ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಭೂ ಅಕ್ರಮ ಆರೋಪ

2 years ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ನಿವೇಶನ ಹಂಚಿಕೆ ಅಕ್ರಮ ಆರೋಪ ಕೇಳಿ ಬಂದ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಭೂ ಅಕ್ರಮ ಆರೋಪ ಕೇಳಿಬಂದಿದೆ.

ತಮ್ಮ ಪ್ರಭಾವ ಬಳಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ನಗರದ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಅಮೂಲ್ಯವಾದ ಸರ್ಕಾರಿ ಸ್ವತ್ತುಗಳನ್ನು ಕಬಳಿಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದವರು ಭಾರತ ಸಂವಿಧಾನದ ಬಗ್ಗೆ ಸ್ಪಷ್ಟ ತಿಳುವಳಿಕೆ ಇದ್ದರೂ ಸಹ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮದೇ ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

2014ರಲ್ಲಿ ಬಿಟಿಎಂ 4ನೇ ಹಂತದಲ್ಲಿ 8,002 ಚ. ಮೀ. (86,133 ಚ. ಅಡಿ) ವಿಸ್ತೀರ್ಣದ ಸಿಎ ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಬಿಡಿಎಯಿಂದ 30 ವರ್ಷಗಳ ಗುತ್ತಿಗೆಗೆ ಪಡೆದಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಂಸ್ಥೆಯು ಈ ವಿಷಯವನ್ನು ಮರೆ ಮಾಚಿ ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಯಲಹಂಕ ಬಳಿಯ ಬಾಗಲೂರಿನ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನ ಹಾರ್ಡ್ವೇರ್ ಪಾರ್ಕ್ ನಲ್ಲಿ 05 ಎಕರೆ ವಿಸ್ತೀರ್ಣದ ಸಿಎ ನಿವೇಶನವನ್ನು ಮಂಜೂರು ಮಾಡಿಸಿ ಕೊಳ್ಳುವ ಮೂಲಕ ಕಾನೂನು ಬಾಹಿರ ಕಾರ್ಯವನ್ನು ಎಸಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ಮಾರುತಿ ರಾವ್ ಡಿ. ಮಾಲೆ, ಶಾಂತಪ್ಪ, ಸಾಯಬಣ್ಣ ಅವರನ್ನೊಳಗೊಂಡ ಸಿದ್ಧಾರ್ಥ ವಿಹಾರ ಟ್ರಸ್ಟ್ ಎಂಬ ಸಂಸ್ಥೆಯನ್ನು ಗುಲ್ಬರ್ಗ ಜಿಲ್ಲೆಯ ಕುಸನೂರು ಗ್ರಾಮದ ವಿಳಾಸದಲ್ಲಿ 1994 ರಲ್ಲಿ ಪ್ರಾರಂಭಿಸಲಾಗಿದೆ . ನಂತರ, ಈ ಟ್ರಸ್ಟ್ ಮೂಲಕ ಬೆಂಗಳೂರಿನಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸುವ ಉದ್ದೇಶಕ್ಕಾಗಿ ಸಿಎ ನಿವೇಶನ ಹಂಚಿಕೆ ಮಾಡುವಂತೆ 2009ರಲ್ಲಿ ಬಿಡಿಎಗೆ ಅರ್ಜಿ ಸಲ್ಲಿಸಿರುತ್ತಾರೆ.

ಸಿಎ ನಿವೇಶನಕ್ಕಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಬೆಂಗಳೂರು ಅಭಿವದ್ಧಿ ಪ್ರಾಧಿಕಾರ ಮೊದಲಿಗೆ ಬನಶಂಕರಿ 6ನೇ ಹಂತ, 5ನೇ ಬ್ಲಾಕ್ ನಲ್ಲಿರುವ 8,125 ಚ. ಮೀಟರ್ ವಿಸ್ತೀರ್ಣದ ನಿವೇಶನ ಸಂಖ್ಯೆ 3 ಅನ್ನು ಹಂಚಿಕೆ ಮಾಡಿ 2010 ರಂದು ಹಂಚಿಕೆ ಪತ್ರ ನೀಡಿರುತ್ತದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಟ್ರಸ್ಟೀಗಳಲ್ಲಿ ಒಬ್ಬರಾದ ರಾಧಾಕಷ್ಣರವರು ಬನಶಂಕರಿ 6ನೇ ಹಂತದ 5ನೇ ಬ್ಲಾಕ್ ನ ಸಿಎ ನಿವೇಶನ ಸಂಖ್ಯೆ – 03 ಕ್ಕೆ ಬದಲಾಗಿ ಈಗಾಗಲೇ ಅಭಿವದ್ಧಿಗೊಂಡಿರುವ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡುವಂತೆ ಬೆಂಗಳೂರು ಅಭಿವದ್ಧಿ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಾರೆ. ಸದರಿ ಮನವಿ ಪತ್ರದಲ್ಲಿ ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಬಿಟಿಎಂ 4ನೇ ಹಂತದ 2ನೇ ಬ್ಲಾಕ್ನ ಸಿಎ ನಿವೇಶನ ಸಂಖ್ಯೆ – 05 ಅನ್ನು ಬದಲಿ ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಲಾಗುತ್ತದೆ.

ಪ್ರಸ್ತುತ 130 ಕೋಟಿ ರೂ. ಬೆಲೆ ಬಾಳುವ ಈ ಆಸ್ತಿಗೆ ಬಿಬಿಎಂಪಿ ಯಿಂದ ಖಾತಾ ಕೂಡ ಮಾಡಿ ಕೊಡಲಾಗಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರೆ, ಖರ್ಗೆ ಅವರು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದೇ ಸಂಸ್ಥೆಯ ಹೆಸರಿಗೆ – ಒಂದೇ ಉದ್ದೇಶಕ್ಕಾಗಿ – ಒಂದಕ್ಕಿಂತ ಹೆಚ್ಚು ಸರ್ಕಾರೀ ಸ್ವತ್ತನ್ನು ಪಡೆಯುವುದು ಕಾನೂನು ಸಮತವಲ್ಲದ ಕಾರ್ಯ ಎಂಬ ಸ್ಪಷ್ಟ ಅರಿವು ಇದ್ದರೂ ಟ್ರಸ್ಟ್ನವರು 2024ರ ಮಾರ್ಚ್ ತಿಂಗಳಿನಲ್ಲಿ ಕೆಐಎಡಿಬಿಗೆ ಅರ್ಜಿ ಸಲ್ಲಿಸಿ ಬಾಗಲೂರಿನಲ್ಲಿ ಅಭಿವದ್ಧಿ ಪಡಿಸಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನ ಹಾರ್ಡ್ವೇರ್ ಪಾರ್ಕ್ನಲ್ಲಿ ಸಿಎ ನಿವೇಶನವನ್ನು ಹಂಚಿಕೆ ಮಾಡುವಂತೆ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿ ಸಲಾಗಿದೆ. ಇದರಲ್ಲಿ ಅಧಿಕಾರ ದುರ್ಬಳಕೆ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಒಂದು ಕೋರಿದ್ದಾರೆ.

Leave a Reply