ಬೆಂಗಳೂರು: ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್ ನಲ್ಲಿ ಸ್ಪಂದನಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಪುರುಷರ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಚಲನಚಿತ್ರ ನಟಿ ಹರಿಣಿ ಶ್ರೀಕಾಂತ್, ಕುಮಾರಿ ನಿಕಿತಾ ಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು, ಕೆ.ಎ.ಎಸ್.ಅಧಿಕಾರಿ ನಾಗರಾಜ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಮೋಹನ್ ದಾಸ್, ವಿಶಾಲಕ್ಷ್ಮಿ ಶಿವರಾಜು ದೀಪ ಬೆಳಗಿಸಿ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಹರಿಣಿ ಶ್ರೀಕಾಂತ್ ಮಾತನಾಡಿ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲರು ಸಂಘಟನೆ, ಒಗ್ಗಡಿಸಲು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಪುರುಷರಂತೆ ಮಹಿಳೆಯರು ಸಹ ಭಾಗಿಯಾಗುತ್ತಿದ್ದಾರೆ ಎಂದರು.
ನಟಿ ನಿಕಿತಾ ಸ್ವಾಮಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಿಂದ ಮಾನಸಿಕವಾಗಿ ಆರೋಗ್ಯವಂತರಾಗಿ ಇರುತ್ತಾರೆ. ನಾನು ಎಂಬುದು ಬಿಟ್ಟು ನಾವೆಲ್ಲರು ಎಂದು ಬದುಕುಬೇಕು ಸ್ನೇಹಮಯಿಯಾಗಿ ಬದುಕುಬೇಕು. ಕ್ರೀಡಾ ಚಟುವಟಿಕೆಗಳಿಂದ ದೇಶ, ದೇಶದ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ ಎಂದರು.
ನಾಗರಾಜ್ ಮಾತನಾಡಿ, ದೇಶ ಬದಲಾವಣೆಯತ್ತ ಸಾಗುತ್ತಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಉಳಿಸಲು ಕಷ್ಟಕರವಾಗಿದೆ. ಕ್ರೀಡೆಯ ಜೊತೆಯಲ್ಲಿ ಜನಪದ ಕಲೆ, ಸಾಹಿತ್ಯ ಕರ್ನಾಟಕ ಸಂಗೀತ ಉಳಿಯಬೇಕು ನಮ್ಮ ಪರಂಪರೆ ಉಳಿಸಲು ಹೋರಾಟ ಮಾಡಬೇಕು ಎಂದರು.
ಎಸ್.ಕೇಶವಮೂರ್ತಿ ಮಾತನಾಡಿ, ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆ ಜನಪದ ಕಲೆ ಉಳಿಸಿ, ಬೆಳಸಲು ಶ್ರಮಿಸುತ್ತಿದೆ. ಶಿಕ್ಷಣದ ಜೊತೆಯಲ್ಲಿ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಬೇಕು. ಇದರಿಂದ ಮಕ್ಕಳು ಆರೋಗ್ಯಶಾಲಿಯಾಗಿರುತ್ತಾರೆ ಮತ್ತು ಪ್ರತಿಯೊಬ್ಬರೂ ಒಂದು ಗಂಟೆ ಯೋಗ, ವ್ಯಾಯಾಮ ಮಾಡಿ ಎಂದರು.
ಎಮ್.ಶಿವರಾಜು ಮಾತನಾಡಿ, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ನಾಡಿನಲ್ಲಿ ಕಲೆ ಸಾಹಿತ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರು ಮತ್ತು ಪ್ರತಿಭಾವಂತರು ಇದ್ದಾರೆ. ಅವರನ್ನ ಗುರುತಿಸಿ ಪ್ರೋತ್ಸಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜನಪದ ಜಂಗಮ, ಕನ್ನಡ ಭಾಷೆ ಉಳಿಸಲು ಬೆಳಲು ಅಭಿಯಾನ ಹಳ್ಳಿ ಸೊಗಡಿನ ಕಾರ್ಯಕ್ರಮಗಳಿಂದ ಮುಂದಿನ ಪೀಳಿಗೆಗೆ ಅದರ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.




