ಹಂಪಿ ವಿಶ್ವವಿದ್ಯಾಲಯದ ಪುಸ್ತಕ ಮಳಿಗೆಯಲ್ಲೊಂದು ಪುಸ್ತಕವಿತ್ತು. ಕೈಗೆತ್ತಿಕೊಂಡೆ ಒಂದೆರಡು ಶಬ್ದಗಳ ಮೇಲೆ ಕಣ್ಣಾಡಿಸಿದೆ. ಶಬ್ದಗಳು ವಾಕ್ಯಗಳಲ್ಲಿ ಬದಲಾದವು. ವಾಕ್ಯಗಳ ಮೇಲಿರುವ ಕಣ್ಣುಗಳು ಆ ಪ್ಯಾರಾವನ್ನು ಓದಿದ್ದವು. ನಿಲ್ಲಿಸಲು ಮನಸ್ಸಾಗಲಿಲ್ಲ. ಪುಟ ಪೂರ್ಣ ಓದಿದೆ. ರ್ಯಾಂಡಮ್ ಆಗಿ ಮತ್ತೊಂದು ಪುಟ ತಿರುವಿದೆ. ಅನುಭವದ ಪುನರಾವರ್ತನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಯಾರು ಬರೆದದ್ದು? ಮುಖ ಪುಟನೋಡಿದೆ. ‘ಕುಲುಮೆ’ ಲೇಖಕರು; ರಹಮತ್ ತರಿಕೇರೆ ಎಂದು ಮುದ್ರಣಗೊಂಡಿತ್ತು. ಪುಸ್ತಕ ಕೊಂಡೆ.
ರಹಮತ್ ತರಿಕೆರೆ ಅವರ ಅನೇಕ ಪುಸ್ತಕಗಳನ್ನು ನನ್ನ ಮುದ್ರಣಾಯದಲ್ಲಿ ಮುದ್ರಿಸಿದ್ದರೂ ಓದಿರಲಿಲ್ಲ. ‘ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬರೆಯುವುದು ಅವರ ಕೆಲಸ, ಬರೆಯಲೇ ಬೇಕಲ್ಲ? ಬರೆದಿರುತ್ತಾರೆ ಬಿಡು’ ಎಂಬ ಉದಾಸೀನ ಹಾಗು ಆಲಸಿತನ.
‘ಕುಲುಮೆ’ ರಹಮತ ಅವರ ಆತ್ಮಕತೆ ಎಂದು ಹೇಳುತ್ತಾರೆ. ಅದು ಆತ್ಮಕತೆಯಲ್ಲ. ಅದೊಂದು ನವರಸಗಳ ಕಾವ್ಯ. ಶೃಂಗಾರ, ಹಾಸ್ಯ, ಸಂಸ್ಕ್ರತಿ, ನಾಡು, ಮನೆ, ಆಕಾಶ, ಪರಿಸರ, ಗೋಳು, ಬಡತನ, ಭಂಡತನ, ರಾಮಾಯಣ, ಮಹಾಭಾರತ, ಪುರಾಣ, ಕುರಾನ, ಬೈಬಲ್ ಎಲ್ಲವೂ ಅದರಲ್ಲಿದೆ. ಅರ್ಜುನನ ಪರಾಕ್ರಮದ ಒಂದು ಶಬ್ದದಿಂದ ಪ್ರಾರಂಭವಾದ ವಾಕ್ಯ ಕೊನೆಗೊಳ್ಳುವುದು ಲೋಕಲ್ ಸಾಬಿಯ ಘಟನೆಯೊಂದಿಗೆ. ಸಾವಿರಾರು ವರ್ಷಗಳ ಹಿಂದೆ ರಚಿಸಲ್ಪಟ್ಟ ಸಾಹಿತ್ಯವನ್ನು ಇಂದಿನ ದಿನಕ್ಕೆ ಸಮೀಕರಿಸುವ ಜಾಣ್ಮೆ! ಓಹ್…..
ಅದೊಂದು ಹೊಸ ಅನುಭವ.
ಅನೇಕ ಕಥೆಗಳು. ನೂರಾರು ದೃಷ್ಟಾಂತಗಳು. ದೃಷ್ಟಾಂತಗಳಲ್ಲಿ ಸ್ವಂತ ಅಕ್ಕನು ಭಾಗಿ, ಅಪ್ಪನೂ ಅದಕ್ಕೆ ಹೊರತಲ್ಲ. ಅಪ್ಪನ ಪ್ರೇಮ, ಅಪ್ಪನ ಅಲೆದಾಟ. ಅವನ ಕೆಲಸದ ದೈತ್ಯ ಶೃದ್ದೆ, ಊಢಾಪೆ, ಅಮ್ಮನ ಬಡತನ, ಜಂಜಾಟ, ಒಂದೆ ಎರಡೆ?
ಒಬ್ಬ ಲೇಖಕನು ಸರ್ವಜ್ಞನಾದಾಗ ಮಾತ್ರ ಜಗತ್ತನ್ನು ಕಾಣಬಲ್ಲ, ಅರಿಯಬಲ್ಲ, ಸ್ವಂತದ್ದು ಪರಕಿಯದು ಎಂದೆನ್ನದೆ, ಕಂಡಿದ್ದನ್ನು ವಿಮರ್ಶಾತ್ಮಕವಾಗಿ ವಿಷ್ಲೇಷಣೆ ಮಾಡಿದಾಗಲೆ ಅವನು ಕವಿಯಾಗುವನು ಅಲ್ಲವೆ? ಸರ್ವಜ್ಞ ಎಂದರೆ ಇದೆಯಾ?
ಪುಸ್ತಕ ರಾತ್ರಿಯೆಲ್ಲ ಓದಿದೆ.
‘ನೀವು ನನಗೆ ಆಶೀರ್ವಾದ ಮಾಡಬೇಕು’ ಎಂದು ಕರೆ ಮಾಡಿದೆ. “ಎನ್ ಸರ್ ನೀವು ಹಿರಿಯರು, ಪ್ರಾಜ್ಞರು” ಎಂದು ಮಜಗುರ ಪಟ್ಟಿತು ಶ್ರೇಷ್ಠ ಜೀವ.
ಘಟನೆ ಆರೇಳು ತಿಂಗಳ ಹಿಂದಿನದು. ಬರೆಯಬೇಕೆಂದರೂ ಬರೆಯಲಾಗಿರಲಿಲ್ಲ. ಇಂದು ಅವರ ಜನ್ಮದಿನವೆಂದು fbಯಲ್ಲಿ ಕಂಡಿತು. ಅರುವಿಗೆ ಬಂದಿದ್ದನ್ನು ಗೀಚಿದೆ.
‘ರಹಮಾನ್ ಸಾಹೇಬರೆ, ನೀವು ನೂರ್ಕಾಲು ಬದುಕಬೇಕು, ನೀವಿದ್ದಷ್ಟು ದಿನ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತಲೇ ಹೋಗುತ್ತದೆ. ಕನ್ನಡ ಭಾಷೆಗೆ ಜಾಗತಿಕ ಸ್ಥಾನ ಮಾನ ದೊರೆಯುತ್ತದೆ’.
ಹುಟ್ಟಬ್ಬದ ಶುಭಾಶಯಗಳು.( ದಾರೂ ಕುಡಿಲಾಕ ಎಲ್ಲಿಗೆ ಬರಬೇಕೆಂದು ಗುಟ್ಟಾಗಿ ಹೇಳಿ.)
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ




