ಬಸವ ಜಯಂತಿ ಪ್ರಯುಕ್ತ ಪರಿಸರ ಜಾಗೃತಿ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ

2 years ago

ಕಾಯಕ ಬಳಗ ವತಿಯಿಂದ ಆಯೋಜನೆ

ಬೆಂಗಳೂರು: ರಾಜಾಜಿನಗರದ ಕಾಯಕ ಬಳಗ ಸಂಸ್ಥೆ ವತಿಯಿಂದ ಬಸವ ಜಯಂತಿ ಪ್ರಯುಕ್ತ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ವಚನ ಗಾಯನ ಹಾಗೂ ಪರಿಸರ ಜಾಗೃತಿ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಯಕ ಬಳಗ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ನೀಲಕಂಠಪ್ಪ, ವೈಭವ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ಗೌಡ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತ ಅಸಂಘಟಿತ ಕಾರ್ಮಿಕರ ಒಕ್ಕೂಟ ಅಧ್ಯಕ್ಷ ದೇವರಾಜ್, ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಎಂ.ಮಹೇಶ್ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಸ್.ಎನ್.ನೀಲಕಂಠಪ್ಪ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ್ಯ, ಜಾತಿ ವ್ಯವಸ್ಥೆ ನಿರ್ಮೂಲನೆ ಸಮ ಸಮಾಜ ನಿರ್ಮಾಣಕ್ಕೆ 12ಶತಮಾನದಲ್ಲಿ ಕ್ರಾಂತಿ ಮೂಡಿಸಿದ ವಿಶ್ವಗುರು ಬಸವೇಶ್ವರರು ಎಂದರು.

ವಚನಗಳು ಕನ್ನಡ ಭಾಷೆಗೆ ಹೂಸತನವನ್ನು ತಂದರು, ಎಲ್ಲ ಮಹನೀಯರುಗಳು ಬರೆದ ವಚನಗಳು ಸಂಪೂರ್ಣ ಕನ್ನಡದಲ್ಲಿ ಬರೆದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಬಸವೇಶ್ವರರು ಸಾಮಾಜಿಕ ಕ್ರಾಂತಿ ಮೂಲಕ ಎಲ್ಲ ಜಾತಿಯವರನ್ನ ಸರಿಸಮಾನವಾಗಿ ಕಂಡರು ಎಂದರು.

ವಿಶ್ವದ ಮೊಟ್ಟ ಮೊದಲ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದ್ದು ಕ್ರಾಂತಿಯೋಗಿ ಬಸವೇಶ್ವರರು. ಯಾವುದೇ ತಾರತಮ್ಯವಿಲ್ಲದೇ ಮಹಿಳೆಯರು, ಪುರುಷರು ಮತ್ತು ಎಲ್ಲ ಜಾತಿ, ಜನಾಂಗದವರು, ಕಾಯಕ ಸಮಾಜದವರಿಗೆ ಒಗ್ಗೂಡಿಸಿ ಸಮಾಜದಲ್ಲಿ ಬದಲಾವಣೆಗೆ ನಾಂದಿ ಹಾಡಿದರು ಎಂದರು.

ವಿಶ್ವಗುರು ಬಸವೇಶ್ವರರ ಜೀವನ ಆದರ್ಶ, ಸಿದ್ದಾಂತಗಳನ್ನು ಎಲ್ಲರು ಆಳವಡಿಸಿಕೊಂಡರೆ ಸುಖ, ಶಾಂತಿಯಿಂದ ಬದುಕಬಹುದು ಎಂದರು.

ಬಸವಭಿಮಾನಿಗಳಾದ ಶಿವಕುಮಾರ್ ಗೌಡ ಸಾಹುಕಾರ್, ಶಶಿಧರ್, ಧೃವ, ವನಶ್ರೀ, ಮೇಘ, ಅರ್ಚನ, ಭೂಮಿಕಾ, ಲಕ್ಷ್ಮಿ, ಸಿದ್ದೇಶ್, ದರ್ಶನ್ ಮೊದಲಾದವರು ಭಾಗವಹಿಸಿದ್ದರು.

Leave a Reply