ಒಂದು ಲಕ್ಷ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಕೊರೋನ ಮೂರನೇ ಅಲೆ ಎಂದು ಹೆದರಬೇಡಿ, ಲಸಿಕೆ ಹಾಕಿಸಿಕೊಳ್ಳಿ
ಹಸಿರೆ ಉಸಿರು ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ
ಬೆಂಗಳೂರು: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಾಯಕ ಸಿದ್ದಾಂತದ ಸಮಾಜ ನಿರ್ಮಾಣ ನಮ್ಮ ಗುರಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ ಕುಮಾರ್ ವಾರ್ಡ್ ನ ಕೆಂಪೇಗೌಡ ಸಮುದಾಯ ಭವನದ ಎದುರು ಕೊರೋನ ಸಂಕಷ್ಟ ಎದುರಿಸುತ್ತಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ವಿಕಲಚೇತನರು ಹಾಗೂ ಮಹಿಳೆಯರು, ಹಿರಿಯ ನಾಗರಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಮತ್ತು ಹಸಿರೆ ಉಸಿರು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾಡಿದ ವಿ.ಸೋಮಣ್ಣ, ಕಳೆದ ಒಂದು ತಿಂಗಳಿಂದ ಕೊವಿಡ್ ಸಂಕಷ್ಟ ಸಮಯದಲ್ಲಿ ಆರ್ಥಿಕವಾಗಿ ಹಿಂದುಳಿದ 1 ಲಕ್ಷ ಕುಟುಂಬಗಳಿಗೆ ಆಹಾರ ಕಿಟ್ ಗಳ 9 ವಾರ್ಡ್ ಗಳಲ್ಲಿ ಸತತವಾಗಿ ವಿತರಣಾ ಕಾರ್ಯ ನಡೆಯುತ್ತಿದೆ. ಹಸಿವಿನಿಂದ ಯಾರೂ ಬಳಲಬಾರದು, ಹಸಿವು ಮುಕ್ತ ಕರ್ನಾಟಕ ನಮ್ಮ ಉದ್ದೇಶದಿಂದ ಆಹಾರ ಕಿಟ್ ಗಳನ್ನು ಬಡವರಿಗೆ ತಲುಪಿಸಲಾಗುತ್ತಿದೆ ಎಂದರು.
ಕೊರೋನ ಸಾಂಕ್ರಮಿಕ ರೋಗದ ಬಗ್ಗೆ ಆತಂಕ ಪಡಬೇಡಿ, ಧೈರ್ಯವಾಗಿ ಎದುರಿಸಿ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್ ನಲ್ಲಿ ಕೊವಿಡ್ ಕೇರ್ ಸೆಂಟರ್, 200 ಹಾಸಿಗೆಯ ಆಕ್ಸಿಜನ್ ಸಾಂದ್ರಕವುಳ್ಳ ಸೆಂಟರ್ ಹಾಗೂ ಮಾರೇನಹಳ್ಳಿ ವಾರ್ಡ್ ನಲ್ಲಿ 70 ಐ.ಸಿ.ಯು. ಬೆಡ್ ಕೊವಿಡ್ ಕೇರ್ ಸೆಂಟರ್ ಆರಂಭವಾಗಲಿದೆ ಎಂದು ಅವರು ಪುನುರುಚ್ಛರಿಸಿದರು.
ಮನುಷ್ಯನಿಗೆ ಅಮ್ಲಜನಕ ಮಹತ್ವ ಏನು ಎಂದು ಅರಿವು ಮೂಡಿದೆ. ಪರಿಸರ ಉಳಿದರೆ ನಾಡು ಉಳಿಯುತ್ತದೆ. ಪರಿಸರ ನಾಶದಿಂದ ಮಾನವನ ಅವನತಿ ಖಚಿತ. ಉತ್ತಮ ವಾತವರಣ, ಆರೋಗ್ಯ ರಕ್ಷಣೆಗಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಸಿರೆ ಉಸಿರು ಪರಿಸರ ಜಾಗೃತಿ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ರಾಜ್ಯ ಬಿ.ಜೆ.ಪಿ.ಯುವ ಮೋರ್ಚಾ ನಾಯಕ ಡಾ.ಅರುಣ್ ಸೋಮಣ್ಣ ಮತ್ತು ಗೋವಿಂದರಾಜನಗರ ಬಿ.ಜೆ.ಪಿ.ಮಂಡಲದ ಅಧ್ಯಕ್ಷ ವಿಶ್ವನಾಥ್ ಗೌಡ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯ ರೂಪಲಿಂಗೇಶ್ವರ್, ಗಂಗಭೈರಯ್ಯ, ವಾಗೇಶ್, ದಾಸೇಗೌಡರು, ಜಯರತ್ನ ಮೊದಲಾವರು ಆಹಾರ ಕಿಟ್ ಗಳನ್ನು ವಿತರಿಸಿದರು.



