ಬೆಂಗಳೂರು: ಗಡಿನಾಡ ಅಭಿವೃದ್ಧಿ ನಾಟಕ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಖ್ಯಾತ ಹಿಂದೂಸ್ತಾನಿ ಗಾಯಕ ಬೆಳಗಾವಿಯ ಅನಂತ ತೆರದಾಳ ಅವರಿಗೆ ನಿಜಗುಣ ಪುರಂದರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಕಟಿಸಿದರು.
ಬಸವ ರಾಷ್ಟ್ರೀಯ ಪುರಸ್ಕಾರ – ಡಾ. ಎಸ್. ಆರ್. ಗುಂಜಾಳ ಧಾರವಾಡ.
ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ – ಪಂಡಿತರತ್ನ ಎ.ಶಾಂತಿರಾಜ, ಶಾಸ್ತ್ರೀ ಟ್ರಸ್ಟ್ ಬೆಂಗಳೂರು
ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ – ಬಸಪ್ಪ ಎಚ್ ಭಜಂತ್ರಿ ಬಾಗಲಕೋಟೆ
ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ – ಬೇಗಂ ಪರ್ವೀನ್ ಸುಲ್ತಾನ್, ಮುಂಬಯಿ
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ – ಕೆ ರಾಜಕುಮಾರ, ಕೋಲಾರ
ಅಕ್ಕಮಹಾದೇವಿ ಪ್ರಶಸ್ತಿ – ಡಾ ಹೇಮಾ ಪಟ್ಟಣಶೆಟ್ಟಿ, ಧಾರವಾಡ
ಪಂಪ ಪ್ರಶಸ್ತಿ – ಡಾ ಬಿ ಎ ವಿವೇಕ ರೈ, ದಕ್ಷಿಣ ಕನ್ನಡ
ಪ್ರೋ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಸ.ರಘುನಾಥ್, ಕೋಲಾರ
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಡಾ. ವೈ. ಸಿ. ಭಾನುಮತಿ, ಹಾಸನ
ಬಿ.ವಿ. ಕಾರಂತ ಪ್ರಶಸ್ತಿ – ಜೆ. ಲೋಕೇಶ್, ಬೆಂಗಳೂರು
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ – ಕೆ. ನಾಗರತ್ನಮ್ಮ, ಮರಿಯಮ್ಮನಹಳ್ಳಿ ವಿಜಯನಗರ
ಡಾ.ಸಿದ್ಧಲಿಂಗಯ್ಯ ಸಾಹಿತ್ಯ ಪ್ರಶಸ್ತಿ – ಡಾ.ಎಲ್ ಹನುಮಂತಯ್ಯ, ಬೆಂಗಳೂರು
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಎಂ ಜೆ ಕಮಲಾಕ್ಷಿ, ಬೆಂಗಳೂರು
ಜಕಣಾಚಾರಿ ಪ್ರಶಸ್ತಿ – ಎಂ. ರಾಮಮೂರ್ತಿ, ಬೆಂಗಳೂರು
ಜಾನಪದ ಶ್ರೀ ಪ್ರಶಸ್ತಿ – ನಿಂಗಪ್ಪ ಭಜಂತ್ರಿ ಕಲ್ಬುರ್ಗಿ ಮತ್ತು ದೊಡ್ಡಗವಿಬಸಪ್ಪ, ಚಾಮರಾಜನಗರ
ನಿಜಗುಣ ಪುರಂದರ ಪ್ರಶಸ್ತಿ – ಅನಂತ ತೆರದಾಳ, ಬೆಳಗಾವಿ ( ಹಿಂದುಸ್ತಾನಿ ಗಾಯನ )
ಕುಮಾರವ್ಯಾಸ ಪ್ರಶಸ್ತಿ – ಡಾ.ಎ ವಿ ಪ್ರಸನ್ನ, ಹಾಸನ ( ಗಮಕ ವ್ಯಾಖ್ಯಾನ)
ಶಾಂತಲಾ ನಾಟ್ಯ ಪ್ರಶಸ್ತಿ – ಪದ್ಮಿನಿ ರವಿ, ಬೆಂಗಳೂರು ( ಭರತನಾಟ್ಯ)
ಸಂತ ಶಿಶುನಾಳ ಷರೀಫ್ ಪ್ರಶಸ್ತಿ – ಪ್ರೊ. ಮಲ್ಲಣ್ಣ, ಚಾಮರಾಜನಗರ ( ಸುಗಮ ಸಂಗೀತ )




