ಪ್ರೀತಿ, ಸಹಾನುಭೂತಿಯಲ್ಲೂ ತಾರತಮ್ಯ

1 year ago

ಪ್ರೀತಿ, ಸಹಾನುಭೂತಿಯಲ್ಲೂ ತಾರತಮ್ಯ

ಉಳ್ಳವರ ಮನೆಯಲ್ಲಿ ನಾಯಿ ಸತ್ತರೆ ಅದರ ಮುಂದೆ ನಿಂತು ಕಣ್ಣೀರು ಹಾಕುವ ಕೆಲವು ಮಂದಿ
ಹತ್ತಾರು ವರ್ಷಗಳ ಕಾಲ ಜೊತೆಗೆ ಬಾಳಿ ಬದುಕಿದವರ ಮನೆಯಲ್ಲಿ ಸಾಮಾನ್ಯನೆಂಬ ಕಾರಣಕ್ಕೆ, ಪ್ರಮುಖರು ಸತ್ತರು ಅತ್ತ ತಿರುಗಿ ನೋಡುವುದಿಲ್ಲ.

ಹೆಸರು, ಕೀರ್ತಿ, ಸಂಪತ್ತು ಹೊಂದಿರುವವರು ಮನೆಯ ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಸಂಭ್ರಮಿಸುವ ಮಂದಿ
ಆತ್ಮೀಯರನಿಸಿಕೊಂಡ ಸಾಮಾನ್ಯರ ಮನೆಗಳ ಪ್ರಮುಖ ಕಾರ್ಯಕ್ರಮಗಳಲ್ಲ ಪಾಲ್ಗೊಳ್ಳಲು ಸಮಯದ ಅಭಾವ ಕಾಡುತ್ತದೆ.

ಒಂದಷ್ಟು ಅನುಕೂಲವಾಗುವ, ಮುಂದೊಂದು ದಿನ ನೆರವಿಗೆ ದೊರೆಯುತ್ತಾರೆಂಬ ಆಸೆಯಿಂದ ಅಧಿಕಾರಸ್ಥರ, ಆಗರ್ಭ ಶ್ರೀಮಂತರ ಮನೆಯ ಮಕ್ಕಳ ಸಣ್ಣಪುಟ್ಟ ಸಾಧನೆಗಳನ್ನ ಹಾಡಿ ಹೊಗಳುವ ಸ್ವಾರ್ಥಿಗಳು, ತಮ್ಮೊಡನಿರುವ ಏನು ಅಲ್ಲದವರ ಮನೆಯ ಮಕ್ಕಳ ದೊಡ್ಡ ದೊಡ್ಡ ಸಾಧನೆಗಳ ಬಗ್ಗೆ ಸಣ್ಣ ಅಭಿಮಾನದ ಮಾತುಗಳನ್ನು ಆಡುವುದಿಲ್ಲ.

ಎಲ್ಲ ಕಾಲದಲ್ಲೂ ಜೊತೆಗಾರರಾಗಿದ್ದು ಸಂಕಷ್ಟದಲ್ಲಿ ಹೆಗಲಿಗೆ ಹೆಗಲು ಕೊಟ್ಟವರ ಬಿಟ್ಟು, ಹೊಸ ಜನರ ಹೊಳಪಿನ, ಆಕರ್ಷಣೆಗೆ ಗುರಿಯಾಗಿ ಅವರ ಸೇರುವ ಮಂದಿ ಸಾಕಷ್ಟಿದ್ದಾರೆ.

ತಮ್ಮ ಮನೆಯ ಸಂಕಷ್ಟದ ಸಮಯದಲ್ಲಿ, ಜೊತೆಯಾಗಿದ್ದವರ ಜೊತೆಗಾರರ ಮನೆಯ ಸಂಕಷ್ಟದ ಸಮಯದಲ್ಲಿ ತಾವು ಇರಬೇಕೆಂದು ಉದಾರತೆ ಉಳ್ಳವರ ಸಂಖ್ಯೆ ಕ್ಷೀಣಿಸುತ್ತಿದೆ.

ಪ್ರೀತಿಯನ್ನ ತೋರಿಸುವುದರಲ್ಲಿ, ಸಹಾನುಭೂತಿಯನ್ನು ವ್ಯಕ್ತಪಡಿಸುವುದರಲ್ಲಿ, ಬಡವ, ಶ್ರೀಮಂತರ ಎಂಬ, ಸಾಮಾನ್ಯರು, ಅಸಮಾನ್ಯರೆಂಬ ತಾರತಮ್ಯಗಳ ಎಣಿಸುವ ಮನಸ್ಸುಗಳು ಹೆಚ್ಚಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply