ಮಂಡ್ಯ: ಯಂಗ್ ಚಾಲೆಂಜರ್ಸ್ ಸ್ಪೋರ್ಟ್ & ಕ್ರೀಡಾ ಒಕ್ಕೂಟ, ಕ್ಯಾತನಹಳ್ಳಿ ಮಂಡ್ಯ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ ಹಸಿರು ನಕ್ಷತ್ರ ಕೆ.ಎಸ್.ಪುಟ್ಟಣ್ಣಯ್ಯ & ಸಮಾಜ ಧನ್ವಂತರಿ ಡಾ.ಕೆ.ವೈ.ಶ್ರೀನಿವಾಸ್ ಅವರ ಹಾಗೂ ಕ್ಯಾತನಹಳ್ಳಿಯ ಹಿರಿಯ ಕ್ರೀಡಾಪಟುಗಳ ಸವಿನೆನಪಿಗಾಗಿ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು 2026ರ ಫೆಬ್ರವರಿ 7 ಶನಿವಾರ, 8 ಭಾನುವಾರ ಆಯೋಜಿಸಲಾಗಿತ್ತು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲಾಮಟ್ಟದ ಕ್ಯಾತನಹಳ್ಳಿ ಕಬಡ್ಡಿ ಹಬ್ಬ ಕೆ.ಎಸ್.ಪಿ ಕಪ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕ್ಯಾತನಹಳ್ಳಿಯ ವೈ ಸಿ ಎಸ್ ತಂಡ ಪ್ರಥಮ (75,000 ರೂ.), ಮೇಟಗಳ್ಳಿಯ ಸಂಯುಕ್ತ ತಂಡ ದ್ವಿತೀಯ ಬಹುಮಾನ 40,000 ರೂ.), ನಾಗನಹಳ್ಳಿಯ ಲಕ್ಷ್ಮಿದೇವಿ ತಂಡ ತೃತೀಯ (20,000 ರೂ.) ಹಾಗೂ ಕೆನ್ನಾಳುವಿನ ಕದಂಬ ತಂಡ ನಾಲ್ಕನೇ ಬಹುಮಾನವನ್ನು (15,000 ರೂ.) ಪಡೆದವು. ಪ್ರಶಸ್ತಿ ಪುರಸ್ಕೃತ ತಂಡಗಳಿಗೆ ಪ್ರಶಸ್ತಿ ಮೊತ್ತದ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.










