ನುಡಿ ಹಬ್ಬ ಅಚರಣೆ
ಓಲೈಕೆ ರಾಜಕಾರಣದಿಂದ ಕನ್ನಡ ಭಾಷೆ ಅಧೋಗತಿಗೆ ತಲುಪಿದೆ
ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಿ ಅಚರಣೆ ಮಾಡೋಣ: ಸಾ.ರಾ.ಗೋವಿಂದು
ಬೆಂಗಳೂರು: ಹಾವನೂರು ವೃತ್ತದಲ್ಲಿ ರಾಜಾಜಿನಗರ ವಿಧಾನಸಭಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಮತ್ತು ನುಡಿ ಹಬ್ಬ ಅಚರಿಸಲಾಯತು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ಮಾಜಿ ಮೇಯರ್ ಗಳಾದ ಜಿ.ಪದ್ಮಾವತಿ, ಜೆ.ಹುಚ್ಚಪ್ಪ, ನಿರ್ಮಾಪಕ ಸಾ.ರಾ.ಗೋವಿಂದು, ಹಿರಿಯ ರಾಜಕಾರಣಿ ಆರ್.ವಿ.ಹರೀಶ್, ಮಾಜಿ ಉಪಮೇಯರ್ ರಂಗಣ್ಣ, ರಾಜಾಜಿನಗರ ವಿಧಾನಸಭಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಎನ್.ರಾಧಕೃಷ್ಣ, ಮಾಜಿ ಅಧ್ಯಕ್ಷ ಎಲ್.ಲೋಕೇಶ್, ಯುವ ಕಾಂಗ್ರೆಸ್ ಮುಖಂಡರಾದ ರಘುವೀರ್ ಗೌಡ, ಪಲ್ಲವಿ ಪ್ರಭು, ಚಿಲುಮೆ ರವಿಕುಮಾರ್ ಫೌಂಡೇಷನ್ ಅಧ್ಯಕ್ಷ ರವಿಕುಮಾರ್ ಧ್ವಜಾರೋಹಣ ಮಾಡಿ, ತಾಯಿ ಭುವನೇಶ್ವರಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಾ.ರಾ.ಗೋವಿಂದು ಮಾತನಾಡಿ, ನವೆಂಬರ್ ಕನ್ನಡಿಗರಾಗಬೇಡಿ. ಪ್ರತಿನಿತ್ಯ ಕನ್ನಡ ಭಾಷೆಯ ನಿತ್ಯೋತ್ಸವದಂತೆ ಆಚರಿಸಬೇಕು. ಎಲ್ಲ ಪಕ್ಷಗಳು ಓಲೈಕೆ ರಾಜಕಾರಣದಿಂದ ಕನ್ನಡ ಭಾಷೆಗೆ ಅಧೋಗತಿಗೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷ ಸೂತ್ರವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು. ಹಿಂದಿ ಭಾಷೆ ಹೇರಿಕೆ ವಿರುದ್ದ ನಮ್ಮ ಪ್ರತಿಭಟನೆ. ಸಂಪರ್ಕಭಾಷೆಯಾಗಿ ಇಂಗ್ಲೀಷ್ ಬೇಕು ಎಂದರು.
ಆರ್.ವಿ.ಹರೀಶ್ ಮಾತನಾಡಿ, ರಾಜಾಜಿನಗರದಲ್ಲಿ ಕನ್ನಡ ಸಮ್ಮೇಳನ ಅದ್ದೂರಿಯಾಗಿ ಮುಂದಿನ ದಿನಗಳಲ್ಲಿ ಆಚರಿಸೋಣ, ಕನ್ನಡ ಭಾಷೆ ಉಳಿಸಿ, ಬೆಳಸಿದ ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ಮಾಡೋಣ ಎಂದರು.
ಎಂ.ಡಿ.ಲಕ್ಷ್ಮಿನಾರಾಯಣ್ ಮಾತನಾಡಿ, 365 ದಿನಗಳು ನಮ್ಮ ಮನೆ, ಮನಸ್ಸು ಕನ್ನಡಮಯವಾಗಿದೆ. ಆದರೆ ಇಂದು ಕನ್ನಡ ಭಾಷೆ ಮಾತನಾಡುವವರು ಸಂಖ್ಯೆ ನಗರ ಪ್ರದೇಶದಲ್ಲಿ ಕಡಿಮೆಯಾಗಿದೆ. ಕನ್ನಡ ಭಾಷೆಗೆ ಮೇರುನಟ ಡಾ.ರಾಜ್ ಕುಮಾರ್ ಅವರ ಕೊಡುಗೆ ಅಪಾರ ಎಂದರು.
ಜಿ.ಪದ್ಮಾವತಿ ಮಾತನಾಡಿ, ಎಲ್ಲೆ ಇರು ಎಂತಾದರು ಇರು ಎಂದೆಂದಗೂ ಕನ್ನಡವಾಗಿರು ಎಂಬ ರಾಷ್ಟ್ರಕವಿ ಕುವೆಂಪು ನುಡಿದಂತೆ ನಾವು ಎಲ್ಲೆ ಇದ್ದರು ಕನ್ನಡಿಗರು ಎಂದು ಹೆಮ್ಮೆಯಿಂದ ಕೇಳಬೇಕು ಎಂದರು.
ಜೆ.ಹುಚ್ಚಪ್ಪ ಮಾತನಾಡಿ, ರಾಜಾಜಿನಗರ ಕನ್ನಡ ಪರ ಹೋರಾಟಗಾರರ ಕೇಂದ್ರ ಸ್ಥಾನವಾಗಿದೆ. ಈ ಸಂಜೆ ವೆಂಕಟೇಶ್, ಜಾಣಗೆರೆ ವೆಂಕಟರಾಮಯ್ಯ, ಸಾ.ರ.ಗೋವಿಂದುರವರ ನೇತೃತ್ವದಲ್ಲಿ ಕನ್ನಡ ಭಾಷೆ ಉಳಿಸಿ ಬೆಳಸಲು ಹೋರಾಟ ಮಾಡಲಾಯಿತು. ಕನ್ನಡ ಭಾಷೆ ಸುಂದರ ಭಾಷೆಯಾಗಿದೆ. 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅನ್ಯ ಭಾಷಿಕರು ಕನ್ನಡ ಭಾಷೆ ಕಲಿಯಬೇಕು. ಎಲ್ಲರು ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದರು.
ಟಿ.ಎನ್.ರಾಧಕೃಷ್ಣ ಮಾತನಾಡಿ ಕನ್ನಡವೇ ನಮ್ಮ ಉಸಿರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರತಿಯೊಬ್ಬರು ವ್ಯವಹಾರಿಕ ಭಾಷೆಯಾಗಿ ಕನ್ನಡ ಬಳಸಬೇಕು ಎಂದರು.
ಚಿಲುಮೆ ರವಿಕುಮಾರ್ ಮಾತನಾಡಿ, ನೆಲ, ಜಲ, ಭಾಷೆಯ ಉಳಿಸಿ, ಬೆಳಸಲು ಎಲ್ಲರು ಸಂಘಟಿತರಾಗಿ ಹೋರಾಟ ಮಾಡಬೇಕು. ನಾವು ಎಲ್ಲೆ ಇದ್ದರು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಬೇಕು ಎಂದರು.
ಲೋಕೇಶ್ ಮಾತನಾಡಿ, 15 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರು ಕನ್ನಡಿಗರು. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕನ್ನಡ ಭಾಷೆಗೆ ಉಳಿಸಿ, ಬೆಳಸಲು ಉತ್ತಮ ಸಹಕಾರ ನೀಡಿರುವ ಕಾರಣ ಕನ್ನಡಿಗರಿಗೆ ಸಿದ್ದರಾಮಯ್ಯರವರು ಕನ್ನಡರಾಮಯ್ಯರವರು ಆಗಿದ್ದಾರೆ ಎಂದರು.
ಕನ್ನಡ ಪರ ಹೋರಾಟಗಾರರಾದ ಸುಧಾಕರ್ ನಾರಾಯಣಪ್ಪ ಜಾಲಗೆರೆ, ಪ್ರದೀಪ್ ಬಾಬು, ಜೈಕುಮಾರ್ ಗೌಡ, ಕಣ್ಣಯ್ಯ, ಅಂಜನಮೂರ್ತಿ, ಶಂಕರ್ ಸೇರಿದಂತೆ ನೂರಾರು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








