ತೆಲಂಗಾಣದ ಸಿರ್ಸಿಲ್ಲಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆ.ಚಂದ್ರಶೇಖರ್ ರಾವ್ ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಏಪ್ರಿಲ್ 6 ರಂದು ಚುನಾವಣಾ ಸಮಿತಿಗೆ ದೂರು ನೀಡಿತ್ತು.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ದೆಹಲಿ: ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ಅವರು ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕಾರಣಕ್ಕಾಗಿ ಚುನಾವಣಾ ಆಯೋಗ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ಹೇರಿದೆ.
ಭಾರತ್ ರಾಷ್ಟ್ರ ಸಮಿತಿ ಅಧ್ಯಕ್ಷರಾಗಿರುವ ಕೆ.ಚಂದ್ರಶೇಖರ್ ರಾವ್, ಲೋಕಸಭೆ ಚುನಾವಣೆ ಪ್ರಚಾರಕ್ಕೆ ಎರಡು ದಿನಗಳ ಕಾಲ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ಪ್ರದರ್ಶನಗಳು ಮತ್ತು ಸಂದರ್ಶನಗಳು ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದ್ದು, ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದೆ.
ಆಕ್ಷೇಪಾರ್ಹ ಹೇಳಿಕೆಗಳ ಕಾರಣಕ್ಕೆ ಈ ಹಿಂದೆ ಚಂದ್ರಶೇಖರ್ ರಾವ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿತ್ತು. ಏಪ್ರಿಲ್ 23 ರಂದು ನೋಟಿಸ್ಗೆ ಪ್ರತಿಕ್ರಿಯಿಸಿದ ಅವರು, ಆರೋಪವನ್ನು ನಿರಾಕರಿಸಿದ್ದರು. ಭಾಷಾಂತರದಲ್ಲಿ ಅವರ ಮೂಲ ಹೇಳಿಕೆಯ ಅರ್ಥವು ಕಳೆದುಹೋಗಿದೆ ಎಂದಿದ್ದರು.
ತೆಲಂಗಾಣ ಮತ್ತು ಸಿರ್ಸಿಲ್ಲಾದಲ್ಲಿ ಚುನಾವಣಾ ಉಸ್ತುವಾರಿ ಅಧಿಕಾರಿಗಳು ತೆಲುಗು ಜನರಲ್ಲ ಮತ್ತು ಅವರು ತೆಲುಗು ಸ್ಥಳೀಯ ಉಪಭಾಷೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಕಾಂಗ್ರೆಸ್ ತನ್ನ ಸುದ್ದಿಗೋಗೋಷ್ಠಿಯಲ್ಲಿ ಸಂದರ್ಭಾನುಸಾರವಾಗಿ ಕೆಲವು ವಾಕ್ಯಗಳನ್ನು ಆರಿಸಿಕೊಂಡಿದೆ. ವಾಕ್ಯಗಳ ಇಂಗ್ಲಿಷ್ ಅನುವಾದವು ಸರಿಯಾಗಿಲ್ಲ ಮತ್ತು ತಿರುಚಲ್ಪಟ್ಟಿದೆ ಎಂದಿದ್ದರು.
ಚಂದ್ರಶೇಖರ್ ರಾವ್ ಅವರು, ನನ್ನ ಟೀಕೆಗಳು ಕಾಂಗ್ರೆಸ್ನ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಿದೆ ಮತ್ತು ಚುನಾವಣಾ ಆಯೋಗ ಹೇಳಿದಂತೆ ಯಾವುದೇ ಕಾಂಗ್ರೆಸ್ ನಾಯಕರ ವೈಯಕ್ತಿಕ ಅಂಶಗಳಿಗೆ ಹೋಗಿಲ್ಲ ಎಂದಿದ್ದರು.
ಕಾಂಗ್ರೆಸ್ ಸಲ್ಲಿಸಿದ ದೂರು ಮತ್ತು ಕೆ.ಚಂದ್ರಶೇಖರ್ ರಾವ್ ಅವರ ಉತ್ತರಗಳನ್ನು ಪರಿಶೀಲಿಸಿದ ನಂತರ, ಬಿ.ಆರ್.ಎಸ್. ಮುಖ್ಯಸ್ಥ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು 48 ಗಂಟೆಗಳ ಕಾಲ ಪ್ರಚಾರದಿಂದ ನಿಷೇಧಕ್ಕೊಳಗಾಗಿದ್ದರು. ಇದೀಗ ಇದೇ ಅವಧಿಯಲ್ಲಿ ನಿಷೇಧಕ್ಕೊಳಗಾದ ಎರಡನೇ ರಾಜಕಾರಣಿ ಎಂಬ ಕುಖ್ಯಾತಿಗೆ ಕೆ ಚಂದ್ರಶೇಖರ ರಾವ್ ಭಾಜನರಾಗಿದ್ದಾರೆ.




