ವೀರಶೈವ, ಲಿಂಗಾಯಿತ ಯುವ ಸಮುದಾಯ ಸ್ವಾವಲಂಬಿ, ಸ್ವಾಭಿಯಾನಿಯಾಗಿ ಬದುಕಲು ಸಮಾವೇಶ
ಜನವರಿ 29ರಿಂದಫೆಬ್ರವರಿ 1ವರೆಗೆ ಅರಮನೆ ಮೈದಾನದಲ್ಲಿ ಆಯೋಜನೆ
ಬೆಂಗಳೂರು: ಅಂತರರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್ ಜನವರಿ 29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರುಗಲಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಅಂತರರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ಸಂತೋಷ್ ಕೆಂಜಾಂಬ, ಟ್ರಸ್ಟಿ ಸತೀಶ್ ಮೂಡಿ, ಸಂಸ್ಥಾಪಕ ಸದಸ್ಯರಾದ ವಿದ್ಯಾ ಪಟೇಲ್, ಶಿವಕುಮಾರ್ ಸರಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾ ಅಧಕಾರಿ ವಿನಯ್ ಮಹದೇವ ಸ್ವಾಮಿ, ಬೆಂಗಳೂರು ನಗರ ಅಧ್ಯಕ್ಷ ಪ್ರತಾಪ್ ಆರಾಧ್ಯ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಕೆಂಚಾಂಬ, ಸ್ವಾವಲಂಬಿ, ಸ್ವಾಭಿಮಾನಿಯಾಗಿ ಬದುಕಬೇಕು ಎಂದರೆ ಸಂಘಟಿತರಗಾಬೇಕು. ಆದ್ದರಿಂದ ನಮ್ಮ ಟ್ರಸ್ಟ್ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಆಯೋಜಿಸಲಾಗಿದೆ ಎಂದರು.
ಜನವರಿ 29ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗಾ ಮಹಾಸ್ವಾಮಿಗಳು ನೇರವೇರಿಸುವರು. ಸಚಿವ ಸಂಪುಟದ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶರಣಗೌಡ ದರ್ಶನಾಪೂರ್ ಸೇರಿದಂತೆ ಇತರ ಗಣ್ಯರುಗಳು ಭಾಗವಹಿಸಲಿದ್ದಾರೆ. 230ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನಮ್ಮ ಸಮುದಾಯದವರು ಮಳಿಗೆಗಳು ಇರಲಿವೆ ಎಂದರು.
ಯುವ ಉದ್ಯಮಿಗಳಿಗೆ ಅನುಕೂಲಕ್ಕೆ ನೆಟ್ ವರ್ಕಿಂಗ್ ಜೋನ್ ಆರಂಭಿಸಿ ಕೈಗಾರಿಕೆ, ವೈದ್ಯಕೀಯ, ಬ್ಯಾಕಿಂಗ್ , ಐ.ಟಿ.ಬಿಟಿ ಉದ್ಯಮಗಳ ಕುರಿತು ಮಾಹಿತಿ ಸಿಗಲಿದೆ. ಉತ್ತರ ಕರ್ನಾಟಕ, ದಕ್ಷಿಣ, ಮೈಸೂರು ಭಾಗದ ವಿಶೇಷ ಖಾದ್ಯ-ತಿನಿಸುಗಳ ಫುಡ್ ಫೆಸ್ಟ್ ಆಯೋಜಿಸಲಾಗಿದೆ. ಅಂದಾಜು 1 ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.
ವೀರಶೈವ, ಲಿಂಗಾಯತ ಸಮುದಾಯದ ಜನತೆ ಆರ್ಥಿಕವಾಗಿ ಸಬಲೀಕರಣರಾಗಬೇಕು, ಸ್ವಾಭಿಮಾನಿ, ಸ್ವಾವಲಂಬಿಯಾಗಿ ವೀರಶೈವ-ಲಿಂಗಾಯಿತ ಸಮುದಾಯ ಹೊರಹೊಮ್ಮಬೇಕು. ಮೇಳದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಎಲ್ಲರು ಭಾಗವಹಿಸಬೇಕಾಗಿ ವಿನಂತಿ ಎಂದರು.
ಫೆಬ್ರವರಿ 1ರಂದು ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಬಸವ ಮರಳಸಿದ್ದಪ್ಪ ಸ್ವಾಮೀಜಿ ಮತ್ತು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕ ವಿಜಯಾನಂದ ಕಾಶಪ್ಪನವರ್, ಶಂಕರ್ ಬಿದರಿ, ಮುರುಗೇಶ್ ನಿರಾಣಿ, ರಾಣಿ ಸತೀಶ್, ವಿಧಾನಪರಿಷತ್ ಸದಸ್ಯ ನವೀನ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.







