ನಮ್ಮ ಮನೆಯಲ್ಲಿ ಇಂದು ಕಳಲೆ ಸಂಭ್ರಮ 

10 months ago

ಚೈನಾ, ಜಪಾನ್, ತೈವಾನ್, ಥೈಲ್ಯಾಂಡ್, ನೇಪಾಳ್, ಇಂಡೋನೇಷ್ಯಾ ಹಾಗೂ ಇಂಡಿಯಾ ದೇಶಗಳಲ್ಲಿ ಆಹಾರವಾಗಿ ಬಳಸುವ;  ಮುಖ್ಯವಾಗಿ ನಮ್ಮ ದೇಶದ ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯ ಋತುಮಾನದ ಆಹಾರವಾಗಿ ಪುರಾತನ ಕಾಲದಿಂದಲೂ ಬಳಸುತ್ತಾ ಬರುತ್ತಿದ್ದಾರೆ. ಆದರೆ ಇದರಲ್ಲಿ ಇರುವ ಪೋಷಕಾಂಶಗಳ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಅದರಲ್ಲಿ ಫೈಬರ್, ಕಾಪರ್, ವಿಟಮಿನ್ ಬಿ6, ವಿಟಮಿನ್ ಇ, ಮಿನರಲ್ಸ್, ಅಮೈನೊ ಆಮ್ಲಗಳಂತಹ ಆರೋಗ್ಯಕ್ಕೆ ಬೇಕಾದ ಹಲವು ಅಂಶಗಳಿವೆ.

ಇದನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿ ತಿನ್ನುವುದರಿಂದ ಬಹಳಷ್ಟು ಆರೋಗ್ಯದ ಉಪಯೋಗಗಳು ಇವೆ ಎಂದು ಬುಡಕಟ್ಟು ಜನ ನಂಬುತ್ತಾರೆ. ನಾವು ಬಿದಿರು ಕಳಲೆಯೊಂದಿಗೆ ಹಲಸಿನ ಬೀಜ, ಮೊಳಕೆ ಬರಿಸಿದ ಹೆಸರುಕಾಳು, ಅಲಸಂದೆ ಕಾಳು, ಕಡಲೆ ಕಾಳು, ಬಟಾಣಿ ಕಾಳು, ಅವರೆ ಕಾಳು, ಬೀನ್ಸ್ ಕಾಳುಗಳನ್ನು ಸೇರಿಸಿದ್ದೇವೆ, ಜೊತೆಗೆ ತರಕಾರಿಗಳು, ವಿವಿಧ ಸೊಪ್ಪುಗಳನ್ನೂ ಸೇರಿಸಿದ್ದೇವೆ.

ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯ,  ಜೀರ್ಣಾಂಗದ ಆರೋಗ್ಯ, ಮಧುಮೇಹದ ನಿಯಂತ್ರಣ ಮುಂತಾದ ಉಪಯೋಗಗಳು ಇವೆ. ಆದರೆ ಇದರಲ್ಲಿ ಸಯನೋಜೆನಿಕ್ ಹಾಗೂ ಗ್ಲೈಕೋಸೈಡ್‌ಗಳು ಇರುವುದರಿಂದ ಅದನ್ನು ಚೆನ್ನಾಗಿ ನೀರಿನಲ್ಲಿ ಮೂರುದಿನ ನೆನೆಸಿ, ತೊಳೆದು ಬೇಯಿಸಿ ನೀರು ತೆಗೆದು ಆನಂತರ ಅಡಿಗೆಗೆ ಬಳಸಬೇಕು.

ಒಟ್ಟಾರೆಯಾಗಿ ಋತುಮಾನದ ಆಹಾರವಾದ ಇದು ಬಹಳ ರುಚಿ ಯಾಗಿರುತ್ತದೆ. ಎರಡೂ ಮೂರು ದಿನಗಳ ಕಾಲ ನಡೆಯುವ ಪ್ರಕ್ರಿಯೆಯ ಭಾಗವಾಗಿ ತಾಳ್ಮೆಯಿಂದ ಸಿದ್ಧಪಡಿಸಿದ ಪದ್ಮಶ್ರೀಗೆ ಧನ್ಯವಾದಗಳನ್ನು ಹೇಳಲೇಬೇಕು.

ಬಿ.ಆರ್. ರಂಗಸ್ವಾಮಿ, ವಕೀಲರು ಹಾಗೂ ಸಂಪಾದಕರು ‘ಬಾರುಕೋಲು’

Leave a Reply