕುಶಲಕರ್ಮಿಗಳು ನಿಗಮದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಗ್ರಾಹಕರು ಹೆಚ್ಚು ಹೆಚ್ಚು ಲಿಡ್ಕರ್ ಉತ್ಪನಗಳನ್ನು ಖರೀದಿಸಿ ನಿಗಮಕ್ಕೆ ಬಲ ತುಂಬಬೇಕು ಎಂದು ಕರೆನೀಡಿದರು. 

ಈ ವೇಳೆ ಲಿಡ್ಕರ್ ಉಪಪ್ರಧಾನ ವ್ಯವಸ್ಥಾಪಕ ಪ್ರಾಣೇಶ್, ಹಿರಿಯ ಸಹಾಯಕ ನಾಗರಾಜ, ಜಿಲ್ಲಾ ಸಂಯೋಜಕ ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply