ಫಾರಂ ಕೋಳಿ ಹಾಗೂ ತರಕಾರಿ ಕಿಟ್ ವಿತರಣೆ

5 years ago

ಬೆಂಗಳೂರು: ಶ್ರೀಮಂತರಿಗೆ ಹಣ ಇರುತ್ತದೆ. ಉತ್ತಮ ಆಹಾರವನ್ನ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ. ಆದರೆ ಬಡವರಿಗೆ ಆರ್ಥಿಕ ಸಮಸ್ಯೆ ಇರುತ್ತದೆ ಎಂದು ಶಿವನಗರ ವಾರ್ಡ್ ಬಿ.ಬಿ.ಎಂ.ಪಿ.ಯ ಮಾಜಿ ಸದಸ್ಯೆ ಮಂಜುಳ ವಿಜಯಕುಮಾರ್ ಹೇಳಿದರು.

ಶಿವನಗರ ವಾರ್ಡ್-107 ಕೊರೋನ ಲಾಕ್ ಡೌನ್ ನಿಂದ ಬಡವರಿಗೆ ಫಾರಂ ಕೋಳಿ ಮತ್ತು  ಪಡವಲಕಾಯಿ, ಬೀಟ್ ರೂಟ್, ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು ಮತ್ತು ಬದನೆಕಾಯಿ, ಸೌತೆಕಾಯಿ, ಈರುಳ್ಳಿ ಸೇರಿದಂತೆ 21 ಬಗೆಯ ವಿವಿಧ ತರಕಾರಿಗಳ ಕಿಟ್ ಗಳನ್ನು ಶಿವನಗರ ವಾರ್ಡ್ ಬಿ.ಬಿ.ಎಂ.ಪಿ.ಯ ಮಾಜಿ ಸದಸ್ಯೆ ಮಂಜುಳ ವಿಜಯಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ್ ವಿತರಿಸಿದರು.

ಅನಂತರ ಮಾತಾಡಿದ ಮಂಜುಳ, ಕೊವಿಡ್-19 ಲಾಕ್ ಡೌನ್ ನಿಂದ ಬಡವರ ಬಳಿ ಹಣವು ಇಲ್ಲ, ಉದ್ಯೋಗವಿಲ್ಲ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಅವರಿಗೂ ಮಾಂಸಹಾರ ಸೇವನೆ ಮಾಡಬೇಕು ಎಂದು ಆಸೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೂ ಒಂದು ಕೋಳಿ ಮತ್ತು  ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು  ವಿತರಿಸಲಾಗಿದೆ ಎಂದರು.

Leave a Reply