ಡಾ. ಮನಮೋಹನ್ ಸಿಂಗ್ ಅರವರು ಮಾಡಿದ ತಪ್ಪುಗಳು!

3 years ago

ಡಾ. ಮನಮೋಹನ್ ಸಿಂಗ್ ಅರವರು ಮಾಡಿದ ತಪ್ಪುಗಳು!

ಡಾ . ಮನಮೋಹನ್ ಸಿಂಗ್ ರವರು , ತಾನು ಬಡವರ ಮನೆಯಲ್ಲಿ ಹುಟ್ಟಿದವರು, ಬುಡ್ಡಿಯ ದೀಪದ ಬೆಳಕಿನಲ್ಲಿ , ಸರ್ಕಾರಿ ಶಾಲೆಯಲ್ಲಿ ಓದಿದವನು ಎಂದು ಡಂಗೂರ ಭಾರಿಸಲಿಲ್ಲ , ಅರ್ಥಶಾಸ್ತ್ರದ ವಿಚಾರದಲ್ಲಿ ವಿಶ್ವದ ಶ್ರೇಷ್ಠ ವಿಶ್ವವಿದ್ಯಾನಿಲಯಗಳಿಂದ ಪದವಿಗಳನ್ನ ಪಡೆದಿದ್ದೇನೆ ಎಂದು ತುತ್ತೂರಿ ಊದಲಿಲ್ಲ , ತನ್ನ ಪಾಂಡಿತ್ಯ ಮತ್ತು ವಿದ್ಯೆಗೆ ವಿಶ್ವದ ಹಲವಾರು ರಾಷ್ಟ್ರಗಳಿಂದ ಪ್ರಶಸ್ತಿಗಳು ಬಂದಾಗ ಜಾಹಿರಾತು ನೀಡಲಿಲ್ಲ, ಆರ್ಥಿಕ ಉದಾರೀಕರಣ, ಖಾಸಗಿಕರಣ ಮತ್ತು ವಿಶ್ವ ಬಂಡವಾಳ ಯೋಜನೆ , ಇವುಗಳ ಮೂಲಕ ೧೯೯೧ರ ನಂತರ ಅರ್ಥ ಸಚಿವರಾಗಿ ದೇಶದ ಆರ್ಥಿಕ ಕ್ಷೇತ್ರದ ಬದಲಾವಣೆಗೆ ಕಾರಣನಾದನೆಂದು ಲಾರಿಗಳಲ್ಲಿ ಜನರನ್ನು ಸೇರಿಸಿ ದೊಡ್ಡ ದೊಡ್ಡ ವೇದಿಕೆಗಳ ಮೇಲೆ ಗಟ್ಟಿ ದ್ವನಿಯಲ್ಲಿ ಆರ್ಭಟಿಸಲಿಲ್ಲ , ತಾನು ಪ್ರಧಾನಿ ಆದಾಗ ಹಲವಾರು ಕಾರ್ಯಕ್ರಮಗಳನ್ನ ನೀಡಿದಾಗ ವೈಭವೀಕರಿಸಿಕೊಳ್ಳಲು ವಾಟ್ಸಾಪ್, ಫೇಸ್ ಬುಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಸೈನಿಕರ ಪಡೆಯನ್ನ ಕಟ್ಟಿಕೊಳ್ಳಲಿಲ್ಲ, ವಿದೇಶಗಳಿಗೆ ಹೋಗಿ ವಿಮಾನಗಳಲ್ಲಿ ಜನರನ್ನ ತುಂಬಿಕೊಂಡು ಬಂದು ಸಭೆಗಳನ್ನ ನಡೆಸಿ ದೇಶದ ವಿರೋಧ ಪಕ್ಷಗಳನ್ನು ವಿದೇಶಿಯರ ಮುಂದೆ ಹಿಯ್ಯಾಳಿಸಿ ತನ್ನಿಂದಲೆ ದೇಶ ಎಂದು ಕೈಬೀಸುತ್ತ ವೇದಿಕೆಯ ತುಂಬೆಲ್ಲ ನಡೆದಾಡಲಿಲ್ಲ.

ವಿಶ್ವದ ಅನೇಕ ನಾಯಕರುಗಳು ಮುಕ್ತಕಂಠಕದಿಂದ ತಮ್ಮ ವ್ಯಕ್ತಿತ್ವವನ್ನು ಕೊಂಡಾಡಿದಾಗ ದೇಶದ ಎಲ್ಲ ವಾಹಿನಿಗಳಲ್ಲಿ ಪತ್ರಿಕೆಗಳಲ್ಲಿ ಅದು ಮುಖಪುಟದ ಸುದ್ದಿಯಾಗುವಂತೆ , ಬುದ್ದಿವಂತಿಕೆ ಪ್ರದರ್ಶಸಲಿಲ್ಲ.

ಜನರ ಭಾವನೆಗಳನ್ನ ಕೆರಳಿಸಲಿಲ್ಲ , ಧರ್ಮದ ವಿಚಾರಗಳನ್ನ ತಮ್ಮ ಬಂಡವಾಳ ಮಾಡಿಕೊಳ್ಳಲಿಲ್ಲ
ಹಸಿವು ಮತ್ತು ಉದ್ಯೊಗ ಬಡತನ ಸಾಮಾಜಿಕ ನ್ಯಾಯ ಇವುಗಳನ್ನು ನಿಮ್ಮ ಆದ್ಯತೆಯ ಮಾರ್ಗ ಮಾಡಿಕೋಳ್ಳುವುದನ್ನು ಬಿಟ್ಟು ನಯಪೈಸೆ ಖರ್ಚಿಲ್ಲದೆ ಯಾರ ಕಣ್ಣೀರನ್ನು ಒರಸದೆ ಯಾರ ಹೊಟ್ಟೆಯನ್ನು ತುಂಬಿಸದ ಭಾವನೆಗಳನ್ನಷ್ಟೇ ಪ್ರಚೋದಿಸದ ಮಸೂದೆಗಳನ್ನು ತರದೇ ಅತಿ ದೊಡ್ಡ ತಪ್ಪು ಮಾಡಿಬಿಟ್ಟರು!

ಜೈ ಹಿಂದ್
– ಕೆ . ಎಸ್. ನಾಗರಾಜ್, ಬಸವನಗುಡಿ

Leave a Reply