ಮೈಸೂರು: ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಹೆಸರಿನಲ್ಲಿ ಮೈಸೂರಿನ ಅನ್ವೇಷಣಾ ಸೇವಾ ಟ್ರಸ್ಟ್ ಕೊಡಮಾಡುವ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಅಧ್ಯಕ್ಷರು ಹಾಗೂ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಪ್ರದಾನ ಮಾಡಿದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮೈಸೂರು ನಗರದ ಜೆ. ಎಲ್. ಬಿ ರಸ್ತೆಯ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಫೆಬ್ರವರಿ 16 ರ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ನಾಡಿನ ಆರು ಜನ ಸಾಧಕರಾದ ಮೈಸೂರಿನ ಹಿರಿಯ ಪತ್ರಕರ್ತ, ಚಿಂತಕ ಟಿ. ಗುರುರಾಜ್, ಸಂಘಟಕ, ಹೋರಾಟಗಾರ ರಮೇಶ್ ಸುರ್ವೆ, ಅಖಿಲಭಾರತ ಅಂಚೆ ನೌಕರರ ಸಂಘ ಅಧ್ಯಕ್ಷರಾದ ಎನ್.ಕೃಷ್ಣ, ಹಾಸನ ಜಿಲ್ಲೆಯ ಖ್ಯಾತ ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್, ಚಿತ್ರದುರ್ಗದ ವಕೀಲರು ಹಾಗೂ ಸಂಶೋಧಕ ಮಾಲತೇಶ್ ಅರಸ್, ಚಿಂತಕ ಹಿರೇನಲ್ಲೂರು ಶಿವು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿ, ಸರ್ಕಾರದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ, ಕರ್ನಾಟಕ ಸರ್ಕಾರದ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಅರಸ್ , ವಿಧಾನ ಪರಿಷತ್ ಸದಸ್ಯ, ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಟ್ರಸ್ಟ್ ಸ್ಥಾಪಕ ಆರ್ಯ ಅಮರ್‌ನಾಥರಾಜೇ ಅರಸ್, ಅರಸು ಜಾಗೃತಿ ಅಕಾಡೆಮಿ ಉಪಾಧ್ಯಕ್ಷರಾದ ಎಚ್.ಎ. ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್ ಮೊದಲಾದವರು ಹಾಜರಿದ್ದರು.






