ಸರಳವಾಗಿ ಮೆಂತ್ಯ ಕಾಳಿನ ಸಾಂಬಾರ್ ಮಾಡುವ ವಿಧಾನ
ರುಚಿಕರ ಮತ್ತು ಆರೋಗ್ಯ ಪೂರಕವಾದ ಮೆಂತ್ಯ ಕಾಳಿನ ಸಾಂಬಾರ್ ಅನ್ನು 10-20 ನಿಮಿಷದಲ್ಲೇ ಮಾಡಬಹುದು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಅಗತ್ಯವಾದ ವಸ್ತುಗಳು:
1. ಒಂದು ಮುಷ್ಟಿಯಷ್ಟು ಮೆಂತ್ಯಕಾಳು
2. ಒಂದು ಚಮಚ ಸಾಸಿವೆ
3. ಅರ್ಧ ಚಮಚ ಜೀರಿಗೆ
4. ಒಂದು ಮುಷ್ಟಿಯಷ್ಟು ಕರಿಬೇವು
5. 3 – 4 ಗುಂಟೂರು ಮೆಣಸಿನಕಾಯಿ
6. 2 ಟೊಮ್ಯಾಟೊ
7. ಉಪ್ಪು
8. ನಿಂಬೆ ಗಾತ್ರದಷ್ಟು ಹುಣಿಸೆಹಣ್ಣಿನಿಂದ ಮಾಡಿದ ಹುಳಿ
9. ಅರ್ಧ ಹೋಳು ತುರಿದ ಹಸಿ ಕೊಬರಿ
10. ಅರ್ಧ ಚಮಚ ಜೀರಿಗೆ
11. 1 ಚಮಚ ಬೆಲ್ಲದ ಪುಡಿ
12. 1 ಚಮಚ ಅಚ್ಚ ಖಾರದ ಪುಡಿ
13. 1 ಚಮಚ ಧನಿಯಾ ಪುಡಿ
14. ಕಾಲು ಚಮಚ ಅರಿಶಿಣದ ಪುಡಿ
15 ಕೊತ್ತಂಬರಿ ಸೊಪ್ಪು
20. ಹಿಂಗು
21. 2 ಚಮಚ ಅಡುಗೆ ಎಣ್ಣೆ
ಮಾಡುವ ವಿಧಾನ: ಗ್ಯಾಸ್ ಸ್ಟೌ ಆನ್ ಮಾಡಿ ಸಣ್ಣ ಉರಿಯಲ್ಲಿಟ್ಟು ಬಾಣಲೆ ಅಥವಾ ಪಾತ್ರೆಯನ್ನು ಇರಿಸಿ. ಅದಕ್ಕೆ 2 ಚಮಚದಷ್ಟು ಅಡುಗೆ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ ಒಂದು ಮುಷ್ಟಿಯಷ್ಟು ಮೆಂತ್ಯಕಾಳನ್ನು ಹಾಕಿ. ಅನಂತರ ಒಂದು ಚಮಚ ಸಾಸಿವೆಯನ್ನು ಹಾಕಿ. ಅದರ ನಂತರ ಅರ್ಧ ಚಮಚ ಜೀರಿಗೆಯನ್ನು ಹಾಕಿ. ಅರ್ಧ ನಿಮಿಷದ ನಂತರ ಒಂದು ಮುಷ್ಟಿಯಷ್ಟು ಕರಿಬೇವಿನ ಸೊಪ್ಪು ಮತ್ತು 3 – 4 ಗುಂಟೂರು ಮೆಣಸಿನಕಾಯಿಗಳನ್ನು ಹಾಕಿ. ಅನಂತರ ಸಣ್ಣಗೆ ಹೆಚ್ಚಿಕೊಂಡಿರುವ 2 ಟೊಮ್ಯಾಟೊ ಹಣ್ಣಿನ ಹೋಳುಗಳನ್ನು ಹಾಕಿ. ಅದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಒಂದು ನಿಮಿಷದ ನಂತರ ನಿಂಬೆ ಗಾತ್ರದಷ್ಟು ಹುಣಿಸೆಹಣ್ಣಿನಿಂದ ಮಾಡಿದ ಹುಳಿಯನ್ನು ಹಾಕಿ. ಇದನ್ನು ಸಣ್ಣ ಉರಿಯಲ್ಲಿ ಬೇಯಲು ಇಟ್ಟು ಅಗತ್ಯ ಪ್ರಮಾಣದಷ್ಟು ನೀರನ್ನು ಹಾಕಿ.
ಈ ಮಿಶ್ರಣ ಬೇಯುತ್ತಿರುವ ಹೊತ್ತಿನಲ್ಲಿ ಅದೇ ಹೊತ್ತಿಗೆ ಅರ್ಧ ಹೋಳು ಹಸಿ ಕೊಬರಿ, ಅರ್ಧ ಚಮಚ ಜೀರಿಗೆಯನ್ನು ಗಂಧದಂತೆ ರುಬ್ಬಿಕೊಳ್ಳಿ. ಒಗ್ಗರಣೆಯಲ್ಲಿರುವ ಮೆಂತ್ಯೆ ಮೆತ್ತಗೆ ಬೆಂದ ನಂತರ ರುಬ್ಬಿಕೊಂಡಿರುವ ಮಿಶ್ರಣವನ್ನು ಪಾತ್ರೆಗೆ ಸುರಿಯಿರಿ. ಇದಕ್ಕೆ 1 ಚಮಚ ಬೆಲ್ಲದ ಪುಡಿ, 1 ಚಮಚ ಅಚ್ಚ ಖಾರದ ಪುಡಿ, 1 ಚಮಚ ಧನಿಯಾ ಪುಡಿ, ಕಾಲು ಚಮಚ ಅರಿಶಿಣದ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಅಗತ್ಯ ಪ್ರಮಾಣದ ನೀರನ್ನು ಸೇರಿಸಿ ಕುದಿಸಿ. ಕಡೆಯಲ್ಲಿ ಹಿಂಗನ್ನು ಹಾಕಿ. ಇಷ್ಟನ್ನು ಮಾಡಿದರೆ ನಿಮಗೆ ರುಚಿಯಾದ ಮೆಂತ್ಯ ಕಾಳಿನ ಸಾರು ಸಿದ್ಧವಾಗಿರುತ್ತದೆ. ಇದನ್ನು ನೀವು ಅನ್ನ, ಜೋಳದ ಮತ್ತು ರಾಗಿ ಮುದ್ದೆಯ ಜೊತೆಗೆ ಸವಿಯಬಹುದು.




