ನನ್ನ ವಿದ್ಯಾಗುರು, ನಾಡಿನ ಕಾವ್ಯಪರಂಪರೆಯ ಅವಧೂತ ಗುರು ಪ್ರೊ.ಕಿ.ರಂ.ನಾಗರಾಜ ನೆನಪಿನ ಕವಿಗೋಷ್ಠಿ ಹಾಗೂ ಪ್ರೊ.ಕಿ.ರಂ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರಜ್ಞಾ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಡಿಸೆಂಬರ್ ೨೫ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪತ್ರಕರ್ತೆ, ರಂಗಭೂಮಿ ತಜ್ಞೆ ಇಳಾ ವಿಜಯಮ್ಮನವರಿಗೆ ೨೦೨೫ನೇ ಸಾಲಿನ ಕಿ.ರಂ.ಸಂಸ್ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕಿ.ರಂ.ಪುತ್ರಿ ಸಹನಾ ಅವರು ತಮ್ಮ ತಂದೆಯವರ ಜೊತೆಗಿನ ಅಪರೂಪದ ಅನುಭವಗಳನ್ನು ಹಂಚಿಕೊಂಡರು. ಪ್ರಶಸ್ತಿ ಸ್ವೀಕರಿಸಿದ ವಿಜಯಮ್ಮನವರು ಕಿ.ರಂ ಒಡನಾಟದ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.
ಅಭಿನಂದನಾ ಭಾಷಣವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಎಲ್ ಎನ್ ಮುಕುಂದರಾಜ್ ನೀಡಿದರು. ಪ್ರಜ್ಞಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಹಾಗೂ ರಂಗತಜ್ಞ ಟಿ.ಎನ್ ಸೀತಾರಾಂ, ಶೂದ್ರ ಶ್ರೀನಿವಾಸ್, ಪಿ.ಮಲ್ಲಿಕಾರ್ಜುನಪ್ಪ ಅವರುಗಳು ಕಿ.ರಂ.ವ್ಯಕ್ತಿತ್ವದ ಹಲವು ಆಯಾಮಗಳನ್ನು ಹಾಗು ಅವರ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಪ್ರಾಧ್ಯಾಪಕ ಹಾಗು ಸಂಘಟಕ ಡಾ.ರುದ್ರೇಶ್ ಅದರಂಗಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಟಿ ,ರಂಗಭೂಮಿ ಕಲಾವಿದೆ ನಿರ್ಮಲಾ ನಾದನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕವಿಗೋಷ್ಠಿಯಲ್ಲಿ ಮಮತಾ ಅರಸೀಕೆರೆ, ಟಿ.ಯಲ್ಲಪ್ಪ, ಜಯಶಂಕರ ಹಲಗೂರು, ಹಾಜೀರಾಖಾನಂ, ಚಾಂದ್ ಪಾಶ, ಪದ್ಮ.ಟಿ.ಚಿನ್ಮಯಿ , ಕಾವ್ಯಶ್ರೀ ಎಚ್, ಹಾಗೂ ಡಾ.ಸುನೀತ ಬಿ.ವಿ ಅವರುಗಳು ಕವಿತೆಗಳನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ವಹಿಸಿಕೊಂಡು ಕವಿತೆಗಳ ಅವಲೋಕನ ನಡೆಸಿದರು.
– ಪ್ರೊ. ಟಿ. ಯಲ್ಲಪ್ಪ, ಸಾಹಿತಿಗಳು ಮತ್ತು ಕನ್ನಡ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಪುರಂ, ಬೆಂಗಳೂರು















