ಇವು ಯಾಕ್ರಿ ಹಿಂಗಾಡ್ತವೆ?

3 years ago

#high #drama #lokasabha #flyingkiss #rahulgandhi #smrithiirani gbpatil

ಹಿರಿಯರು ಹೇಳತ್ತಿದ್ದರು “ವೀನಾಶಕಾಲೇ ವೀಪರೀತ ಬುದ್ಧಿ” ಅಂತ. ಕೇಂದ್ರ ಸರಕಾರದ ಮಂತ್ರಿಗಳ ಮಾತುಗಳನ್ನು ಕೇಳಿದಾಗ ಇವರಿಗೆ ವೀನಾಶಕಾಲ ಬಂದಿದೆ ಎನಿಸದಿರದು. ಕರ್ನಾಟಕದಲ್ಲಿ ಸೋತು ಸುಣ್ಣವಾದರೂ, ಇಂದಿಗೂ ಸೋಲಿನ ಕಾರಣಗಳನ್ನು ಅರಿತಿಲ್ಲ ಇವರು. ಅದೆ ಹಳೆ ಚಾಳಿಯಲ್ಲಿ ಮುನ್ನೆಡೆದು ಧರ್ಮ ಧರ್ಮಗಳಲ್ಲಿ ದಳ್ಳುರಿಯನ್ನು ಸೃಷ್ಟಿಸುತ್ತಿದ್ದಾರೆ. ಕರ್ನಾಟಕದಲ್ಲಿ ಇವರು ಸೃಷ್ಟಿಸಿದ ಎಲ್ಲ ವಿವಾದಗಳು ಬೂಮರ್ಯಾಂಗ್ ಆದರೂ ಪಾಠ ಕಲಿಯಲಿಲ್ಲ, ಇಂದಿಗೂ ಹೊಸ ಯೋಚನೆಗಳು ಹೊಳೆಯುತ್ತಿಲ್ಲ ಈ ಮಹಾನುಭಾವರಿಗೆ. ಲೋಕ ಸಭೆಚುನಾವಣೆ ಹತ್ತಿರ ಬರುತ್ತಿದ್ದಂತೆ, ಅದು ಕೂಡ ಕರ್ನಾಟಕದ ದಾರಿಯಲ್ಲಿ ಸಾಗುತ್ತಿರುವ ಲಕ್ಷಣಗಳು ಅಧಿಕವಾಗುತ್ತಿದ್ದಂತೆ, ಸ್ತೀಮಿತ ಕಳೆದುಕೊಂಡವರಂತೆ ಕಿರುಚಾಡುತ್ತಿದ್ದಾರೆ ಈ ನಾಯಕರು.

ಒಂದು ಕಡೆ ಮಣಿಪುರ ಹತ್ತಿ ಉರಿಯುತ್ತಿದ್ದರೆ, ಹರ್ಯಾಣ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ವಿರೋಧ ಪಕ್ಷಗಳು ಹೀಗೇಕೆ? ಎಂದು ಕೇಳಿದರೆ ಸಮಂಜಸ ಉತ್ತರ ನೀಡುವಲ್ಲಿ ವಿಫಲವಾಗುತ್ತಿದೆ ಕೇಂದ್ರ ಸರಕಾರ. ಪ್ರಬುದ್ಧ ನಾಗರಿಕನ ಮುಂದೆ ನಗೆ ಪಾಟಲಿಗೆ ಈಡಾಗುತ್ತಲಿದೆ.

ಸಂಸತ್ತಿನಲ್ಲಿ ರಾಹುಲ್ ಗಾಂಧಿಗೆ ಕೌಂಟರ್ ಕೊಡಲು ಮಾಜಿ ನಟಿಮಣಿಯನ್ನು ಮುಂದೆ ಬಿಟ್ಟದ್ದಾರೆ. ಅವಳಿಗೆ ಕ್ಯಾರೆ ಎನ್ನದ ರಾಹುಲ್ ಗಾಂಧಿಗೆ ಮಸಿ ಬಳಿಯಲು ಮತ್ತೊಂದು ಪ್ರಹಸನಕ್ಕೆ ಅಣಿಯಾದಳು ಕಿರು ಪರದೆಯ ನಟಿ. ಹಿಂದೊಮ್ಮೆ “ಸಾಸ್ ಭಿ ಕಭಿ ಬಹು ಥಿ” ಯ ಹಿಂದಿ ಸೀರಿಯಲ್ ನಲ್ಲಿಯ ಸಾಸ್ ಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟನಂತೆ. ಅದರಿಂದ ನಟಿಮಣಿಯ ಮರ್ಯಾದೆ ಹಾಳಾಯಿತಂತೆ. ರಾಹುಲ್ ಕೊಟ್ಟ ಫ್ಲೈಯಿಂಗ್ ಕಿಸ್ ಭಾರತೀಯ ಸಂಸ್ಕೃತಿಯದಲ್ಲವಂತೆ. ಇದು ಅವಳಿಗೆಷ್ಟೇ ಮಾಡಿದ ಅವಮಾನವಲ್ಲವಂತೆ, ಇಡೀ ಭಾರತೀಯ ನಾರಿಗೆ ಮಾಡಿದ ಅವಮಾನವಂತೆ. ಹೀಗೆಂದು ಲೋಕಸಭಾ ಸ್ಪೀಕರ್ ಗೆ ಕಂಪ್ಲೇಂಟ್ ದಾಖಲಿಸುತ್ತಾರಂತೆ ಸಾಸುಮಾ.

ಆದರೆ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸಾಸುಮಾಗೆ ಮಣಿಪುರದ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಪ್ರದಕ್ಷಿಣೆ ಹಾಕಿಸಿದಾಗ ಭಾರತೀಯ ಸಂಸ್ಕೃತಿಗೆ ದಕ್ಕೆಬರಲಿಲ್ಲ. ಈ ಸಾಸುಮಾ ಸಂತ್ರಸ್ಥ ಮಹಿಳೆಯರ ಬಗ್ಗೆ ಒಂದೇ ಒಂದು ಶಬ್ದವನ್ನು ಸಹ ಮಾತಾಡಲಿಲ್ಲ.

ಕುಸ್ತಿ ಆಡುವ ಹೆಣ್ಣು ಮಕ್ಕಳನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ತನ್ನದೆ ಪಕ್ಷದ (ಬಿ. ಜೆ. ಪಿ) ಸಂಸದನ ನಡೆ ಭಾರತೀಯ ಸಂಸ್ಕೃತಿಯನ್ನು ವೃದ್ದಿಸುತ್ತಿರಬಹುದೆ? ಸಾಸುಮಾನ ಕಣ್ಣಲ್ಲಿ.

ಸಾಸುಮಾ ಪಾಲಿಸುವ ಮನುಸ್ಮೃತಿಯಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆ? ಸ್ವತಂತ್ರ ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯೂ ಇವರ ಕಣ್ಣಲ್ಲಿ ಎರಡನೆಯ ದರ್ಜೆಯ ಪ್ರಜೆಯೇ? ಪ್ರಜಾಪ್ರಭುತ್ವದ ದೇಗುಲವನ್ನು ದೇಶದ ಪ್ರಥಮ ಪ್ರಜೆ ಉದ್ಘಾಟಿಸಬೇಕಿತ್ತಲ್ಲವೆ ಸಾಸುಮಾ? ಮಹಿಳೆಯಿಂದ ಸಂಸದ್ ಭವನ ಉದ್ಘಾಟನೆಗೊಂಡಿದ್ದರೆ ಭಾರತೀಯ ಸಂಸ್ಕೃತಿಗೆ ಚ್ಯುತಿ ಬರುತ್ತಿತ್ತಲ್ಲವೆ ನಿಮ್ಮ ಯೋಚನೆಯಲ್ಲಿ ಸ್ಮೃತಿ ಇರಾಣಿಯವರೆ?

ಸಾಕು ಬಿಡು ಸಾಸುಮಾ. ನಿಮಗೆ ಸರಿಯಾಗಿ ದೇಶವನ್ನು ಆಳಲು ಬರುವುದಿಲ್ಲ. ಮರಳಿ ಟೆಲಿವಿಷನ್ ಸೀರಿಯಲ್ ನಲ್ಲಿ ಅತ್ತೆಯ ಪಾತ್ರವನ್ನು ಮಾಡಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಗುಜರಾತಿಗೆ ಪ್ರಯಾಣಿಸಿಬಿಡಿ ಸಾಕು.

  • ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply