ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯಲ್ಲಿ (ಎಸ್.ಇ.ಪಿ) ಕನ್ನಡಕ್ಕೆ ಅನ್ಯಾಯ ಸರಿಪಡಿಸಲು ಪ್ರೊ ಬರಗೂರು ರಾಮಚಂದ್ರಪ್ಪ ಅವರು ಒತ್ತಾಯಿಸಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ತಮ್ಮ ಪತ್ರದಲ್ಲಿ ತಿಳಿಸಿರುವ ವಿಷಯದ ಬಗ್ಗೆ ಪರಿಶೀಲಿಸಲಾಯಿತು. ಈ ಹಿಂದಿನ CBCS ಮತ್ತು NEP ನೀತಿಯಲ್ಲಿ ಭಾಷಾ ವಿಷಯಗಳಿಗೆ ಯುಜಿಸಿ ಮಾರ್ಗದರ್ಶನದಲ್ಲಿ ದೇಶಾದ್ಯಂತ ಎರಡು ಭಾಷಾ ಕಲಿಕೆಗೆ, ಮೊದಲ ಎರಡು ಸೆಮಿಸ್ಟರ್‌ನಲ್ಲಿ ತಲಾ 02 ಕ್ರೆಡಿಟ್ ಗಳಂತೆ, ಪದವಿ ಅಧ್ಯಯನ ಅವಧಿಯಲ್ಲಿ ಒಟ್ಟು 08 ಕ್ರೆಡಿಟ್‌ಗಳನ್ನು ನಿಗದಿಪಡಿಸಿರುವುದು ತಮಗೆ ತಿಳಿದಿರುವ ವಿಷಯವೇ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ, ರಾಜ್ಯದಲ್ಲಿ ಕನ್ನಡದ ಅಸ್ಮಿತೆಯನ್ನು ಭಾಷಾ ಅಧ್ಯಯನ ಮೂಲಕ ಉಳಿಸಿ-ಬೆಳೆಸಲು, ತಮ್ಮನ್ನೂ ಒಳಗೊಂಡಂತೆ ಅನೇಕರ ಪ್ರಯತ್ನದ ಫಲವಾಗಿ ಭಾಷಾ ಕಲಿಕೆಗೆ ಹೆಚ್ಚಿಸಿದ್ದ ತಲಾ 03 ಕ್ರೆಡಿಟ್‌ಗಳ ಬೋಧನೆಗೆ ವಾರಕ್ಕೆ 04 ಗಂಟೆಗಳ ಬೋಧನೆಯನ್ನು ನಿಗದಿಪಡಿಸುತ್ತಾ ಬಂದಿರುವುದು ಸರಿಯಷ್ಟೆ. ಸದರಿ ಅಂಶವನ್ನು ಪ್ರಸ್ತುತ ಸರ್ಕಾರವು ಭಾಷಾ ಕಲಿಕೆಗೆ ತಲಾ 03 ಕ್ರೆಡಿಟ್ಗಳನ್ನು ಮೊದಲ ನಾಲ್ಕು ಸೆಮಿಸ್ಟರ್‌ನಲ್ಲಿ ನೀತಿ ಮತ್ತು ಆದೇಶದಲ್ಲಿ ಅಳವಡಿಸಿ ಖಾಯಂ ಪರಿಹಾರ ನೀಡಿರುವುದನ್ನು ತಾವು ಗಮನಿಸಬೇಕೆಂದು ಭಾವಿಸುತ್ತೇನೆ ಎಂದಿದ್ದಾರೆ.
ಆದರೆ ಭಾಷಾ ವಿಷಯಗಳ ಬೋಧನಾ ಅವಧಿಯ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ಗೊಂದಲು ಕಂಡುಬರುತ್ತಿದ್ದು, 2021-22 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ Guidelines for Model Curriculum ನಲ್ಲಿ ಸೂಚಿಸಿರುವಂತೆ, ಭಾಷಾ ವಿಷಯಗಳಿಗೆ 03 1 04 (L+T+P: 3+1+0) ಗಂಟೆಗಳ ಅವಧಿಯ ನಿರ್ಧೇಶನವನ್ನು ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ತಮ್ಮ ಮಾಹಿತಿಗೆ ತರಬಯಸುತ್ತ, ಶಿಕ್ಷಣ ವಲಯದ ಬಗ್ಗೆ ತಮಗಿರುವ ನಿರಂತರ ಕಾಳಜಿಯ ಬಗ್ಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.




