ಹುಟ್ಟು ಹಬ್ಬದ ಶುಭಾಶಯಗಳು
1991ರ ಮುಂಗಡಪತ್ರ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿ ದೇಶಕ್ಕೆ ಭದ್ರವಾದಂತಹ ಆರ್ಥಿಕ ಬುನಾದಿಯನ್ನು ಹಾಕಿಕೊಟ್ಟವರು ಡಾಕ್ಟರ್ ಮನಮೋಹನ್ ಸಿಂಗ್ ಎನ್ನುವ ಮಾತು ಕೇವಲ ಸ್ವ ಪಕ್ಷದವರಿಂದ ಮಾತ್ರವಲ್ಲವೇ, ವಿರೋಧ ಪಕ್ಷದ ನಾಯಕರಿಂದಲೂ ಹಲವಾರು ಬಾರಿ ಕೇಳಿ ಬರುತ್ತಿದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
1991ರ ಸಂದರ್ಭದಲ್ಲಿ ಭಾರತ ದೇಶದ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇಂತಹ ಸಂದರ್ಭದಲ್ಲಿ ಪಿ ವಿ ನರಸಿಂಹರಾವ್ ರವರು ಪ್ರಧಾನಮಂತ್ರಿಗಳಾಗಿ ದೇಶದ ಅರ್ಥವ್ಯವಸ್ಥೆಯನ್ನು ಸರಿಪಡಿಸಬಲ್ಲಂತಹ ಇದಕ್ಕೆ ಔಷಧಿಯನ್ನು ಕೊಡಬಲ್ಲಂತಹ ಶಕ್ತಿ ಇರುವುದು ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಎನ್ನುವುದನ್ನು ಅರಿತು, ಅವರನ್ನು ದೇಶದ ಅರ್ಥ ಸಚಿವರನ್ನಾಗಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡರು ಇದರಿಂದಾಗಿ ದೇಶದಲ್ಲಿ ಹೊಸ ಕ್ರಾಂತಿಯೇ ಆಯಿತು. ಅನೇಕ ಕ್ರಾಂತಿಕಾರಿ ನಿಲುವುಗಳ ಮೂಲಕ ಮತ್ತು ತಮ್ಮ ದೂರಿದೃಷ್ಟತ್ವದ ಯೋಜನೆಗಳ ಮೂಲಕ ದೇಶದ ಅರ್ಥ ವ್ಯವಸ್ಥೆಗೆ ಬೇಕಾದಂತಹ ಪರಿಹಾರದ ಮಾರ್ಗಗಳನ್ನು ತಮ್ಮ ಮುಂಗಡಪತ್ರದಲ್ಲಿ ಸೂಚಿಸಿದರು .ಇದರಿಂದಾಗಿ ಕೆಲವೇ ತಿಂಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಯಿತು. ಮುಂದಿನ ಎಲ್ಲಾ ಸರ್ಕಾರಗಳು ಇವರು ಹಾಕಿಕೊಟ್ಟಂತಹ ಆರ್ಥಿಕ ನೀತಿಯ ಮೇಲೆ ತಮ್ಮ ಅರ್ಥವ್ಯವಸ್ಥೆಯನ್ನು ನಿರ್ಮಿಸುತ್ತ ಹೋಗಿದ್ದಾರೆ. ಅಂದು ಡಾ. ಮನಮೋಹನ್ ಸಿಂಗ್ ರವರು ದೇಶದ ಅರ್ಥ ಸಚಿವರಾಗದಿದ್ದರೆ, ಅಂತಹ ಕ್ರಾಂತಿಕಾರಿ ಆದಂತಹ ಮುಂಗಡಪತ್ರವನ್ನು ಮಂಡಿಸದೆ ಇದ್ದಿದ್ದರೆ, ದೇಶದ ಪರಿಸ್ಥಿತಿ ತುಂಬಾ ಸಂಕಷ್ಟವನ್ನು ಎದುರಿಸಬೇಕಾಗಿತ್ತು.
ಭಾರತ ದೇಶದ ಅತ್ಯಂತ ವಿದ್ಯಾವಂತ ,ವಿಚಾರವಂತ, ಸೌಜನ್ಯ, ಸಜ್ಜನಿಕೆಯ, ಶುದ್ಧ ಹಸ್ತದ ಪ್ರಧಾನ ಮಂತ್ರಿಗಳ ಸಾಲಿನಲ್ಲಿ, ಡಾ. ಮನಮೋಹನ್ ಸಿಂಗ್ ಅವರು ನಿಲ್ಲುತ್ತಾರೆ. ಅವರ ಸಂಪುಟದಲ್ಲಿನ ಕೆಲವರ ಮೇಲೆ ಆಪಾದನೆಗಳು ಬಂದಿತು ಆದರೆ ಇವರ ಮೇಲೆ ಯಾರೂ ಸಹ ಬೆರಳು ತೋರಿಸುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ .
ದೇಶದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿ, ಸೇವೆ ಸಲ್ಲಿಸಿದ ಇವರು ಭಾರತ ದೇಶದ ಅನೇಕ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದ ಹಿಂದೆ ಶ್ರಮಿಸಿರುತ್ತಾರೆ ವಿಶೇಷವಾಗಿ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಇವರು ಪ್ರಚಾರವನ್ನು ಪಡೆಯದೆ ಅಬ್ಬರಿಸದೆ, ಶಾಶ್ವತವಾದಂತಹ ಯೋಜನೆಗಳನ್ನು ಕೇವಲ ಭಾವನೆಗಳನ್ನು ಪ್ರಚೋದಿಸಲು ರೂಪಿಸದೆ, ಬದುಕನ್ನ ಕಟ್ಟಿಕೊಡುವ ಸಲುವಾಗಿ ಅನುಷ್ಠಾನಗೊಳಿಸಿರುತ್ತಾರೆ.
ಉಚಿತ ಶಿಕ್ಷಣ ಕಾಯ್ದೆ ಮಾಹಿತಿ ಹಕ್ಕು ಕಾಯ್ದೆ, ಅಣು ಒಪ್ಪಂದ, ಆಧಾರ್ ಕಾರ್ಡ್, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ನರ್ಮ ಯೋಜನೆ, ಆಹಾರ ಭದ್ರತೆ ಕಾಯ್ದೆ, ಆರೋಗ್ಯ ಭದ್ರತೆ ಕಾಯಿದೆ, ಅಸಂಘಟಿತ ಕಾರ್ಮಿಕರಿಗೆ ವಿಮಾ ಸೌಲಭ್ಯಗಳು ,ಹೀಗೆ ಇವರು ರೂಪಿಸಿದಂತಹ ಕಾರ್ಯಕ್ರಮಗಳು ಬಡವರ ಬದುಕನ್ನ ಬದಲಾವಣೆಯತ್ತ ತೆಗೆದುಕೊಂಡು ಹೋಯಿತು. ಜೊತೆಗೆ ಬಡವರು ಮತ್ತು ಮಧ್ಯಮ ವರ್ಗದವರು ಆರ್ಥಿಕವಾಗಿ ಚೇತರಿಕೆಯನ್ನ ಕಂಡರು.
ಇಂದು ದೇಶದಲ್ಲಿ ಹಲವಾರು ಲಕ್ಷ ರೂಪಾಯಿಗಳ ಸಂಬಳವನ್ನು ಲಕ್ಷಾಂತರ ಮಂದಿ ಯುವ ಜನತೆ ಪಡೆಯುವಂತಹ ಸಾಧ್ಯತೆಯನ್ನ ಕಲ್ಪಿಸಿಕೊಟ್ಟವರು ಡಾಕ್ಟರ್ ಮನಮೋಹನ್ ಸಿಂಗ್ ರವರು ,ಅವರ ಎಲ್ಪಿಜಿ ನೀತಿಗಳಿಂದ ದೇಶದಲ್ಲಿ ಸಹಸ್ರಾರು ವಿದೇಶಿ ಕಂಪನಿಗಳು ತಮ್ಮ ಕಂಪನಿಗಳನ್ನ ಸ್ಥಾಪಿಸಿದವು, ಉದ್ಯೋಗವನ್ನು ಸೃಷ್ಟಿಸಿಕೊಟ್ಟವು ವಿದೇಶಿ ಬಂಡವಾಳ ಹರಿದು ಬಂದಿತು. ದೇಶ ವಿದೇಶಗಳ ನಡುವಿನ ಆರ್ಥಿಕ ಸಹಕಾರಕ್ಕೆ ಹೆಚ್ಚು ಅನುಕೂಲವಾಯಿತು.
ತಾನು ಅಪಾರ ವಿದ್ಯಾವಂತ, ಬಡತನದ ಕುಟುಂಬದಿಂದ ಬಂದವನು, ನಾನು ದೇಶಕ್ಕಾಗಿ ಇಷ್ಟೆಲ್ಲ ಮಾಡಿದ್ದೇನೆ, ನನ್ನಿಂದಾಗಿ ಹಲವಾರು ಕಾರ್ಯಕ್ರಮಗಳು ಅನುಷ್ಠಾನವಾಗಿದೆ, 72,000 ಕೋಟಿ ರೈತರ ಸಾಲವನ್ನ ಮನ್ನಾ ಮಾಡಿದೆ ಎಂದು ಎಂದೂ ಸಹ ವೇದಿಕೆಗಳ ಮೇಲೆ ನಿಂತು ಅಬ್ಬರಿಸಲಿಲ್ಲ, ತಮ್ಮ ಬೆನ್ನನ್ನು ತಾವು ಕಟ್ಟಿಕೊಳ್ಳಲಿಲ್ಲ, ತಮ್ಮನ್ನು ಹಗುರವಾಗಿ ಟೀಕಿಸಿದವರ ಟೀಕೆಗಳಿಗೆ ಗಮನವನ್ನೇ ಹರಿಸಲಿಲ್ಲ, ತಮ್ಮ ಪಾಡಿಗೆ ಕೆಲಸವನ್ನು ಮಾಡುತ್ತಾ ಭಾರತದ ಇತಿಹಾಸದಲ್ಲಿ ಆರ್ಥಿಕ ಕ್ರಾಂತಿಯ ರೂವಾರಿ ಎನ್ನುವ ಅಭಿಮಾನದ ಮಾತುಗಳಿಗೆ ಬರಿ ದೇಶವಲ್ಲದೆ ವಿಶ್ವದ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದ್ದಾರೆ. ಅಮೆರಿಕಾದಂತಹ ದೊಡ್ಡ ದೇಶದ ಅಧ್ಯಕ್ಷ ತನ್ನ ದೇಶದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇವರ ಸಲಹೆಗಳನ್ನ ಅಪೇಕ್ಷಿಸುತ್ತಿದ್ದರು ಎಂದರೆ ಇವರ ಪಾಂಡಿತ್ಯ ಜ್ಞಾನ ಎಷ್ಟೆಂಬುದನ್ನು ಅರಿತುಕೊಳ್ಳಬಹುದು.
ಭಾರತ ದೇಶದಲ್ಲಿ ಅತಿ ಹೆಚ್ಚು ಡಾಕ್ಟರೇಟ್ ಪದವಿಗಳನ್ನು ಪಡೆದಿರುವಂತಹ, ದೇಶ ವಿದೇಶಗಳಿಂದ ಪ್ರತಿಷ್ಠಿತವಾದಂತಹ ವಿಶ್ವವಿದ್ಯಾನಿಲಯಗಳಿಂದ ಗೌರವದ ಪ್ರಶಸ್ತಿಗಳಿಗೆ ಭಾಜನರಾಗಿರುವ ಮತ್ತು ತಮ್ಮ ಪಾಂಡಿತ್ಯ ವಿದ್ಯೆ ಇವುಗಳ ಲೆಕ್ಕವನ್ನು ಇಡಲು ಹಲವಾರು ಪುಟಗಳ ಪುಸ್ತಕಗಳೇ ಬೇಕಾಗುತ್ತದೆ. ಆದರೂ ಸಹ ತಮ್ಮ ಸಜ್ಜನಿಕೆ, ಸೌಜನ್ಯ, ಸುಸಂಸ್ಕೃತ ನಡವಳಿಕೆ, ಸೌಮ್ಯತೆ ಇವುಗಳನ್ನ ಎಂದೂ ಬಿಟ್ಟು ಕೊಟ್ಟಿಲ್ಲ, ಮೌನ ಸಾಧಕರಾಗಿ ಜನರ ಮನವನ್ನು ಗೆದ್ದಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




