ರುಚಿಕರವಾದ ಮತ್ತು ಆರೋಗ್ಯಕ್ಕೆ ಪೂರಕವಾದ ಮತ್ತು ಮತ್ತೆಮತ್ತೆ ತಿನ್ನಬೇಕು ಎನಿಸುವ ಮಜ್ಜಿಗೆ ಹುಳಿಯನ್ನು 10-20 ನಿಮಿಷದಲ್ಲೇ ಮಾಡಬಹುದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಅಗತ್ಯವಾದ ವಸ್ತುಗಳು:
1. 3 ಟೇಬಲ್ ಸ್ಪೂನ್ ಆಯಿಲ್
2. ಅರ್ಧ ಸ್ಪೂನ್ ಮೆಂತ್ಯ ಕಾಳು
3. ಅರ್ಧ ಸ್ಪೂನ್ ಮೆಣಸಿನ ಕಾಳು
4. ಮೂರು ಎಸಳು ಕರಿಬೇವು
5. 3 – 4 ಒಣ ಮೆಣಸಿನಕಾಯಿ
6. ಮೂರು ಸ್ಪೂನ್ ಜೀರಿಗೆ
7. ಉಪ್ಪು
8. ಒಂದೂವರೆ ಸ್ಪೂನ್ ಧನಿಯಾ
9. ಅರ್ಧ ಹೋಳು ತುರಿದ ಹಸಿ ಕೊಬರಿ
10. ಒಂದು ಇಂಚು ಹಸಿ ಶುಂಠಿ
11. 2 ಚಮಚ ಬೆಲ್ಲದ ಪುಡಿ
12. ಎರಡು ಹಸಿ ಮೆಣಸಿನಕಾಯಿ
13. ಕಾಲು ಚಮಚ ಅರಿಶಿಣದ ಪುಡಿ
14. ಕೊತ್ತಂಬರಿ ಸೊಪ್ಪು
15. ಹಿಂಗು
16. 5 ಚಮಚ ತೊಗರಿಬೇಳೆ
17. 2.5 ಚಮಚ ಕಡಲೆ ಬೇಳೆ
18. ಸೋರೆಕಾಯಿ ಅಥವಾ ಕುಂಬಳಕಾಯಿ
19. 1 ಕಪ್ ಮೊಸರು
ಮಾಡುವ ವಿಧಾನ: ಮೊದಲು ಮಧ್ಯಮ ಗಾತ್ರದ 1 ಸೋರೆಕಾಯಿ ಅಥವಾ ಕುಂಬಳಕಾಯಿಯನ್ನು ಮಧ್ಯಮ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು, ಕುಕ್ಕರ್ ನಲ್ಲಿ ಹೆಚ್ಚಿದ ಪದಾರ್ಥ ಮುಳುಗುವಷ್ಟು ನೀರು, ಉಪ್ಪು, ಅರಿಶಿಣ, ಎಣ್ಣೆ ಹಾಕಿ ಕುಕ್ಕರ್ ಕ್ಯಾಪ್ ಅನ್ನು ಮುಚ್ಚಿ ಹಚ್ಚಿದ ಒಲೆಯ ಮೇಲಿಡಿ. ಒಂದು ವಿಷಲ್ ಕೂಗಿದ ನಂತರ ಕುಕ್ಕರ್ ಅನ್ನು ತೆಗೆದಿಡಿ.
ಸೋರೆಕಾಯಿ ಅಥವಾ ಕುಂಬಳಕಾಯಿ ಹೆಚ್ಚುವ ಮುನ್ನವೇ 5 ಸ್ಪೂನ್ ತೊಗರಿಬೇಳೆ, 2.5 ಸ್ಪೂನ್ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ನೆನೆಯಲು ಇಡಿ. ಹದಿನೈದು ನಿಮಿಷ ನೆನೆಸಿದರೆ ಮಜ್ಜಿಗೆ ಹುಳಿಯ ರುಚಿ ಹೆಚ್ಚುತ್ತದೆ.
ಅನಂತರ ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ಬಾಣಲೆ ಅಥವಾ ಪಾತ್ರೆಯನ್ನು ಇರಿಸಿ. ಅದಕ್ಕೆ 2 ಚಮಚದಷ್ಟು ಅಡುಗೆ ಎಣ್ಣೆಯನ್ನು ಹಾಕಿ. ಅರ್ಧ ಸ್ಪೂನ್ ಮೆಂತ್ಯ ಕಾಳು, ಅರ್ಧ ಸ್ಪೂನ್ ಮೆಣಸಿನ ಕಾಳು, ಮೂರು ಸ್ಪೂನ್ ಜೀರಿಗೆ, ಒಂದೂವರೆ ಸ್ಪೂನ್ ಧನಿಯಾ, ಒಂದು ಇಂಚು ಹಸಿ ಶುಂಠಿ, ಎರಡು ಹಸಿ ಮೆಣಸಿನಕಾಯಿಗಳನ್ನು ಒಂದಾದ ನಂತರ ಒಂದರಂತೆ ಹಾಕಿ ಫ್ರೈ ಮಾಡಿ. ಆದ ನಂತರ, ಕರಿಬೇವು, ಹಸಿ ಕೊಬ್ಬರಿ, ಬೆಲ್ಲ, ನೆನೆಸಿಟ್ಟಿರುವ ತೊಗರಿಬೇಳೆ, ಕಡಲೆ ಬೇಳೆಯನ್ನು ನೀರು ತೆಗೆದು ಹಾಕಿ ಹುರಿಯಿರಿ.
ಹುರಿದು ಸಿದ್ಧಗೊಂಡಿರುವ ಈ ಮಿಶ್ರಣವನ್ನು ಸ್ವಲ್ಪ ಕಾಲ ಇಟ್ಟು ತಣ್ಣಗಾಗುವವರೆಗೆ ಕಾಯಿರಿ. ಅನಂತರ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ. ಅದಕ್ಕೆ ಒಂದು ಕಪ್ ಮೊಸರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕರಿಬೇವು, ಕೊತ್ತುಂಬರಿ ಸೊಪ್ಪು ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಕೊಡಿ. ಕುಕ್ಕರ್ ನಲ್ಲಿ ಬೇಯಿಸಿರುವ ಸೋರೆಕಾಯಿ ಅಥವಾ ಕುಂಬಳಕಾಯಿಯನ್ನು ನೀರಿನ ಸಮೇತ ಈ ಪಾತ್ರೆಗೆ ಸುರಿಯಿರಿ. ಎರಡು ನಿಮಿಷ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಅನಂತರ ಮಿಕ್ಸಿಯಲ್ಲಿ ಸಿದ್ಧಗೊಂಡಿರುವ ಮಿಶ್ರಣವನ್ನು ಪಾತ್ರೆಗೆ ಸುರಿದು ಎರಡು ನಿಮಿಷ ಬೇಯಿಸಿ. ಸ್ವಲ್ಪ ಹಿಂಗನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಇಷ್ಟು ಮಾಡಿದರೆ ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ಮಜ್ಜಿಗೆ ಹುಳಿ ತಯಾರಾಗಿರುತ್ತದೆ. ಅನ್ನ, ಮುದ್ದೆ ಜೊತೆಗೆ ಊಟ ಮಾಡಿ.




