ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್ ಬಸವ ವನ ಉದ್ಯಾನವನದಲ್ಲಿ ಬಸವ ಜಯಂತಿ ಅಚರಣೆ ಪ್ರಯುಕ್ತ ಮಾಜಿ ಸಚಿವ, ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣರವರು ಕಾಯಕ ಯೋಗಿ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಇದೇ ಸಂದರ್ಭದಲ್ಲಿ ಮಾತಾಡಿದ ವಿ.ಸೋಮಣ್ಣ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತ ಕಾಯಕ ಮಹತ್ವವನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತ ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರು. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಮೊದಲನೇಯ ಸಂಸತ್ತು ಸ್ಥಾಪಕ ಬಸವೇಶ್ವರರು ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ತೊಲಗಿಸಲು ಕಾಯಕಯೋಗಿ ಬಸವೇಶ್ವರರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿದಾಗ ಮಾತ್ರ ಸಮಾನತೆ, ಜಾತಿ ನಿರ್ಮೂಲನೆ ಹಾಗೂ ಸಮ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಪ್ರತಿಯೊಬ್ಬರು ಶ್ರದ್ದೆ, ಭಕ್ತಿಯಿಂದ ತಮ್ಮ ಕಾಯಕ ಮಾಡಬೇಕು. ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕೆ ಉಪಯೋಗ ಮಾಡಬೇಕು ಹಾಗೂ ದಾಸೋಹ ಮಹತ್ವವನ್ನು ಸಾರಿದರು ಎಂದರು.
ಇಂದಿನ ಕಲುಷಿತ ಸಮಾಜವನ್ನು ಸರಿಪಡಿಸಲು ಪ್ರತಿಯೊಬ್ಬರು ಜಗಜ್ಯೋತಿ ಬಸವೇಶ್ವರರ ಸಿದ್ದಾಂತವನ್ನು ಜೀವನದಲ್ಲಿ ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿಶ್ವನಾಥಗೌಡ, ದಾಸೇಗೌಡ, ಬಿಜೆಪಿ ಶ್ರೀಧರ್, ಹೆಚ್.ರಮೇಶ್, ವೇಣುಗೋಪಾಲ್, ವಾರ್ಡ್ ಅಧ್ಯಕ್ಷ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.




