ನೀವು ಬಿಜೆಪಿಗೆ ಮತ ಹಾಕಿ: ಉತ್ತರ ರಾಜ್ಯದವರು ಕರ್ನಾಟಕದ ವ್ಯಾಪಾರ ವಾಣಿಜ್ಯ ವಹಿವಾಟು ಆಕ್ರಮಿಸುತ್ತಾರೆ
ಇನ್ನ ಹತ್ತೇ ವರ್ಷ ತಡೆಯಿರಿ. ನಿಮ್ಮ ಮುಸ್ಲಿಮ್ ದ್ವೇಷದ ಮಂಪರು ತಾನಾಗೇ ಇಳಿಯಲಿದೆ. ಇಲ್ಲಿ ಸ್ಥಳೀಯ ವ್ಯಾಪಾರಿ ವರ್ಗ ತನ್ನ ಅಸ್ಥಿತ್ವ ಕಳೆದುಕೊಳ್ಳಲಿದೆ. ಯಾಕೆ ಅಂದ್ರೆ ಕರ್ನಾಟಕದ ಸಣ್ಣ ಗಾತ್ರದ ಪಟ್ಟಣಗಳನ್ನೂ ಬಿಡದೆ ಉತ್ತರ ಪ್ರದೇಶ ಮತ್ತು ಗುಜರಾತು ಮತ್ತು ರಾಜಸ್ಥಾನಿ ವ್ಯಾಪಾರಿ ವರ್ಗ ಆವರಿಸಿಕೊಳ್ತಿದೆ. ಅದು ಎಷ್ಟರ ಮಟ್ಟಿಗೆ ಬೆಳೆಯತ್ತೆ ಅಂದ್ರೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯನನ್ನೂ ಬಿಡದಂತೆ ಖರೀದಿಸಿ ಇಲ್ಲಿಯ ಭೂಮಿ ಮತ್ತು ವ್ಯಾಪಾರವನ್ನು ಕಬಳಿಸಲಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಉತ್ತರ ಭಾರತದ ಈ ವ್ಯಾಪಾರಿ ವರ್ಗ ಹೇಗೆಂದರೆ ಕೊಳಚೆ ನೀರಲ್ಲೂ ಸಮೃದ್ಧವಾಗಿ ಬೆಳೆಯುವ ಕ್ಯಾಟ್ ಫಿಷ್ ಇದ್ದಹಾಗೆ. ಕ್ಯಾಟ್ ಫಿಷ್ ವಿಷಕಾರಿ. ಅದು ಸ್ಥಳೀಯ ಮೀನುಗಳನ್ನು ನುಂಗಿ ನೀರು ಕುಡಿಯುತ್ತದೆ.
ಸಾಬರ ಮೇಲೆ ದ್ವೇಷ ಸಾಧಿಸುತ್ತಲೇ ಶೇಟುಗಳ ಗುಲಾಮರಾಗುವ ಕಾಲ ದೂರವಿಲ್ಲ. ಇದು ಎಷ್ಟರ ಮಟ್ಟಿನ ಬಿಕ್ಕಟ್ಟು ಸೃಷ್ಟಿಸುತ್ತದೆಂದರೆ ಅವರಿಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವಷ್ಟು. ನಮ್ಮ ನಾಡು ನುಡಿ ಎಲ್ಲದರ ಮೇಲೂ ಹಿಡಿತ ಸಾಧಿಸಿ ಕರ್ನಾಟಕದ ಅಸ್ಥಿತ್ವವನ್ನೇ ಹೊಸಕುವಷ್ಟು.
ಉತ್ತರ ಭಾರತೀಯರ ಇತಿಹಾಸವೇ ಅಂಥಾದ್ದು. ಪರಸ್ಥಳದಿಂದ ಬಂದು ಮೂಲ ನಿವಾಸಿಗಳನ್ನೇ ಪರಕೀಯರನ್ನಾಗಿಸುವ ಗುಣ. ಈ ಕಾಲ ದೂರವಿಲ್ಲ. ಈಗಲೇ ಇದರ ಬಿಸಿ ತಟ್ಟ ತೊಡಗಿದೆ. ಒಂದು ಪಾನಿಪುರಿ ಅಂಗಡಿಯಿಂದ ಚಹಾದ ಅಂಗಡಿಯಿಂದ ಹಿಡಿದು ಜನಜೀವನಕ್ಕೆ, ರೇಷನ್ ಅಂಗಡಿ, ಗಿರವಿ, ಟಾಯ್ಲೆಟ್, ಕಬ್ಬಿಣ, ಸಿಮೆಂಟ್, ಹಾರ್ಡ್ ವೇರ್ ಹೀಗೆ ಅನಿವಾರ್ಯವಿರುವ ಎಲ್ಲಾ ವ್ಯಾಪಾರ ವ್ಯವಹಾರದಲ್ಲೂ ಅವರದೇ ಪಾರುಪತ್ಯ ಸ್ಥಾಪಿತವಾಗುತ್ತಿದೆ.
ನಾನು ಅಚ್ಚರಿಯಿಂದ ಗಮನಿಸುತ್ತಿದ್ದೇನೆ; ಕಳೆದ ಕೇವಲ ಎಂಟು ವರ್ಷದಲ್ಲಿ ಮಾಯ ಮಂತ್ರ ನಡೆಯಿತೋ ಎನ್ನುವ ಹಾಗೆ ಊರಿನ ಓಣಿ ಓಣಿಗಳಲ್ಲಿ ಗುಜರಾತಿ, ಯುಪಿ, ರಾಜಸ್ಥಾನಿಗಳ ಅಂಗಡಿಗಳು ಆವರಿಸಿವೆ. ಈ ವ್ಯಾಪಾರದ ಒತ್ತುವರಿ ಸಮರೋಪಾದಿ ತಲುಪಿದೆ. ನಾವಿನ್ನೂ ತಲತಲಾಂತರದಿಂದ ಆರಕ್ಕೇರದೆ ಮೂರಕ್ಕಿಳಿಯದೆ ನಮ್ಮ ವ್ಯಾಪಾರ ವಹಿವಾಟಿನ ಜೀವಾಳವಾಗಿದ್ದ ಮುಸ್ಲಿಮರನ್ನು ದ್ವೇಷಿಸುತ್ತಾ ಮೈ ಮರೆತಿದ್ದೇವೆ. ಅಥವಾ ಮೈ ಮರೆಯುವಂತೆ ಮಾಡಲಾಗಿದೆ.
ಮುಸ್ಲಿಮರ ಅಂಗಡಿಯಲ್ಲಿ ಸಾಮಾನು ಸರಂಜಾಮು ಖರೀದಿಸಬಾರದು, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂಬೆಲ್ಲಾ ಚಿತಾವಣೆಗಳ ಹಿಂದಿರುವುದು ಹಿಂದಿಯವರ ವ್ಯಾಪಾರೀ ಲಾಬಿ ಎನ್ನುವುದು ಅರ್ಥವಾಗುತ್ತಿಲ್ಲ. ಬಂದು ಎಂಟು ಹತ್ತು ವರ್ಷವಾಗಿಲ್ಲ ಆಗಲೇ ಈ ಸೇಟುಗಳು ಕೋಟಿಕೋಟಿ ಬೆಲೆ ಬಾಳುವ ಕಟ್ಟಡಗಳು, ನಿವೇಶನಗಳು, ಗದ್ದೆ ತೋಟಗಳ ಒಡೆತನ ಸಾಧಿಸುತ್ತಿದ್ದಾರೆ. ಇದು ಸಾಂಸ್ಕೃತಿಕ ರಾಜಕೀಯ ಸಾಮಾಜಿಕ ಭಾಷಿಕ ಹಾಗೂ ಜೀವನದ ಮೇಲೆ ನಡೆಸುತ್ತಿರುವ ಅಕ್ರಮಣವೇ ಆಗಿದೆ. ಕನ್ನಡಿಗರು ಪರಾವಲಂಬಿಗಳಾಗಿ ತಮ್ಮ ತಾಯ್ನೆಲದಲ್ಲಿ ತಾವೇ ಅನಾಥರಾಗುವ, ನಿರ್ವೀರ್ಯರಾಗುವ ಕಾಲ ದೂರವಿಲ್ಲ.
ಇದಕ್ಕೆಲ್ಲ ಯಾರು ಕಾರಣ? ಯಾಕೆ ಕಳೆದ 10 ವರ್ಷದಿಂದೀಚೆಗೇ ಇದು ಇಂಥಾ ಉಸಿರುಗಟ್ಟಿಸುವ ಹಂತಕ್ಕೆ ಬಂದು ತಲುಪಿದೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮವರು ಸೋತಿದ್ದಾರೆ. ಇಲ್ಲಿಯ ಪಟ್ಟಣಸೆಟ್ಟಿ, ಕುರುವಿನ ಸೆಟ್ಟಿ, ಕೋರಿಸೆಟ್ಟಿ, ಜೈನ ಸೆಟ್ಟಿ, ಕರಾವಳಿ ಸೆಟ್ಟಿ, ಇತರೆಲ್ಲ ವ್ಯಾಪಾರೀ ಸಮುದಾಯದ ಎಲ್ಲರೂ ವ್ಯಾಪಾರದ ಸ್ವಾಮ್ಯ ಕಳೆದುಕೊಂಡು ದರಿದ್ರ ಸ್ಥಿತಿ ತಲುಪುವವರೆಗೆ ಇದು ಅರ್ಥವಾಗುವುದಿಲ್ಲ. ಎಲ್ಲಾ ಕಳೆದುಕೊಂಡ ದರಿದ್ರರಿಂದಲೇ ಪಾರದರ್ಶಕವಾದ ವಿಮರ್ಶೆ ಹುಟ್ಟಲು ಸಾಧ್ಯ. ಈಗ ಮಂಪರು ಇರುವುದರಿಂದ ಹಿಂದೂ ಧರ್ಮ, ದೇಶಭಕ್ತಿ, ಪಾಕಿಸ್ತಾನ, ಮುಸ್ಲಿಮ್ ದ್ವೇಷ, ದೇವರು, ದಿಂಡರು, ಇಂತವುಗಳ ಕೆಸರು ಗುಂಡಿಯಲ್ಲೇ ಹೊರಳಾಡುತ್ತಿದ್ದಾರೆ. ಕಾಲ ಮತ್ತು ತಲುಪಿದ ಪರಿಸ್ಥಿತಿ ಒಂದು ದಿನ ಸತ್ಯದರ್ಶನ ಮಾಡಿಸುತ್ತದೆ. ಅಷ್ಟರಲ್ಲಿ ‘ನಾರ್ತ್ ಇಂಡಿಯಾ ಕಂಪನಿ’ ನಮ್ಮನ್ನು ಆಳತೊಡಗಿರುತ್ತದೆ.
- ಸುರೇಶ ಎನ್ ಶಿಕಾರಿಪುರ, ಚಿಂತಕರು




