ಬೆಂಗಳೂರು: Storytel ವತಿಯಿಂದ ಆರ್ ಕೆ ನಾರಾಯಣ್ ಅವರ “ಮಾಲ್ಗುಡಿ ದಿನಗಳು” ಪುಸ್ತಕವನ್ನು, ಧ್ವನಿ ಪುಸ್ತಕದ ರೂಪದಲ್ಲಿ ಪ್ರಸ್ತುತಪಡಿಸುತ್ತಿದೆ. ಪ್ರಸಿದ್ಧ ನಟ ಅನಿರುದ್ಧ ಜತ್ಕರ್ ಅವರ ಧ್ವನಿಯಲ್ಲಿ ಮಾಲ್ಗುಡಿ ದಿನಗಳು ಪುಸ್ತಕವನ್ನು ಕೇಳಬಹುದು.
ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ದಿನಗಳು (Malgudi Days), ಪುಸ್ತಕ ತೆರೆಗೆ ಮತ್ತು ಈಗ ಧ್ವನಿ ಪುಸ್ತಕದ ರೂಪದಲ್ಲಿ ಕೇಳಲು ಅವಕಾಶವಿದೆ. ಶಂಕರನಾಗ್ ನಿರ್ದೇಶನದ “ಮಾಲ್ಗುಡಿ ಡೇಸ್” ಟಿವಿ ಸರಣಿಯು ಕನ್ನಡಿಗರ ನೆನಪಿನಲ್ಲಿ ಶಾಶ್ವತ ಸ್ಥಾನ ಗಳಿಸಿದೆ.
ಮಾಲ್ಗುಡಿ ಡೇಸ್, “ಮಾಲ್ಗುಡಿ” ಎಂಬ ಕಾಲ್ಪನಿಕ storytel ಪಟ್ಟಣದಲ್ಲಿ ತೊಡಗಿರುವ ಸಣ್ಣ ಕಥೆಗಳ ಸಂಗ್ರಹವಾಗಿದೆ. ಮೂಲತಃ ಆರ್ ಕೆ ನಾರಾಯಣ್ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಈ ಕಥಾಸಂಕಲನವನ್ನು, ಡಾ. ಎಚ್ ರಾಮಚಂದ್ರ ಸ್ವಾಮಿ ಅವರು ಕನ್ನಡಕ್ಕೆ ದೋಷರಹಿತವಾಗಿ ಅನುವಾದಿಸಿದ್ದಾರೆ. ಜನಪ್ರಿಯ ನಟ, ಬರಹಗಾರ, ಗಾಯಕ, ನಿರ್ದೇಶಕ ಮತ್ತು ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಜತ್ಕರ್ ಅವರ ಧ್ವನಿಯಲ್ಲಿ, ಧ್ವನಿ ಪುಸ್ತಕ “ಮಾಲ್ಗುಡಿ ದಿನಗಳು” 2023 ರ ಆಗಸ್ಟ್ 27 ರಂದು ಪ್ರತ್ಯೇಕವಾಗಿ Storytel Appನಲ್ಲಿ ಬಿಡುಗಡೆಯಾಗುತ್ತಿದೆ.
ಅನಿರುದ್ಧ ಜತ್ಕರ್ ಅವರು ಈ ಜನಪ್ರಿಯ ಕಾದಂಬರಿಗೆ ತಮ್ಮ ಧ್ವನಿಯನ್ನು ನೀಡಿದ ಅನುಭವವನ್ನು ಹಂಚಿಕೊಂಡಿದ್ದು, ನಮ್ಮ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದು, ಆರ್. ಕೆ. ನಾರಾಯಣ್ ರವರ ‘ಮಾಲ್ಗುಡಿ ಡೇಸ್’. ಚಿಕ್ಕವನಿದ್ದಾಗ ನಾನು ಅದನ್ನು ಓದಿರಲಿಲ್ಲ. ಕಿರುತೆರೆಯ ಮೇಲೆ ನಮ್ಮ ಪ್ರೀತಿಯ ಶಂಕರ್ ನಾಗ್ ರವರ ‘ಮಾಲ್ಗುಡಿ ಡೇಸ್’ ನೋಡಿದ ನಂತರ ನನಗೆ ಈ ಕೃತಿಯ ಪರಿಚಯವಾಯ್ತು. ಪ್ರತಿ ಸಂಚಿಕೆ ವೀಕ್ಷಿಸುವಾಗಲೂ ನಾನೇ ಸ್ವತ: ಪ್ರತಿಯೊಂದು ಪಾತ್ರವನ್ನು ಮಾಡುತ್ತಿದ್ದುದನ್ನು ಕಲ್ಪಿಸಿಕೊಂಡೆ ಎಂದಿದ್ದಾರೆ.
ಮತ್ತೀಗ ಇಡೀ ವಿಶ್ವವೇ ಒಂದಾಗಿ ಸೇರಿ ಹೀಗಾಗುವಂತೆ ನೋಡಿಕೊಂಡಿತೆಂದು ನಾನು ನಂಬುತ್ತೇನೆ. ನನ್ನ ದನಿಯಲ್ಲಿ ಈ ಉತ್ಕೃಷ್ಟ ಕೃತಿಯನ್ನು ರೆಕಾರ್ಡ್ ಮಾಡುವ ಸದವಕಾಶವೊಂದು ನನಗೆ ದೊರೆಯಿತು. ಈಗ, ನನ್ನ ಧ್ವನಿಯ ಮುಖಾಂತರ ‘ಮಾಲ್ಗುಡಿ ದಿನಗಳು’ ಈಗಿನ ಮತ್ತು ಮುಂದೆ ಬರಲಿರುವ ಪೀಳಿಗೆಗಳಿಗೆ ಪರಿಚಯಸಲ್ಪಡುತ್ತದೆ ಎಂಬುದು ನನಗೆ ಬಹುವಾಗಿ ಧನ್ಯತೆಯನ್ನು ತಂದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಲ್ಗುಡಿ ದಿನಗಳು ಕಥೆಗಳನ್ನು ಓದುವಾಗ ಆಗಿನ ಕಾಲಮಾನ ಮತ್ತು ಮಾಲ್ಗುಡಿಯ ಪ್ರಪಂಚಕ್ಕೆ ಮನಸ್ಸಿನಲ್ಲೇ ಪ್ರಯಾಣ ಮಾಡಿ ಬಂದಿದ್ದೇನೆ. ನನಗೆ ಗೊತ್ತು, Storytel Appನಲ್ಲಿ ನಾನು ನಿರೂಪಣೆ ಮಾಡಿದಂತಹ ಈ ಕಥೆಗಳನ್ನು ಕೇಳುತ್ತಾ ನಿಮಗೂ ಇದೇ ಅನುಭವವಾಗಲಿದೆ. ನಿಮ್ಮನ್ನೆಲ್ಲ Storytel App ಮುಖಾಂತರ ಮಾಲ್ಗುಡಿಯಲ್ಲಿ ಕಾಣುತ್ತೇನೆ ಎಂದಿದ್ದಾರೆ.
ಭಾರತದ ಅನೇಕ ರಾಜ್ಯಗಳಾದ್ಯಂತ ತನ್ನ ವಿಸ್ತೃತ ಶ್ರೇಣಿಯ ಕೆಟಲಾಗ್‌ನಿಂದಾಗಿ ಜನಪ್ರಿಯವಾಗಿರುವ Storytel, ಎಲ್ಲಾ ಬಗೆಯ ಚಿಂತನೆಗಳಿರುವ ಓದುಗರಿಗೆ, ವಿಭಿನ್ನ ಪ್ರಕಾರಗಳ ಪುಸ್ತಕಗಳನ್ನು ಓದಲು ಬಯಸುವ ಓದುಗರಿಗೆ ಇಷ್ಟವಾಗುತ್ತಿದೆ. ಜನರನ್ನು ಅವರ ನೆಲದ ಕಥೆಗಳಿಗೆ ಹತ್ತಿರವಾಗಿಸುವ ಸಲುವಾಗಿ, Storyte India ಪ್ರಾದೇಶಿಕ ಭಾಷೆಗಳಲ್ಲಿ ಧ್ವನಿ ಪುಸ್ತಕಗಳನ್ನು ಪ್ರಕಟಿಸಲು ಅವಿರತವಾಗಿ ಶ್ರಮಿಸುತ್ತಿದೆ. ಅನೇಕ ಖ್ಯಾತನಾಮ ಲೇಖಕರ ಕೃತಿಗಳ ಧ್ವನಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ.
Storytel ಕನ್ನಡ ಈಗಾಗಲೇ ಗಮನಾರ್ಹವಾದ ಕೆಟಲಾಗ್ ಹೊಂದಿದ್ದು, ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ವೈದೇಹಿ, ಅನುಪಮಾ ನಿರಂಜನ, ವಿವೇಕ ಶಾನಭಾಗ, ವಸುಧೇಂದ್ರ, ಆರ್.ಕೆ ನಾರಾಯಣ್, ಶಾಂತಿನಾಥ ದೇಸಾಯಿ, ಎಚ್.ಎಸ್. ಶಿವಪ್ರಕಾಶ್ ಮತ್ತು ಇನ್ನೂ ಅನೇಕ ಖ್ಯಾತ ಲೇಖಕರ ಕೃತಿಗಳನ್ನು ಒಳಗೊಂಡಿದೆ.
ಪುಸ್ತಕ ಪ್ರಿಯರು ಮತ್ತು ಸಾಹಿತ್ಯಾಸಕ್ತರಿಗೆ Storytel Appನಲ್ಲಿ ಅನೇಕ ಜನಪ್ರಿಯ ಪುಸ್ತಕಗಳು ದೊರೆಯುತ್ತವೆ, ದಾಟು, ಯಯಾತಿ, ಶಿಕಾರಿ, ಅಮ್ಮಚ್ಚಿಯೆಂಬ ನೆನಪು, ಕಾಡಿನ ಬೆಂಕಿ, ಸಂಧ್ಯಾರಾಗ, ನಮ್ಮ ಊರಿನ ರಸಿಕರು ಮೊದಲಾದ ಸಾರ್ವಕಾಲಿಕ ಪುಸ್ತಕಗಳಿಂದ ಮೊದಲುಗೊಂಡು, ಮೋಹನಸ್ವಾಮಿ, ಒಂದು ಬದಿ ಕಡಲು, ಗೈರ್ ಸಂಜೋತಿ, ಗ್ರಸ್ತ, ಲೈಫ್ ಈಸ್ ಬ್ಯೂಟಿಫುಲ್ ಮೊದಲಾದ ಸಮಕಾಲೀನ ಬೆಸ್ಟ್ ಸೆಲ್ಲರ್‌ಗಳೂ Appನಲ್ಲಿ ಲಭ್ಯವಿವೆ.
Storytel, ನವಕರ್ನಾಟಕ ಪ್ರಕಾಶನ, ಮನೋಹರ ಗ್ರಂಥಮಾಲಾ, ಛಂದ ಪುಸ್ತಕ, ಸಾವಣ್ಣ ಎಂಟರ್‌ಪ್ರೈಸಸ್ ಮೊದಲಾದ ಕರ್ನಾಟಕದ ಪ್ರಮುಖ ಪ್ರಕಾಶಕರ ಜೊತೆಗೆ ಸಹಯೋಗವನ್ನೂ ಹೊಂದಿದೆ.
ಖ್ಯಾತ ರಂಗಕಲಾವಿದರಾದ ಬಿ. ಜಯಶ್ರೀ, ಬಿ. ಸುರೇಶ್, ಮಂಡ್ಯ ರಮೇಶ್, ಶರತ್ ಲೋಹಿತಾಶ್ವ ಮತ್ತು ಚಲನಚಿತ್ರ ಕಲಾವಿದರಾದ ಬಾಲಾಜಿ ಮನೋಹರ್, ಅರವಿಂದ್ ಕುಫಿಕರ್, ರವಿ ಭಟ್, ರಘು ಶಿವಮೊಗ್ಗ, ಬಿ.ಎಂ.ಗಿರಿರಾಜ್, ಶೃಂಗ ಬಿ.ವಿ., ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಚಿತ್ಕಳಾ ಬಿರಾದಾರ್, ರಂಜನಿ ರಾಘವನ್, ಪಿ.ಡಿ. ಸತೀಶ್ ಮತ್ತು ಇನ್ನೂ ಬಹಳ ಮಂದಿ ನುರಿತ ಕಲಾವಿದರು Storytel Appಗಾಗಿ ಧ್ವನಿ ನೀಡಿದ್ದು, ಪ್ರತಿಯೊಂದು ಪುಸ್ತಕವನ್ನೂ ಕೇಳುಗರ ಮನಮುಟ್ಟುವಂತ ಸೊಗಸಾಗಿ ವಾಚಿಸಿದ್ದಾರೆ ಎಂದು ಸ್ಟೋರಿ ಟೆಲ್ ಆಪ್ ಮಾಹಿತಿ ನೀಡಿದೆ. ಜೊತೆಗೆ ಈ ಸಂಗತಿಯನ್ನು ಜನತೆಗೆ ತಿಳಿಸಲು ಹೆಮ್ಮೆಯಾಗುತ್ತದೆ ಎಂದು ಹೇಳಿದೆ.
ಆಡಿಯೋ ಪುಸ್ತಕ ಮತ್ತು ಈ-ಬುಕ್ ಆ್ಯಪ್ ಸ್ಟ್ರೀಮಿಂಗ್ ಸೇವೆಯಾಗಿರುವ Storytel ಭಾರತದಲ್ಲಿ 27ನೇ ನವೆಂಬರ್ 2017 ರಂದು ಕೆಲಸ ಪ್ರಾರಂಭಿಸಿತು. ಸ್ಟಾಕ್‌ಹಾಮ್, ಸ್ವೀಡನ್‌ನಲ್ಲಿ ಸಂಸ್ಥೆಯ ಪ್ರಧಾನ ಕಚೇರಿಯಿದ್ದು, ಜಗತ್ತಿನಾದ್ಯಂತ 25 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಈ ಆ್ಯಪ್ 2 ಲಕ್ಷಕ್ಕೂ ಹೆಚ್ಚಿನ ಆಡಿಯೋ ಪುಸ್ತಕಗಳು ಮತ್ತು ಈ-ಬುಕ್‌ಗಳನ್ನು ಹೊರ ತಂದಿದ್ದು, ಇಂಗ್ಲೀಷ್, ಹಿಂದಿ, ಮರಾಠಿ, ಉರ್ದು, ಬೆಂಗಾಲಿ, ತಮಿಳು, ಮಲಯಾಳಂ, ತೆಲುಗು, ಅಸ್ಸಾಮೀ, ಗುಜರಾತಿ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ಅದ್ಭುತವಾದ ಕಥೆಗಳನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಆನಂದಿಸುವಂತೆ ಮಾಡುವ ಮೂಲಕ ಪ್ರಪಂಚವನ್ನು ಸೌಹಾರ್ದಮಯ ಸ್ಥಳವನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದು ಸಂಸ್ಥೆ ಹೇಳಿದೆ.
ಲಭ್ಯತೆ: ಸ್ಟೋರಿಟೆಲ್ ಗೂಗಲ್ ಪ್ಲೇ ಸ್ಟೋರ್ http://bit.ly/2rriZalu ಮತ್ತು iOS ಆ್ಯಪ್ ಸ್ಟೋರ್ https://apple.co/2zUcGkG ಈ ಎರಡೂ ಸ್ಥಳಗಳಲ್ಲಿ ಲಭ್ಯವಿದೆ.
ಸಂಪರ್ಕಿಸಿ: ಸುರಭಿ ಛತ್ರಪತಿ, 9606232212 surabhi.chatrapathy@storytel.com




