ಬೆಂಗಳೂರು: ಸಿ ವಿ ರಾಮನ್ ನಗರದಲ್ಲಿರುವ ಲಿಟಲ್ ವಿಲ್ಲೆ ಪ್ರೀ ಸ್ಕೂಲ್ ನಲ್ಲಿ ಅದ್ಧೂರಿಯಾಗಿ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಲಿಟಲ್ ವಿಲ್ಲೆ ಭಾರತದಾದ್ಯಂತ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಲೆಯನ್ನು ಹೊಂದಿರುವ ಅತಿ ದೊಡ್ಡ ಪ್ರೀ ಸ್ಕೂಲ್ ಸಮೂಹವಾಗಿದ್ದು, ವಾರ್ಷಿಕೋತ್ಸವ ಸಂದರ್ಭದಲ್ಲಿ ದೇಶದಲ್ಲಿ ಪ್ರೀ ಸ್ಕೂಲ್ ಶಿಕ್ಷಣಕ್ಕೆ ಹೆಚ್ಚುತ್ತಿರುವ ಮಹತ್ವವನ್ನು ಸಾರಲಾಯಿತು.
‘ಒಂದು ಅದ್ಭುತ ಕುಟುಂಬ’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿಯರ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಮಕ್ಕಳ ಪೋಷಕರು ಹಾಗೂ ಅಜ್ಜ-ಅಜ್ಜಿಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಪ್ರಸ್ತುತ ಈ ಶಾಲೆಯಿಂದ ಹೊರಹೋಗುತ್ತಿರುವ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಆಶಾ ಅನಂತೇಶ್ ಮಾತನಾಡಿ, ಭಾರತದಲ್ಲಿ ಪ್ರೀ ಸ್ಕೂಲ್ ದಾಖಲಾತಿಯಲ್ಲಿ ಬಹಳಷ್ಟು ಏರಿಕೆ ಉಂಟಾಗಿದೆ. ಸುಮಾರು ಶೇ.80ರಷ್ಟು 3 ವರ್ಷದ ಮಕ್ಕಳು ಮತ್ತು ಸುಮಾರು ಶೇ.85ರಷ್ಟು 4 ವರ್ಷದ ಮಕ್ಕಳು ಪ್ರೀ ಸ್ಕೂಲ್ ಗೆ ದಾಖಲಾಗಿದ್ದಾರೆ. 3-5 ವರ್ಷದ ಮಕ್ಕಳನ್ನು ಪ್ರೀ ಸ್ಕೂಲ್ ಗೆ ದಾಖಲಾತಿ ಮಾಡುವುದರಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿವೆ ಎಂದರು.
ಕೆಲಸಕ್ಕೆ ಹೋಗುವ ಪೋಷಕರಿಗಾಗಿ ನಾವು ಡೇಕೇರ್ ಸೇವೆಗಳನ್ನು ಸಹ ಒದಗಿಸುತ್ತೇವೆ. ನಮ್ಮ ಸಿಬ್ಬಂದಿಗಳು ಮಕ್ಕಳಿಗೆ ಅವರ ಪೋಷಕರು ತೋರುವ ಪ್ರೀತಿಯನ್ನು ತೋರುತ್ತಾರೆ ಮತ್ತು ಆರೈಕೆ ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿ ಮತ್ತು ಪೋಷಕರು ಹಾಜರಿದ್ದರು.







