ಡಾ.ರಾಜ್ ಕುಮಾರ್ ರತ್ನ ಪ್ರಶಸ್ತಿ ಮತ್ತು ಡಾ.ಅಪ್ಪು ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ

2 years ago

ಬೆಂಗಳೂರು: ಗಾಂಧಿ ಭವನದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ (ಅಪ್ಪು)ಸೇವಾ ಸಮಿತಿ ವತಿಯಿಂದ ಕರ್ನಾಟಕ 50ನೇ ವರ್ಷದ ಸಂಭ್ರಮಾಚರಣೆ ಮತ್ತು ಸಾಧಕ/ಸಾಧಕಿಯರಿಗೆ ಡಾ.ರಾಜ್ ಕುಮಾರ್ ರತ್ನ ಪ್ರಶಸ್ತಿ, ಡಾ.ಅಪ್ಪು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಶಂಕರ್ ಮಹದೇವ್ ಬಿದರಿ, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಕೆ.ಶಿವರಾಂ, ಅಶೋಕ್ ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಡಾ.ಪುನೀತ್ ರಾಜ್ (ಅಪ್ಪು)ಸೇವಾ ಸಮಿತಿ ಅಧ್ಯಕ್ಷ ಗಣೇಶ್ ರಾವ್, ಕಾರ್ಯಾಧ್ಯಕ್ಷ ಜಾನ್ ಬ್ರಿಟೊ, ಎ.ಅಮೃತ್ ರಾಜ್, ಕನ್ನಡ ಕೃಷ್ಣ ಉದ್ಘಾಟಿಸಿದರು.

ಶಂಕರ್ ಮಹದೇವ್ ಬಿದರಿ ಮಾತನಾಡಿ, ನಾನು 50 ವರ್ಷಗಳಲ್ಲಿ 5 ಚಲನಚಿತ್ರ ನೋಡಿದ್ದೇನೆ. ಆದರೆ ಟಿ.ವಿ. ಮತ್ತು ಮೊಬೈಲ್ ನಲ್ಲಿ ನೋಡುತ್ತೇನೆ. ಚಲನಚಿತ್ರ ಮಂದಿರಕ್ಕೆ ಹೋಗಿ ಪುನೀತ್ ರಾಜ್ ಕುಮಾರ್ ಅವರ ಬೆಟ್ಟದ ಹೂವು ಚಿತ್ರ ನೋಡಿದೆ. ರಾಜ್ ಕುಮಾರ್ ಅವರ ಆದರ್ಶ ಗುಣಗಳನ್ನು ಬೆಳೆಸಿಕೊಂಡ ಪುನೀತ್ ರಾಜ್ ಕುಮಾರ್ ಅವರ ಚಲನಚಿತ್ರಗಳು ಸಮಾಜಮುಖಿ ಚಲನಚಿತ್ರಗಳಾಗಿದ್ದವು ಎಂದರು.

ದಂತಚೋರ ವೀರಪ್ಪನ್ ನಾಡಿನ ಖ್ಯಾತ ವ್ಯಕ್ತಿಗಳನ್ನು ಕಿಡ್ನಾಪ್ ಮಾಡುವ ಸಂಚು ಮಾಡಿರುತ್ತಾನೆ ಎಂದು ಗುಪ್ತಚರ ವರದಿ ಬಂದಿತ್ತು. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರವರಿಗೆ ತಿಳಿಸಲಾಗಿತ್ತು. ಅಚಾತುರ್ಯದಿಂದ ಅಪಹರಣವಾಯಿತು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಯಾವುದೇ ಅಪಾಯವಾಗುದಂತೆ ಬಿಡಿಸಿಕೊಂಡು ಬರುವಂತೆ ತಿಳಿಸಲಾಯಿತು. ಏನಾದರು ಚಿಂತೆಯಿಲ್ಲ, ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಬಿಡಿಸಿಕೊಂಡು ಬರಬೇಕು ಎಂಬ ದೃಢ ನಿರ್ಧಾರವನ್ನು ಎಸ್.ಎಂ.ಕೃಷ್ಣ ಮಾಡಿದರು ಎಂದರು.

ಡಾ.ರಾಜ್ ಕುಮಾರ್ ಅವರು ಅಪಹರಣದಿಂದ ಬಿಡುಗಡೆಯಾದ ನಂತರ ನಾನು ಭೇಟಿ ಮಾಡಿದೆ. ನಿಜವಾದ ಹಿರೋಗಳು ನೀವು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದು ಭಾರತರತ್ನ ಪ್ರಶಸ್ತಿ ಲಭಿಸಿದ್ದಕ್ಕಿಂತ ನನಗೆ ಹೆಚ್ಚು ಸಂತೋಷವಾಯಿತು. ವೀರಪ್ಪನ್ ನನ್ನ ಮೇಲೆ ಮತ್ತು ಜಯಲಲಿತಾ ಮೇಲೆ ಅಪಾರ ಸಿಟ್ಟು ಇದೆ ಎಂದು ಡಾ.ರಾಜ್ ಹೇಳಿದರು. ಮಾನವೀಯ ಗುಣವುಳ್ಳ ಮಹಾನ್ ಚೇತನ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಾಡಿನ ಜನರ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ ಎಂದರು.

ಬಿ.ಕೆ.ಶಿವರಾಂ ಮಾತನಾಡಿ, ಕನ್ನಡದ ಸೌರ್ವಭೌಮತೆ ಆಸ್ಮಿತೆಯನ್ನು ಉಳಿಸಿ ಬೆಳೆಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ರಾಜ್ ಕುಮಾರ್ ಮತ್ತು ನರಸಿಂಹರಾಜುರವರು ಬೇರೆ ಭಾಷೆಯಲ್ಲಿ ನಟಿಸಿದ್ದರೆ ಆಸ್ಕರ್ ಪ್ರಶಸ್ತಿ ಸಿಗುತ್ತಿತು. ಕುವೆಂಪು ರವರ ಕಾವ್ಯ ಇತಿಹಾಸ ಪ್ರಸಿದ್ಧವಾಗಿದೆ. ಕನ್ನಡ ಚಳುವಳಿಗಾರರನ್ನ ಹತ್ತಿರದಿಂದ ನಾನು ಬಲ್ಲೆ, ತನು, ಮನ, ಧನ ಕಳೆದುಕೊಂಡು ಲಕ್ಷಾಂತರ ಜನರು ಶ್ರಮಿಸಿದ್ದಾರೆ ಎಂದರು.

ಕಾಚಕರನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲ ಭಾಷೆಗಳ ಬಾವುಟಗಳನ್ನು ಹಾರಿಸಿದ್ದರು. ಆದರೆ ಕನ್ನಡ ಬಾವುಟ ಹಾಕಲು ಹಲವಾರು ಅಡ್ಡಿಪಡಿಸುತ್ತಿದ್ದರು. 80 ಅಡಿ ಉದ್ದದ ಧ್ವಜಸ್ಥಂಬ ನಿಲ್ಲಿಸಿ, ಕನ್ನಡ ಧ್ವಜ ಹಾರಿಸಲಾಯಿತು. ಅಲ್ಲಿ ಗಲಭೆ ನಡೆದರೆ ನಿಮ್ಮನ್ನು ಸೆಸ್ಪಂಡ್ ಮಾಡುತ್ತೇವೆ ಎಂದು ಮೇಲಧಿಕಾರಿಗಳ ಹೇಳಿದರು. ನಾನು ಕನ್ನಡಕ್ಕೋಸ್ಕರ ಸೆಸ್ಪಂಡ್ ಆಗಲು ಸಿದ್ಧ ಎಂದು ಹೇಳಿದೆ. ಚಿಕ್ಕಪೇಟೆ, ಅಕ್ಕಿಪೇಟೆ, ಕಾಟನ್ ಪೇಟೆ, ಹೂವಾಡಿಗರ ಗಲ್ಲಿ, ಆನೆಪಾಳ್ಯ ಹಲವಾರು ಹಳೆಯ ಹೆಸರುಗಳನ್ನು ಉಳಿಸಿದವರು ಕನ್ನಡಪರ ಹೋರಾಟಗಾರರು. ಕನ್ನಡ ಉಳಿಸಿ, ಬೆಳಸಿ ಮತ್ತು ಕನ್ನಡ ಭಾಷೆ ಪ್ರತಿ ನಿತ್ಯ ಬಳಸಬೇಕು ಆಗ ಮಾತ್ರ ಕನ್ನಡ ಉಳಿಯುತ್ತದೆ ಎಂದರು.

ಬಿ.ಬಿ.ಅಶೋಕ್ ಕುಮಾರ್ ಮಾತನಾಡಿ, ಡಾ.ರಾಜ್ ಕುಮಾರ್ ಹೃದಯ ಶ್ರೀಮಂತ ವ್ಯಕ್ತಿ. ಡಾ.ರಾಜ್ ಮೃತ್ತ ಪಟ್ಟ ದಿನ ನಾನು ಎ.ಸಿ.ಪಿ ಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಡಾ.ರಾಜ್ ಅವರ ಪಾರ್ಥಿವ ಶರೀರ ಸಾಗಿಸುವ ಜವಾಬ್ದರಿ ಹೊಣೆ ಹೊರಿಸಲಾಗಿತ್ತು ನನಗೆ. ಹಡ್ಸನ್ ಸರ್ಕಲ್ ಮತ್ತು ವಿಧಾನಸೌಧ ಮತ್ತು ಕಂಠೀರವ ಸ್ಪೂಡಿಯೊ ತಲುಪುವವರಗೆ ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತ ಸಾಗಿದ್ದು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಎ.ಭಾವ, ಬಿ.ಬಿ.ಅಶೋಕ್ ಕುಮಾರ್, ನವಯುಗ ಹೋಟೆಲ್ ಮಾಲೀಕ ಮೋಹನ್ ರಾವ್, ರಂಗಭೂಮಿ, ಚಲನಚಿತ್ರ ನಟಿ ಗಿರಿಜಾ ಲೋಕೇಶ್, ಶಬರಿಮಲೈ ಸೇವಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಜಯರಾಮ್ ಅವರಿಗೆ ಡಾ.ರಾಜ್ ಕುಮಾರ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಅಮೃತ್ ರಾಜ್ ಮತ್ತು ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಜಗ್ನನಾಥ್ ರೆಡ್ಡಿ, ಮುಖ್ಯಮಂತ್ರಿಗಳ ಸೇವಾ ಪದಕ ಪಡೆದ ಪೊಲೀಸ್ ಮಹದೇವಸ್ವಾಮಿ, ಭಾರತೀಯ ಸೇವಾ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ(ಹೂಡಿ ಚಿನ್ನಿ) ಹಾಗೂ ಕನ್ನಡ ಪರ ಹೋರಾಟಗಾರ ಬಸವರಾಜ್ ಪಡುಕೋಟೆ, ಡಾ.ರಾಜ್ ಕುಮಾರ್ ರವರ ಅಭಿಮಾನಿ ಎಸ್.ಎ.ಮಾರುತಿ ಅವರಿಗೆ ಡಾ||ಅಪ್ಪು ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಅಪ್ಪು ವಿಶೇಷ ಬಾಲಪ್ರತಿಭೆ ಪುರಸ್ಕಾರ ಅಂಕಿತ ಜಯರಾಮ್ ಮತ್ತು ಜ್ಞಾನ ಗುರುರಾಜ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply