ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ
ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ
ಭಾರತಿ ವಿಷ್ಣುವರ್ಧನ್, ಜಯಮಾಲ, ಸರಿತಾ, ಗೀತಾ, ಅಂಬಿಕಾ, ಲಕ್ಷ್ಮಿ ಗೋವಿಂದರಾಜು, ಪೂರ್ಣಿಮಾ ರಾಮ್ ಕುಮಾರ್ ಅವರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ
ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಉದ್ಘಾಟನೆಯನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಕೆ.ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್ ಆರ್, ಅರ್ಚನಾ ಎಂ.ಎಸ್.ಕರೀಗೌಡ, ಕೆ.ಎನ್.ರಮೇಶ್, ಮತ್ತು ಉಪ ಆಯುಕ್ತ ಮಂಜುನಾಥ ಸ್ವಾಮಿ, ಚಲನಚಿತ್ರ ನಟಿ ವಿನಯಪ್ರಸಾದ್, ಅಧ್ಯಕ್ಷ ಎ.ಅಮೃತ್ ರಾಜ್ ದೀಪ ಬೆಳಗಿಸಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರತಿ ವಿಷ್ಣುವರ್ಧನ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು. ವೇದ, ಪುರಾಣ ಕಾಲದಿಂದಲು ಹೆಣ್ಣಿನ ಶಕ್ತಿ ಏನು ಎಂಬುದು ತಿಳಿದಿದೆ. ಹೆಣ್ಣು ಎಂದರೆ ಜೀವನಪೂರ್ತಿ ತ್ಯಾಗವೆ. ಅಮ್ಮ ಎಂದರೆ ನೋವು ನುಂಗಿಕೊಂಡು ತ್ಯಾಗ ಮಾಡಿ ದಿಟ್ಟತನ ತೋರಿಸುತ್ತಾಳೆ ಎಂದರು.





ಮಹಿಳೆಯರಿಗೆ ದಿಟ್ಟತನ ಇರಬೇಕು, ಆಸೆಗಳ ಹಿಂದೆ ಹೋಗಬಾರದು, ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಜೀವನ ಸಾಗಿಸಬೇಕು. ದೇವರ ಇಚ್ಚೆ ಮುಂದೆ ನಮ್ಮ ಇಚ್ಚೆ ನಡೆಯುವುದಿಲ್ಲ, ಭಗವಂತ ಮತ್ತು ತಂದೆ, ತಾಯಿಯ ಅನುಗ್ರಹ, ಆಶೀರ್ವಾದದಿಂದ ನಾಡಿನ ಜನರ ಪ್ರೀತಿ, ವಿಶ್ವಾಸ, ಪ್ರಶಸ್ತಿ ಲಭಿಸಿದೆ. ಮಕ್ಕಳು, ಆಳಿಯ, ಮೊಮ್ಮಕ್ಕಳು ಒಳ್ಳೆಯ ಗಂಡ ದೇವರು ಕೊಟ್ಟಿದ್ದಾರೆ ಎಂದರು.
ನಟಿ ಗೀತಾ ಮಾತನಾಡಿ, 20 ವರ್ಷಗಳ ನಂತರ ಕನ್ನಡ ನಟಿಯರು, ನಿರ್ಮಾಪಕಿಯರನ್ನು ನೋಡುವ ಸೌಭಾಗ್ಯ ನನ್ನದಾಗಿದೆ. ಕನ್ನಡ ನಾಡಿನ ಜನರನ್ನು ನೋಡಿ ನನಗೆ ಬಹಳ ಸಂತೋಷವಾಯಿತು ಎಂದರು.
ನಟಿ ಜಯಮಾಲ ಮಾತನಾಡಿ, ಮಹಿಳೆಯರು ಎಲ್ಲರು ಅಭಿನಂದನಾ ಅರ್ಹರು, ಬೆಳಿಗ್ಗೆ ಎದ್ದು ನಗರ ಸ್ವಚ್ಚತೆ ಮಾಡುವ ಪೌರ ಕಾರ್ಮಿಕ ಮಹಿಳೆಯರು ಇನ್ನೊಬ್ಬರ ಬದುಕು ಹಸನ ಮಾಡುವ ಸ್ವಚ್ಚತಾ ವಾರಿಯರ್ಸ್ ಗಳು. ಕನ್ನಡ ಚಲನಚಿತ್ರ ರಂಗದ ದಿಟ್ಟ ಮಹಿಳೆ ಎಂದರೆ ಪಾರ್ವತಮ್ಮ ರಾಜ್ ಕುಮಾರ್. ಅವರು ಅನೇಕ ಕಲಾವಿದರಿಗೆ ಅವಕಾಶ ನೀಡಿದ್ದರು. ವಿಷ್ಣುವರ್ಧನ್ ಮತ್ತು ಭಾರತಿ ರವರ ಚಿತ್ರಗಳು ಸಮಾಜಕ್ಕೆ ಮಾದರಿಯಯಾಗಿದ್ದವು.ಧೃತಿಗೆಡದೆ ದಿಟ್ಟತನದಿಂದ ಮಹಿಳೆಯರು ಸಾಗಬೇಕು ಎಂದರು.
ನಟಿ ಸರಿತಾ ಮಾತನಾಡಿ, ಪ್ರತಿದಿನ ಮಹಿಳಾ ದಿನಾಚರಣೆಯಾಗಬೇಕು. ಮಹಿಳೆ ಸ್ವಾಭಿಮಾನಿ ಸ್ವಾವಲಂಬಿಯಾಗಿ ಬದುಕುತ್ತಾಳೆ. ಒಂದು ಹೆಣ್ಣಿನ ಹಿಂದೆ ಪುರುಷರ ಸಹಕಾರ ಇರಬೇಕು. ಐ.ಎ.ಎಸ್. ಮತ್ತು ಐಪಿಎಸ್ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಪ್ರತಿದಿನ ಸಾಧನೆ ಮಾಡುತ್ತಿದ್ದಾಳೆ. ನಾನು ಸಹ ಉನ್ನತ ವ್ಯಾಸಂಗ ಮಾಡಬೇಕು ಎಂಬ ಹಂಬಲವಿತ್ತು ಆದರೆ ಅದು ಆಗಲಿಲ್ಲ. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮರವರ ಅವರನ್ನ ಮರೆಯುವಂತಿಲ್ಲ. ಚಿತ್ರರಂಗದಲ್ಲಿ ಮೊದಲು ಜಯಮಾಲ ಉತ್ತಮ ಸಹಕಾರ ನೀಡಿದ್ದರು ಎಂದರು.
ನಟಿ ಅಂಬಿಕಾ ಮಾತನಾಡಿ, ಮಹಿಳಾ ಸಾಧಕಿಯರನ್ನು ಗುರುತಿಸುವ ಕೆಲಸವಾಗಿದೆ. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಸಹಕಾರ, ಬೆಂಬಲ ನೀಡಬೇಕು. ಮಹಿಳೆ ಎಂದರೆ ಶಕ್ತಿ ಸ್ವರೂಪಿಣಿ ಎಂದರು.
ವಿನಯ ಪ್ರಸಾದ್ ಮಾತನಾಡಿ, ಕನ್ನಡ ಚಲನಚಿತ್ರರಂಗದ ಅಮೂಲ್ಯರತ್ನ, ಬಂಗಾರದ ಗೊಂಬೆಗಳು ಇವರು. ಪ್ರತಿಯೊಬ್ಬ ನಾರಿಮಣಿಯರು ದಿಟ್ಟ ಮಹಿಳೆಯರು. ನಾವು ಪುರುಷರ ದ್ವೇಷಿಗಳಲ್ಲ. ಅವರ ಜೊತೆ ನಾವು, ನಮ್ಮ ಜೊತೆಯಲ್ಲಿ ಅವರು ಇದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಪೂರ್ಣಿಮ ರಾಮ್ ಕುಮಾರ್ ಮಾತನಾಡಿ, ಮಹಿಳೆ ಅಕ್ಕ, ತಂಗಿ, ತಾಯಿ, ಅತ್ತೆಯಾಗಿ ಎಲ್ಲರ ಜೀವನದಲ್ಲಿ ಪಾತ್ರವಹಿಸುತ್ತಾಳೆ. ಪ್ರತಿದಿನ ಮಹಿಳೆ ಸಾಧನೆ ಮಾಡುತ್ತಾಳೆ. ಕನ್ನಡ ಚಲನಚಿತ್ರ ರಂಗದ ಎಲ್ಲ ಕಲಾವಿದರು ನಮ್ಮ ಕುಟುಂಬದಂತೆ ಎಂದರು.
ಎ.ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ನಾಡು, ನುಡಿ ಮತ್ತು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ. ಕನ್ನಡ ಭಾಷೆ ಉಳಿಸಿ, ಬೆಳಸಲು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು. ಮಹಿಳಾ ಸಾಧಕಿಯರನ್ನ ಗುರುತಿಸಿ ನಮ್ಮ ಸಂಘದ ವತಿಯಿಂದ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರುಗಳಾದ ಚಲನಚಿತ್ರ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲ ರಾಮಚಂದ್ರ, ಶ್ರೀಮತಿ ಸರಿತಾ, ಅಂಬಿಕಾ, ಗೀತಾ, ನಿರ್ಮಾಪಕಿಯರುಗಳಾದ ಲಕ್ಷ್ಮಿ ಗೋವಿಂದರಾಜು, ಪೂರ್ಣಿಮ ರಾಮ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ, ದೂರದರ್ಶನ ಮುಖ್ಯಸ್ಥರಾದ ಆರತಿ ಹೆಚ್.ಎನ್. ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಪ್ರಶೀಲ, ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯ, ಖ್ಯಾತ ವಕೀಲೆ ಶೃತಿ, ಟಿ.ವಿ.9 ನಿರೂಪಕಿ ಮಧುನಾಗರಾಜ್ ಹಾಗೂ ಜೀ ಕನ್ನಡ ನಿರೂಪಕಿ ಕಾವಶ್ರೀ ರಾಘವಸೂರ್ಯ, ಸುವರ್ಣ ನ್ಯೂಸ್ ನಿರೂಪಕಿ ಪ್ರಗತಿ, ರಶ್ಮಿರಾವ್ (Rapid ರಶ್ಮಿ) , ಸಮೃದ್ದಿ ಚಿಕಿತ್ಸಾ ಕೇಂದ್ರ ಶ್ರೀಮತಿ ಡಾ.ಪೂರ್ವಿ ಜಯರಾಜ್ ಹಾಗೂ ಬಿಬಿಎಂಪಿ ಮಹಿಳಾ ಅಧಿಕಾರಿ, ನೌಕರರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಖ್ಯಾತ ಹಿನ್ನಲೆ ಗಾಯಕಿ ಆನುರಾಧ ಭಟ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಎಲ್.ಆರ್.ಮಂಜುನಾಥ್,ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಕೆ.ಮಂಜೇಗೌಡ, ವಿ.ಉಮೇಶ್, ಆರ್.ರೇಣುಕಾಂಬ, ಎಸ್.ಜಿ.ಸುರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ, ಶ್ರೀಧರ್, ಸಂತೋಷ್ ಕುಮಾರ್ ಮೊದಲಾದವರು ಹಾಜರಿದ್ದರು.




