ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿವೆ. ಇವು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಕಾನೂನುಗಳು ಎಂದು ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಹೇಳಿದರು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ರವಿವಾರ ಹಟ್ಟಿಯಲ್ಲಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಮುಖ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಫಲವಾಗಿ ಬಂದ ಕಾರ್ಮಿಕ ಪರ ಕಾನೂನುಗಳನ್ನು ರದ್ದುಪಡಿಸಿ, ದೇಶಿ–ವಿದೇಶಿ ಬಂಡವಾಳದಾರರ ಪರವಾಗಿ ಕೇಂದ್ರ ಸರ್ಕಾರ ಈ ಸಂಹಿತೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಘದ ಅದ್ಯಕ್ಷ ಕೆ.ಮಹಾಂತೇಶ್ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ಲಾಭವನ್ನು ಹೆಚ್ಚಿಸಲು ರೂಪಿಸಿ ಜಾರಿಮಾಡಲಾಗಿರುವ ಈ ಸಂಹಿತೆಗಳಿಂದಾಗಿ ಕಾರ್ಮಿಕ ವರ್ಗ ಭವಿಷ್ಯದಲ್ಲಿ ತನ್ನ ಹಕ್ಕುಗಳನ್ನು ಕಳೆದುಕೊಂಡು ತೀವ್ರ ಶೋಷಣೆಗೆ ಒಳಗಾಗಲಿದೆ ಆದ್ದರಿಂದ ಈ ನೀತಿಗಳು ಜಾರಿಯಾಗದಂತೆ ಕಾರ್ಮಿಕ ವರ್ಗ ಐಕ್ಯತೆಯಿಂದ ಹೋರಾಡುವುದು ಇವತ್ತಿನ ಅನಿವಾರ್ಯತೆಯಾಗಿದೆ. ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಕೂಡ ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಇತರೆ ಜನವಿಭಾಗಗಳನ್ನು ಸೇರಿಸಿ ಫೆಬ್ರವರಿ 12 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫೀ, ಉಪಾಧ್ಯಕ್ಷ ಶಾಂತಪ್ಪ ಆನವೇರಿ, ಕಾರ್ಯದರ್ಶಿಗಳಾದ ವೆಂಕೋಬ ಮಿಯಾಪುರ, ಕೋಟಾ ಜಮದಗ್ನೀ, ಮಹ್ಮದ್ ಹನೀಫ್, ರಮೇಶ ಬಾಬು, ನಾಗರಾಜ, ಗೌಸಮೀಯಾ, ಖಜಾಂಚಿ, ಸಿದ್ದಪ್ಪಮುಂಡರಗಿ, ಉಪ ಖಜಾಂಚಿ ಚಂದ್ರಶೇಖರ್ ಗುಂಡಪ್ಪ ಗೌಡ, ಹನುಮಂತಗೌಡ, ಸಿಐಟಿಯು ಮುಖಂಡರಾದ, ಮೈನೂದ್ದೀನ್ ಮಾಲಗತ್ತಿ, ಸೋಮಣ್ಣ,ರಮೇಶ ವೀರಾಪೂರ, ಅಲ್ಲಾಭಕ್ಷ್ಯ, ಪಕೃದ್ದೀನ್ ಹುಸೇನ ಭಾಷಾ ಬೂಪೂರ ಬಾಬು, ಯಮನೂರ ಕೋಟಾ, ನವನೂರು ಬಸವರಾಜ್, ವೆಂಕಟೇಶ ಗೋರ್ಕಲ್, ವೆಂಕಟೇಶ ಮೇದಾನಪುರ, ರಫೀ ಮಲ್ಲಾಪುರ ಸೇರಿದಂತೆ ನೂರಕ್ಕೂ ಅಧಿಕ ಜನ ಭಾಗವಹಿಸಿದ್ದರು.



