ರಾಜ್ಯೋತ್ಸವ ಅಂಗವಾಗಿ ಬಹುಭಾಷಾ ಕವಿಸಮ್ಮೇಳನಕ್ಕೆ ಕವನಗಳ ಆಹ್ವಾನ

2 years ago

#Invitation #Poems #Multilingual #Poetry #Conference #Rajyotsava

ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಬಹು ಭಾಷಾ ಕವಿಸಮ್ಮೇಳನ ನಡೆಸಲಾಗುವುದು. ಕನ್ನಡ ನಾಡಿನಲ್ಲಿರುವ ಹಲವು ಭಾಷೆಗಳನ್ನು ಒಳಗೊಂಡಂತೆ ದೇಶದ ವೈವಿಧ್ಯಮಯ ಭಾಷೆಗಳಲ್ಲಿ ಕವಿಗಳು ಕವನಗಳನ್ನು ಬರೆದು ಕಳುಹಿಸಲು ಸಂಘಟಕರು ಕೋರಿದ್ದಾರೆ.

ನಿಯಮಗಳು:
ಮೂರು ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕವನವಾಗಿರಬೇಕು
ಮಕ್ಕಳು, ಯುವಕರು, ದೊಡ್ಡವರು ಎಲ್ಲರೂ ಬಹುಭಾಷಾ ಕವಿಸಮ್ಮೇಳನದಲ್ಲಿ ಕವನ ವಾಚಿಸಲು ಅವಕಾಶ

ಆಸಕ್ತರು ಅಕ್ಟೋಬರ್ ೩೦ ರೊಳಗೆ ಕವನಗಳ ಜೊತೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಸಂಪರ್ಕಿಸುವ ವಿಳಾಸ: ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಉಡುಗಿರಿನಿಲಯ, ಭಗೀರಥ ವೃತ್ತ ಹತ್ತಿರ, ಕಾಶಿಪುರ ರಸ್ತೆ, ವಿನೋಬನಗರ, ಶಿವಮೊಗ್ಗ, ದೂರವಾಣಿ 9449552795 ಇವರಿಗೆ ತಲುಪುವಂತೆ ಕಳುಹಿಸಬಹುದು.

Leave a Reply