ಕಳೆದ ಕೆಲವು ವರ್ಷದ ಹಿಂದೆ ಬೆಂಗಳೂರು ನಗರದ ಪೌರಕಾರ್ಮಿಕರ ಹಿತ ದೃಷ್ಟಿಯಿಂದ ಎಲ್ಲ ವಾರ್ಡ್ ಗಳಲ್ಲಿ ಸುವಿಧ ಕ್ಯಾಬಿನ್ ಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಯಿತು. ಆದರೆ ಇಲ್ಲಿಯ ತನಕ ಕೆಲವೇ ಕೆಲವು ವಾರ್ಡ್ ಗಳಲ್ಲಿ ಇಂತಹ ವ್ಯವಸ್ಥೆ ಇದೆ. ಉಳಿದ ಕಡೆ ಇವುಗಳ ನಿರ್ಮಾಣದ ವಿಚಾರದಲ್ಲಿ ಯಾರೂ ಆಸಕ್ತಿಯನ್ನ ತೋರಿಸುತ್ತಿಲ್ಲ .
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಮಹಿಳಾಪೌರಕಾರ್ಮಿಕರು ತಮ್ಮ ಬಟ್ಟೆಗಳನ್ನ ಬದಲಾಯಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಹಾಗೂ ಊಟ ತಿಂಡಿಯನ್ನ ತಿನ್ನುವ ಸಲುವಾಗಿ ಇಂತಹ ಕ್ಯಾಬಿನ್ ಗಳನ್ನು ನಿರ್ಮಿಸುವಂತಹ ಉದ್ದೇಶವಿತ್ತು. ಇದರಲ್ಲಿ ಅವರಿಗೆ ಬೇಕಾದಂತಹ ಶೌಚಾಲಯ ವ್ಯವಸ್ಥೆಯನ್ನು ಸಹ ಕಲ್ಪಿಸಿ ಕೊಡುವಂತಹ ಉದ್ದೇಶವು ಇದರಲ್ಲಿತ್ತು. ಆದರೆ ಇಲ್ಲಿಯ ತನಕ ಇಂತಹ ಸೂಕ್ಷ್ಮವಾದಂತಹ ಅತ್ಯಂತ ಅವಶ್ಯವಾಗಿರುವಂತಹ ಕ್ಯಾಬಿನ್ ಗಳ ರಚನೆಯ ವಿಚಾರದಲ್ಲಿ ಯಾರೂ ಆಸಕ್ತಿಯನ್ನು ತೋರಿಸದೆ ಇರುವುದು ಬೇಸರದ ಸಂಗತಿಯಾಗಿದೆ.
ಮಹಿಳಾ ಪೌರಕಾರ್ಮಿಕರು ಈ ವಿಚಾರದಿಂದಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಉದ್ಯಾನವನಗಳಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇನ್ನು ಬಟ್ಟೆಯನ್ನ ಬದಲಾಯಿಸಲು ಮುಜುಗರವಾಗುವಂತಹ ಪರಿಸ್ಥಿತಿಗಳಲ್ಲಿ ನಿರ್ಮಾಣವಾಗಿದೆ. ತಿಂಡಿ ತಿನ್ನಲು ವ್ಯವಸ್ಥೆ ಜಾಗವಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಕೆಲವು ನಾಗರಿಕರು ಆಯಾಸಗೊಂಡು ಮಹಿಳಾ ಪೌರಕಾರ್ಮಿಕರು ಯಾರಾದರೂ ಮನೆಗಳ ಮುಂದೆ ಕುಳಿತರೆ, ಅವರನ್ನು ಮನುಷ್ಯತ್ವ ಇಲ್ಲದ ಮಂದಿ ವಕ್ರದೃಷ್ಟಿಯಿಂದ ನೋಡುತ್ತಾರೆ. ಇಲ್ಲವೇ ನೇರವಾಗಿ ನಿರ್ಗಮಿಸುವಂತೆ ಸಿಟ್ಟಿನಿಂದ ಹೇಳುತ್ತಾರೆ. ಇಂತಹ ಅನೇಕ ಪ್ರಕರಣಗಳು ನಡೆದಂತಹ ಉದಾಹರಣೆಗಳನ್ನು ಇವರು ಪದೇ ಪದೇ ನೋವಿನಿಂದ ಹೇಳಿಕೊಳ್ಳುತ್ತಾರೆ.
ಈ ಹಿನ್ನೆಲೆಯಲ್ಲಿ ಮಾನ್ಯ ಬಿಬಿಎಂಪಿ ಆಯುಕ್ತರು ಈ ಕೂಡಲೇ ಸುವಿಧ ಕ್ಯಾಬಿನ್ ಗಳ ರಚನೆಗೆ ಅಗತ್ಯವಾದಂತಹ ಕ್ರಮವನ್ನ ಕೈಗೊಂಡು, ನಿರ್ದಿಷ್ಟವಾದ ಸಮಯದ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಕೋರುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




