ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೂ ಪದೇ ಪದೇ ಜನತಾದರ್ಶನ ಮತ್ತು ಜನಸ್ಪಂದನ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಒಳ್ಳೆಯದೇ. ಆದರೆ ಬಹಳಷ್ಟು ಕಾರ್ಯಕ್ರಮಗಳು ಕೇವಲ ಸಾರ್ವಜನಿಕರು ನೀಡುವ ಪತ್ರಗಳಿಗೆ ಉತ್ತರವನ್ನು ನೀಡುವ ಕಾರ್ಯಕ್ರಮಗಳಾಗಿರುತ್ತದೆ ಹೊರತು ಬಹಳಷ್ಟು ಜನರ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನವನ್ನು ಹರಿಸಿರುವುದಿಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜನಸಾಮಾನ್ಯರು ಕಚೇರಿಗಳಿಗೆ ಅಲೆದು, ಅಲೆದು ಚಪ್ಪಲಿಗಳು ಸ ವೆದ ನಂತರವಷ್ಟೇ ದೊರೆಯನ್ನ ಕಾಣಲು ಬರುವುದು. ಇಲ್ಲಿ ಅವರು ಕೊಡುವ ಅರ್ಜಿಗಳು ಮತ್ತೆ ಯಾವ ಇಲಾಖೆ ಮತ್ತು ಯಾವ ಅಧಿಕಾರಿಯಿಂದ ಇವರ ಸಮಸ್ಯೆಗಳು ಪರಿಹಾರವಾಗಿರುವುದಿಲ್ಲವೋ ಅವರಿಗೆ ಮತ್ತೆ ಹೋದ ಸಂದರ್ಭದಲ್ಲಿ ಅವರು ಮತ್ತೆ ಈ ಹಿಂದೆ ನೀಡಿದ್ದ ಉತ್ತರಗಳನ್ನೇ ನೀಡುತ್ತಾರೆ. ಜೊತೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದಿರುವ ಪತ್ರಕ್ಕೆ ಉತ್ತರ ಎನ್ನುವ ಹೊಸದೊಂದು ಸಾಲುಗಳನ್ನು ಸೇರಿಸಿರುತ್ತಾರೆ ಅಷ್ಟೇ.
ಸಾರ್ವಜನಿಕರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಗೆ ಅರ್ಜಿಗಳನ್ನ ಕೊಡುವ ಸಂದರ್ಭದಲ್ಲಿ ಅಧಿಕಾರಿಗಳು ಅಂತಹ ಸಾರ್ವಜನಿಕರ ಅರ್ಜಿಗಳನ್ನು ತಾಳ್ಮೆಯಿಂದ ಪರೀಕ್ಷಿಸಿ ಮತ್ತು ಅವಲೋಕಿಸಿ ಇವರು ತಂದಿರುವ ಸಮಸ್ಯೆಗಳ ಹಿಂದಿರುವ ತಾಂತ್ರಿಕವಾದಂತಹ ಕಾರಣಗಳೇನು, ಆಡಳಿತಾತ್ಮಕವಾಗಿ ಯಾವುದಾದರೂ ಕ್ರಮಗಳು ಅಗತ್ಯವಿದೆಯೇ ಹಾಗೂ ಕೆಲವು ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಡುವೆ ಇರುವ ತಪ್ಪು ತಿಳುವಳಿಕೆ, ಜ್ಞಾನದ ಕೊರತೆ, ಅನುಭವವಿಲ್ಲದ ಅಧಿಕಾರಿಗಳು, ಇವರುಗಳಿಂದಾಗಿ ಹಲವಾರು ನಾಗರಿಕರ ಸಮಸ್ಯೆಗಳು ಪರಿಹಾರವಾಗಿರುವುದಿಲ್ಲ.
ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಒಬ್ಬ ಸಾಮಾನ್ಯ ನಾಗರಿಕರು ಮುಖ್ಯಮಂತ್ರಿಯ ತನಕ ತಮ್ಮ ಸಮಸ್ಯೆಯನ್ನು ಹೊತ್ತು ಬಂದಿದ್ದಾರೆ ಎಂದರೆ ಇದರ ಹಿಂದಿರುವ ಆಳವನ್ನು ಅರಿಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಜನಸ್ಪಂದನಾ ಮತ್ತು ಜನತಾದರ್ಶನ ಕೇವಲ ಪತ್ರೋತ್ತರ ಕಾರ್ಯಕ್ರಮವಾಗದೆ ನಿಜವಾಗಿಯೂ ಜನರ ಸಮಸ್ಯೆಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದಂತಹ ಆಡಳಿತಾತ್ಮಕ ಕ್ರಮಗಳು ಅತ್ಯಂತ ಅವಶ್ಯಕವಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕೂಲಂಕುಶವಾಗಿ ಪರಿಶೀಲಿಸಿ ನಿಧಾನವಾದರೂ ಚಿಂತೆ ಇಲ್ಲ, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಸಾಧಿಸಿ ಇಲ್ಲಿರುವಂತಹ ನಿಜವಾದ ಸಮಸ್ಯೆಯನ್ನು ತಿಳಿದು, ಪರಿಹರಿಸಿ ಕೊಟ್ಟರೆ ಜನಸಾಮಾನ್ಯರ ಒಂದೊಂದು ಅರ್ಜಿಯ ಪರಿಹಾರದ ಹಿಂದೆ ನೂರಾರು ಜನರಿಗೆ ಶಾಶ್ವತವಾದ ಪರಿಹಾರ ದೊರೆಯುವಂತಹ ಕಾನೂನುಗಳು ರಚನೆಯಾಗುತ್ತದೆ, ತಿದ್ದುಪಡಿಗಳಾಗುತ್ತದೆ ಮತ್ತು ಆಡಳಿತದಲ್ಲಿ ಬದಲಾವಣೆಗಳಾಗುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಗಮನವನ್ನು ಹರಿಸಬೇಕಾಗಿದೆ. ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಜಾತ್ರೆಯೋ ಇಲ್ಲವೇ ಸಂತೆಯ ರೀತಿಯಲ್ಲಿ ಆಗುತ್ತದೆ.
-ಕೆ ಎಸ್ ನಾಗರಾಜ್, ಬೆಂಗಳೂರು




