ಬೆಂಗಳೂರು: ಕನ್ನಡದ ಮಹತ್ವದ ಕಾವ್ಯ ಮತ್ತು ನಾಟಕ ಕೃತಿಗಳನ್ನು ಅನುವಾದಿಸಿರುವ ಕೆ.ಎನ್.ವಿಜಯಲಕ್ಷ್ಮಿ ಅವರ ನೆನಪಿನ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ ಥಿಯೇಟರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ 14.12.2025ರಂದು ನಡೆಯಲಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಂಜೆ 4ಕ್ಕೆ
ಉದ್ಘಾಟನೆ
ಶೂದ್ರ ಶ್ರೀನಿವಾಸ್
ಸಂಸ್ಕೃತಿ ಚಿಂತಕರು
ಅಧ್ಯಕ್ಷತೆ
ಶಾಕೀರ ಖಾನಂ
ಅನುವಾದಕಿ ಹಾಗೂ 2023ರ ಕೆ. ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪುರಸ್ಕೃತರು
ಕವಿಗಳು
ಡಾ.ಕಂಚನ್ ಎಂ.ಇ.ಎಸ್.ಕಾಲೇಜ್, ಬೆಂಗಳೂರು
ಡಾ. ನಾಗರತ್ನ ನಾಗಾರ್ಜುನ ಕಾಲೇಜ್, ಬೆಂಗಳೂರು
ಡಾ.ಪ್ರತಿಭಾ ವಿಜಯ ಕಾಲೇಜು, ಬೆಂಗಳೂರು
ಡಾ.ಪುಟ್ಟಣ್ಣ ಸೆಂಟ್ ಅನ್ಸ್ ಕಾಲೇಜ್, ಬೆಂಗಳೂರು
ಡಾ. ಸೌಮ್ಯ ಶೇಷಾದ್ರಿಪುರಂ ಕಾಲೇಜ್, ಬೆಂಗಳೂರು
ಡಾ.ಶ್ರೀ ಲಲಿತ ಆರ್.ಜೆ.ಎಸ್., ಬೆಂಗಳೂರು
ನಜ್ಮುಸೆಹರ್, ಬಿ.ಇ.ಟಿ.ಕಾಲೇಜ್, ಬೆಂಗಳೂರು
ಡಾ.ಸುನಿತಾ ಸರ್ಕಾರಿ ಪದವಿ ಕಾಲೇಜ್, ಬೆಂಗಳೂರು
ಡಾ.ವಿದ್ಯಾ, ಡಾ. ಮನಮೋಹನ್ ಸಿಂಗ್ ಯುನಿವರ್ಸಿಟಿ, ಬೆಂಗಳೂರು
ಡಾ.ಜಯಲಕ್ಷ್ಮಿ ಬಿಷಪ್ ಕಾಟನ್ ಕಾಲೇಜ್, ಬೆಂಗಳೂರು
ಡಾ.ಮಧುರ ನಾಗಾರ್ಜುನ ಕಾಲೇಜ್, ಬೆಂಗಳೂರು
ಡಾ.ಶಶಿಕಲಾ ಸೆಂಟ್ ಫ್ರಾನ್ಸಿಸ್ ಕಾಲೇಜ್, ಬೆಂಗಳೂರು
ಉಷಾರಾಣಿ ಬಾಲ್ವಿನ್ ಕಾಲೇಜ್
ಡಾ.ಹುಸ್ನಾ ಖಾನಂ ಎಂ. ಗೌರ್ಮೆಂಟ್ ಫಸ್ಟ್ ಗ್ರೇಡ್ ಕಾಲೇಜ್, ಕೆಜಿಎಫ್
ಡಾ.ರೂಪಶ್ರೀ ಎಸ್ ಹೊಸಮಠ. ಕೆ ಎಲ್ ಈ ಎಸ್ ನ್ ಸಿ. ಬೆಂಗಳೂರು
ಡಾ.ಮೌಲ, ಕೃಪಾನಿಧಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಬೆಂಗಳೂರು
ಕ್ಯಾಪ್ಟನ್. ರಮೇಶ್ ಎಂ. ಆಚಾರ್ಯ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ ಉಪನಗರ, ಬೆಂಗಳೂರು
ಡಾ. ಸುನಿತಾ ಎಂ ದೇಸಾಯಿ, ಆರ್.ಸಿ.ಕಾಲೇಜು ಬೆಂಗಳೂರು
ಸುನಂದಮ್ಮ ಎನ್ ಜಿ, ಸರ್ಕಾರಿ ಕಾಲೇಜು ಯಲಹಂಕ
ಸ್ಯೆಯದ್ ಬಿಲಾಲ್, ಅಲ್ ಅಮೀನ್ ಕಾಲೇಜು ಬೆಂಗಳೂರು
ಡಾ.ಕುಸುಮ ಎಂ., ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ, ಹಾಸನ
ಸಾಂಬಶಿವ ದಳವಾಯಿ, ಭೀಷ್ಣಹಳ್ಳಿ, ವಿಜಯನಗರ ಜಿಲ್ಲೆ
ಮುದಲ್ ವಿಜಯ್, ಬೆಂಗಳೂರು
ನಿರೂಪಣೆ: ನಿರ್ಮಲ ನಾದನ್
ಪ್ರಶಸ್ತಿ ಪ್ರದಾನ ಹಾಗೂ ಪ್ರಮಾಣ ಪತ್ರ ವಿತರಣೆ
7-00ಕ್ಕೆ
ಪ್ರಶಸ್ತಿ ಪ್ರದಾನ
ಶೂದ್ರ ಶ್ರೀವಾಸ್
ಸಂಸ್ಕೃತಿ ಚಿಂತಕರು
ಅಭಿನಂದನಾ ನುಡಿ
ದಂಡಪ್ಪ
ವಿಮರ್ಶಕರು
ಮುಖ್ಯ ಅತಿಥಿಗಳು
ಕೆ.ಎನ್. ಸಹನಾ
ಪ್ರಾಧ್ಯಾಪಕರು
ಡಾ.ಕೆ.ಎನ್. ಕವನ
ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ
ಕೆ.ಎನ್. ಚಂದನ
ಉಪನ್ಯಾಸಕರು
ಡಾ.ಮಲರ್ ವಿಳಿ
ಅನುವಾದಕಿ ಹಾಗೂ 2024ರ ಕೆ. ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪುರಸ್ಕೃತರು
ಎಂ.ಜಯರಾಮು
ಗೌರವ ಅಧ್ಯಕ್ಷರು
ಸಂಸ ಥಿಯೇಟರ್, ಬೆಂಗಳೂರು
ಉಪಸ್ಥಿತಿ
ಎಂ.ಆರ್. ಕಮಲ
2025ರ ಕೆ. ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪುರಸ್ಕೃತರು
ವಿಜಯಲಕ್ಷ್ಮೀ ಕೆ.ಎನ್. (28.12.1948 -12.07.2002)
ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ವಿರಳ. ಅದರಲ್ಲೂ ಅನುವಾದ ಕ್ಷೇತ್ರಕ್ಕೆ ಮಹಿಳೆಯರು ಕಾಲಿರಿಸುವುದು ಇನ್ನೂ ದುಸ್ತರ. ಇಂತಹ ಕ್ಲಿಷ್ಟಕರ ಕ್ಷೇತ್ರದಲ್ಲಿ ಮಹತ್ವದ ಅನುವಾದಗಳ ಮೂಲಕ ಕನ್ನಡ ಸಂವೇದನೆಯನ್ನು ವಿಸ್ತರಿಸುವ ಕೆಲಸವನ್ನು ವಿಜಯಲಕ್ಷ್ಮೀ ಕೆ.ಎನ್. ಅವರು ನೆರವೇರಿಸಿದ್ದಾರೆ. ಕನ್ನಡಕ್ಕೆ ಅಪರಿಚಿತವಾಗಿದ್ದ ಚೀನೀ ಜಾನಪದ, ನಾಟಕ, ಕತೆ ಮತ್ತು ಕಾವ್ಯಗಳನ್ನು ಅನುವಾದಿಸುವ ಮೂಲಕ ಪಾಶ್ಚಾತ್ಯ ಕಥನ ಮಾದರಿ, ರಂಗಪ್ರಯೋಗ ಮತ್ತು ಕಾವ್ಯದ ಝಲಕನ್ನು ತೋರಿದ್ದಾರೆ.
ಕ್ರಿಸ್ತ ಪೂರ್ವ ಕಾಲದ ಗ್ರೀಕ್ ಕವಯಿತ್ರಿ ಸ್ಯಾಫೋ ರಚಿಸಿರುವ ಕವಿತೆಗಳನ್ನು ‘ಸ್ಯಾಫೋ ಕಾವ್ಯ’ ಹೆಸರಿನಲ್ಲಿ ಕನ್ನಡಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಲೆಸ್ಬಿಯನ್ ಆಗಿದ್ದ ಸ್ಯಾಫೋಳ ಕಾವ್ಯವನ್ನು ಅನುವಾದಿಸುವ ಮಹತ್ವದ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಿದರು. ಮಡಿವಂತಿಕೆಯ ಭಾರತೀಯ ಸಮಾಜದಲ್ಲಿ ಹೊಸ ಚಿಂತನೆಗಳ ಹರಿವಿಗೆ ಈ ಕೃತಿ ಕಾರಣವಾಗಿದೆ. ಈ ಸಂಕಲನದಲ್ಲಿರುವ ‘ಅಫ್ರೋದಿತೆ’ ಮತ್ತು ಇತರ ಕವಿತೆಗಳು ಮಹಿಳಾ ಸಂವೇದನೆಯ ಹೊಸತನಕ್ಕೆ ಉದಾಹರಣೆಯಾಗಿವೆ. ಅನುವಾದಕ್ಕೆ ಬೇಕಾದ ಭಾಷೆಯನ್ನು ಯಶಸ್ವಿಯಾಗಿ ದುಡಿಸಿಕೊಳ್ಳುವ ಕಲೆಗಾರಿಕೆ ಮತ್ತು ಭಾಷೆ ಮತ್ತು ಭಾವಗಳನ್ನು ವಿಶಿಷ್ಟವಾಗಿ ಬೆಸೆಯುವ ಸರಳ ಶೈಲಿಯಿಂದ ಈ ಸಂಕಲನದ ಕವಿತೆಗಳು ಓದುಗರನ್ನು ಆಕರ್ಷಿಸಿವೆ.
ಇನ್ನು ಅಮೆರಿಕದ ಕವಯಿತ್ರಿ, ಕಾದಂಬರಿಕಾರ್ತಿ ಮತ್ತು ಕತೆಗಾರ್ತಿ ಸಿಲ್ವಿಯಾ ಪ್ಲಾತ್ ಅವರ ಕೃತಿಗಳನ್ನು, ಮೆಕ್ಸಿಕಾದ ಕವಿ ಆಕ್ಟೇವಿಯಾ ಪಾಜ್ ಮತ್ತು ಸ್ಪೇನ್ ಕವಿ ಹಾಗು ನಾಟಕಕಾರ ಫೆಡ್ರಿಕೋ ಗಾರ್ಸಿಯಾ ಲೋರ್ಕಾನ ಮೂರು ಜಗತ್ಪಸಿದ್ಧ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಲಪಂಥೀಯರ ಗುಂಪು ದಾಳಿಗೆ 38ರ ಹರೆಯದಲ್ಲೇ ಬಲಿಯಾದ ಲೋರ್ಕಾನ ಬರವಣಿಗೆಗಳಲ್ಲಿ ಜನಪದ, ನಗರದ ಬರಡುತನ, ಹಳ್ಳಿಗಾಡಿನ ಜೀವಂತಿಕೆ, ವಿವಿಧ ವರ್ಗಗಳ ಸೋಗಲಾಡಿತನ, ಬದುಕಲು ಪಡುವ ಜನರ ಬವಣೆಗಳನ್ನು ಗುರುತಿಸಬಹುದು. ಚೈನೀ, ಗ್ರೀಕ್ ಸೇರಿದಂತೆ ಜಾಗತಿಕ ಸಂದರ್ಭದ ಸಂವೇದನೆಗಳನ್ನು ಕನ್ನಡದ ಸಂವೇದನೆಗೆ ಒಗ್ಗುವ ಹದವರಿತ ಭಾಷೆಯಲ್ಲಿ ಅನುವಾದಿಸಿರುವ ವಿಜಯಲಕ್ಷ್ಮೀ ಅವರ ಕ್ರಮ ಈ ಕ್ಷೇತ್ರಕ್ಕೆ ಒಂದು ಅನುಪಮ ಉದಾಹರಣೆಯಾಗಿದೆ. ಇವರ ಹೆಸರಿನಲ್ಲಿ ಪ್ರತಿ ವರ್ಷ ಅನುವಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.








