ದ್ವೇಷ ಭಾಷಣ ನಿಷೇಧ ಮಸೂದೆಗೆ ಅಂಕಿತ ಹಾಕಬಾರದು: ಬಿಜೆಪಿ ಮನವಿ

5 months ago

ಬೆಂಗಳೂರು: ಕೋಮು ಗಲಭೆ, ಗುಂಪು ಸಂಘರ್ಷ, ಧರ್ಮ ಆಧಾರಿತ ಗಲಭೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೂಪಿಸಿರುವ ದ್ವೇಷ ಭಾಷಣ ನಿಷೇಧ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಬಿಜೆಪಿ ಇದೀಗ ವಿಧಾನ ಮಂಡಲದಲ್ಲಿ ಅಂಗೀಕಾರಗೊಂಡಿರುವ ಮಸೂದೆಗೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದೆ.

ಮಸೂದೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಇದೀಗ ಕಾರ್ಯಕರ್ತರೊಂದಿಗೆ ರಾಜ್ಯದ ಹಲವು ಕಡೆ ಬೀದಿ ಹೋರಾಟ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಹಲವು ಶಾಸಕರು ಮತ್ತು ಸಂಸದರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ನಂತರ ರಾಜಭವನಕ್ಕೆ ತೆರಳಿ ಮಸೂದೆಗೆ ಅಂಕಿತ ಹಾಕದಂತೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ರಾಜ್ಯ ಸರ್ಕಾರ ರೂಪಿಸಿರುವ ದ್ವೇಷ ಭಾಷಣ ನಿಷೇಧ ಮಸೂದೆ ದುರುದ್ದೇಶ ಪೂರ್ವಕದಿಂದ ಮಾಡಿರುವ ಮಸೂದೆ ಆಗಿದೆ ಕೋಮು ಸಂಘರ್ಷ ಗುಂಪುಗಲಭೆ, ಜಾತಿ ಕಲಹಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಬಿಎನ್ಎಸ್ ಕಾಯಿದೆ ಅಡಿಯಲ್ಲಿ ಹಲವಾರು ಅವಕಾಶವಿದೆ ಹೀಗಿದ್ದರೂ ಕೂಡ ರಾಜ್ಯ ಸರ್ಕಾರ ಹೊಸ ಮಸೂದೆ ತಂದಿರುವುದು ಆಘಾತಕಾರಿಯಾದ ಬೆಳವಣಿಗೆಯಾಗಿದೆ ಇದು ಸದುದ್ದೇಶಕ್ಕೆ ಬಳಕೆಯಾಗುವುದಕ್ಕಿಂತಲೂ ಹೆಚ್ಚಾಗಿ ದುರ್ಬಳಕೆ ಆಗುವ ಸಾಧ್ಯತೆ ಇದೆ ರಾಜಕೀಯ ಎದುರಾಳಿಗಳನ್ನು ಹಾಗೂ ತಮ್ಮ ಪ್ರತಿಸ್ಪರ್ಧಿಗಳನ್ನು ತುಳಿದು ಹಾಕಲು ಪೊಲೀಸರ ಮೂಲಕ ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ ಎಂದು ಬಿಜೆಪಿ ಆಘಾತ ವ್ಯಕ್ತಪಡಿಸಿದೆ.

ನಾಗರಿಕ ಸಮಾಜಕ್ಕೆ ಮಾರಕವಾಗುವ ರೀತಿಯಲ್ಲಿ ಈ ಮಸೂದೆಯನ್ನು ಜಾರಿಗೊಳಿಸಿದ್ದು ಯಾವುದೇ ಕಾರಣಕ್ಕೂ ಇದಕ್ಕೆ ಅಂಕಿತ ಹಾಕಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದೆ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದ್ದು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿರುವ ಮಸೂದೆಯನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಬಾರದು ಎಂದು ಮನವಿ ಮಾಡಿದೆ.

ಸರ್ಕಾರಕ್ಕೆ ಇಂಥ ಕಾಯ್ದೆ ತರಬೇಕು ಎನ್ನುವ ಉದ್ದೇಶ ಇದ್ದರೆ ಅದನ್ನು ಜಂಟಿ ಸಂಸದೀಯ ಮಂಡಳಿ ಸಭೆಗೆ ಒಪ್ಪಿಸಲಿ ಅಲ್ಲಿ ಚರ್ಚೆ ಮಾಡಿ ನಿಯಮಾವಳಿಗಳನ್ನು ಪರಿಷ್ಕರಿಸಿ ನಂತರ ಮಸೂದೆ ರೂಪದಲ್ಲಿ ಅನುಮೋದನೆಗಾಗಿ ವಿಧಾನ ಮಂಡಲದಲ್ಲಿ ಮಂಡಿಸಬಹುದಾಗಿದೆ ಎಂದು ಹೇಳಿದೆ.

Leave a Reply