ವಿಶೇಷ ಚೇತನ ಮಕ್ಕಳಿಗಿಗಾಗಿ ಬೃಹತ್ ಅಪ್ಪು ಕ್ರೀಡೋತ್ಸವ

1 year ago

ಮಲ್ಲೇಶ್ವರ ಆಟದ ಮೈದಾನ ನಾಳೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರಿಂದ ಚಾಲನೆ

ಬೆಂಗಳೂರು:ಯೂತ್ಸ್ ಆಫ್ ಮಲ್ಲೇಶ್ವರ ಮತ್ತು ಶ್ರೀ ಕಾಡುಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಜನವರಿ 31ರಂದು ಬೆಳಗ್ಗೆ 9ರಿಂದ ಸಂಜೆ 4ಗಂಟೆವರಗೆ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ||ಪುನೀತ್ ರಾಜ್ ಕುಮಾರ್ ಸವಿಸ್ಮರಣೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅಪ್ಪು ಕ್ರೀಡೋತ್ಸವ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.

ಯೂತ್ಸ್ ಆಫ್ ಮಲ್ಲೇಶ್ವರ ಸಂಸ್ಥೆಯ ಸಂಸ್ಥಾಪಕರಾದ ಬಿ.ಟಿ.ಚಂದ್ರಮೌಳಿ, ಅಧ್ಯಕ್ಷ ಎಂ.ಹೇಮಂತ್ ಗೌಡ, ಸಮಾಜ ಸೇವಕ ಶ್ರೀವಲ್ಲಭ, ರಾಜಶಶಿಧರ್, ಮನುಪ್ರಕೃತ್ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಸಂಸ್ಥಾಪಕರಾದ ಚಂದ್ರಮೌಳಿ ಮಾತನಾಡಿ, ಪ್ರತಿಯೊಂದು ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯ ಜೀವಿಸುವ ಬಾಳಿ, ಬದುಕುವ ಹಕ್ಕು ಇದೆ. ಕೆಲವೊಂದು ಕಾರಣಗಳಿಂದ ಮಕ್ಕಳಿಗೆ ವಿಶೇಷ ಚೇತನ ಮಕ್ಕಳಾಗಿ ಹುಟ್ಟಿರುತ್ತಾರೆ. ಭೂಮಿಗೆ ಬಂದ ಅಮೂಲ್ಯ ರತ್ನಗಳಾದ ಅ ಮಕ್ಕಳಿಗೆ ಸ್ವಲ್ಪ ಸಮಾಜದಿಂದ ವಾತ್ಯಲ್ಯ, ಸಹಕಾರ ದೊರೆತರೆ ಅವರ ಸಹ ಸಮಾಜದಲ್ಲಿ ನಮ್ಮಂತೆ ಜೀವನ ಸಾಗಿಸಲು ಸಾಧ್ಯ ಅದ್ದರಿಂದ ವಿಶೇಷ ಚೇತನ ಮಕ್ಕಳಿಗೆ ಅಪ್ಪು ಸ್ಮರಣೆಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ನಿಮ್ಮ ಜೊತೆಯಲ್ಲಿ ನಾವಿದ್ದೇವೆ ನಿಮ್ಮ ಬದುಕು ಹೊಸದಿಕ್ಕಿನತ್ತ ಸಾಗಲಿ ಎಂಬ ಆಶಯದಿಂದ ನಮ್ಮದು ಎಂದರು.

ದಿವ್ಯ ಸಾನಿಧ್ಯವನ್ನು ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಶ್ರೀ ಯದುಗರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿರವರು, ಉದ್ಘಾಟನೆಯನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಾಸಕರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್, ಕಾಡುಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ, ಮಲ್ಲೇಶ್ವರಂ ವಿಧಾನಸಭಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ನೇರವೆರಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕುಲಪತಿಗಳಾದ ಡಾ.ಎಸ್.ಕುಮಾರ್, ಡಾ.ಪ್ರಕಾಶ್ ಮತ್ತು ಚಲನಚಿತ್ರ ನಿರ್ಮಾಪಕ ಸುರೇಶ್ ಗೌಡ, ದವನಂ ಜ್ಯುವೆಲರಿ ಮಾಲೀಕ ಅರವಿಂದ್ ಡಿ.ವಿ. ಮತ್ತು ಅಂತಾರಾಷ್ಟ್ರೀಯ ಪ್ಯಾರ ಓಲಂಪಿಕ್ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್, ಮಾಜಿ ಮೇಯರ್ ಜೆ.ಹುಚ್ಚಪ್ಪ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾಜ ಸೇವಕ ಶ್ರೀವಲ್ಲಭ ಮಾತನಾಡಿ, ಮಕ್ಕಳು ದೇವರ ಸಮಾನ. ಅವರಿಗೆ ಎಲ್ಲ ಸೌಲಭ್ಯ, ಅವಕಾಶ ಸಿಗಬೇಕು. ವಿಶೇಷ ಚೇತನ ಮಕ್ಕಳು ಸಹ ಅವರ ಪ್ರತಿಭೆಯನ್ನು ಹೊರತರಲು, ಪ್ರೋತ್ಸಾಹಿಸಲು ದೇವರ ಕೃಪೆ ಇರಲಿ ಎಂದು ಕ್ರೀಡೋತ್ಸವ ಅಚರಿಸಲಾಗಿದೆ ಎಂದರು.

ಅಧ್ಯಕ್ಷರಾದ ಹೇಮಂತ್ ಗೌಡ ಮಾತನಾಡಿ, ಬೆಂಗಳೂರಿನ 18 ವಿಶೇಷ ಚೇತನ ಶಾಲೆಯ 500 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಚೇತನ ಮಕ್ಕಳಿಗೆ ರನ್ನಿಂಗ್ ರೇಸ್, ಶಾರ್ಟ್ ಪುಟ್, ಮೂಸಿಕಲ್ ಚೇರ್ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಸಂಜೆ ಪಾರಿತೋಷಕ ಹಾಗೂ ಚಾಂಪಿಯನ್ ಟ್ರೋಫಿ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳ ಸುರಕ್ಷತೆ, ಆರೋಗ್ಯ ರಕ್ಷಣೆಗೆ ತಜ್ಞ ವೈದ್ಯರುಗಳು ತಂಡ, ಆಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ ಎಂದರು.

Leave a Reply