ಬೆಂಗಳೂರು: ಅಧಿಕಾರಕ್ಕಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕಚ್ಚಾಟ ಆರಂಭಗೊಂಡಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿತಗೊಂಡಿದೆ. ನಾಯಕತ್ವ ಇಲ್ಲದೆ ಕಾಂಗ್ರೆಸ್ ಪಕ್ಷ ದೇಶದಲ್ಲೇ ಅಪ್ರಸ್ತುತವಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮಂತ್ರಿ ವಿ.ಸೋಮಣ್ಣ ಹೇಳಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ರಾಜ್ಯ ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಿರುವಂತಹ ಮೊಂಡುತನದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ ಎಂದರು.
ಇಂತಹ ಜನರನ್ನ ಕಟ್ಟಿಕೊಂಡು ಏನು ಮಾಡೋಕೆ ಆಗಲ್ಲ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ವ್ಯವಸ್ಥೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದು ಹೇಸಿಗೆ ಕೆಲಸ. ಅದಕ್ಕೆ ಬಿಹಾರದ ಜನ ಮೋದಿ ಅಭ್ಯುದಯದಲ್ಲಿ ಮತ ಹಾಕಿದ್ದಾರೆ ಎಂದರು.
ಕಾಂಗ್ರೆಸ್ ಬಗ್ಗೆ ಮಾತನಾಡುವುದೇ ಅಪ್ರಸ್ತುತವೆನಿಸಿದೆ. ಅವರ ಬಗ್ಗೆ ಮಾತನಾಡುವುದರಿಂದ ಪ್ರಯೋಜನ ಸಹ ಇಲ್ಲ. ಅಪ್ರಸ್ತುತ ವ್ಯವಸ್ಥೆಯಲ್ಲಿ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ಬಳಿ ಏನೂ ಇಲ್ಲ. ಎಲ್ಲೆಲ್ಲಿ ಏನೇನೂ ಸಿಕ್ಕಿದೆ. ಯಾವುದಾವುದಕ್ಕೋ ಹೋಗ್ತಿದೆ ಎಂದರು.
ನಮ್ಮ ಸರ್ಕಾರ ಇದ್ದಾಗ ನಮ್ಮದೂ 40% ಭ್ರಷ್ಟಾಚಾರ ಅಂದ್ರು. ಈಗ 100% ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಭಾರತದಲ್ಲಿ ಭಗವಂತನೇ ಬೇರೆ. ಕಾಂಗ್ರೆಸ್ ಸರ್ಕಾರವೇ ಬೇರೆಯಾಗಿದೆ. ಇವರ ಬಗ್ಗೆ ಮಾತನಾಡುವುದ್ರಲ್ಲಿ ಅರ್ಥವಿಲ್ಲದಾಗಿದೆ ಎಂದರು.
ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಗೊತ್ತಿಲ್ಲ. ರಾಜ್ಯದ ಹಿತ ಗೊತ್ತಿಲ್ಲ. ಸಮಸ್ಯೆ ಗೊತ್ತಿಲ್ಲ, ರಾಜ್ಯವನ್ನು ಯಾವ ರೀತಿ ತಗೆದುಕೊಂಡು ಹೋಗಬೇಕು ಅನ್ನೋದು ಗೊತ್ತಿಲ್ಲ. ಇತಂಹ ನಿರ್ಲಿಪ್ತ ಅವ್ಯವಸ್ಥೆಯ ಸರ್ಕಾರವನ್ನ ನಾನೂ ನೋಡಿಲ್ಲ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅನ್ನೋದಕ್ಕೆ ನಾಚಿಕೆ ಆಗಬೇಕು. ಕಾಂಗ್ರೆಸ್ ನವರು ದೆಹಲಿಯಲ್ಲಿ ಹೋಗಿ ಕುಳಿತುಕೊಂಡು ಇಲ್ಲದ ವೋಟ್ ಚೋರಿ ಬಗ್ಗೆ ಮಾತನಾಡ್ತಾರೆ. ರಾಹುಲ್ ಗಾಂಧಿ ಯಾವ ವಿಚಾರ ತಗೆದುಕೊಂಡು ಹೋರಾಟ ಮಾಡಬೇಕು ಅದನ್ನ ಮಾಡ್ತಿಲ್ಲ ಎಂದರು.
ಚುನಾವಣಾ ಆಯೋಗವನ್ನು ತೆಗೆದುಕೊಂಡು ಹೋರಾಟ ಮಾಡುತ್ತಿರುವುದು ನಿಮ್ಮ ಧೋರಣೆ ತೋರಿಸುತ್ತದೆ. ರಾಹುಲ್ ಗಾಂಧಿ ಜೀವನದಲ್ಲಿ ಅವರ ನಾಯಕತ್ವದಲ್ಲಿ ಒಂದು ಚುನಾವಣೆ ಸಹ ಗೆದ್ದಿಲ್ಲ. ರಾಜ್ಯದಲ್ಲಿ ಅಂದು ನಮ್ಮಲ್ಲಿ ತೊಂದರೆ ಆಗಿದಕ್ಕೆ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಅವನತಿ ರಾಜ್ಯದಲ್ಲಿ ಶುರುವಾಗಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಸಹ ದಿನಾ ಕಪ್ಪ ಕಾಣಿಕೆ ತಗೆದುಕೊಂಡು ರಾಜ್ಯದ ಮುಖಂಡರನ್ನು ನಿಯಂತ್ರಣ ಮಾಡುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಗೆ ಗಾಂಭೀರ್ಯತೆ ಇಲ್ಲದಾಗಿದೆ. ಈ ಸರ್ಕಾರದಿಂದ ಏನಾದರೂ ಅಭಿವೃದ್ಧಿ ಆಗ್ತುತ್ತದೆ ಅಂದುಕೊಂಡ್ರೆ ಅದು ಕನಸಾಗುತ್ತೆ. ಅಧಿಕಾರ ಕುರ್ಚಿಗಾಗಿ ಇವರು ಕಿತ್ತಾಡುತ್ತಿದ್ದಾರೆ ಎಂದರು.
ಮೋದಿಯವರ ದೂರದೃಷ್ಟಿಯಿಂದ ಮುಂದೆ ಆರು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸುತ್ತದೆ. ವಿಕಸಿತ ಭಾರತ 2047 ಒಳಗೆ ಎಲ್ಲವೂ ಅಭಿವೃದ್ಧಿ ಆಗುತ್ತೆ ಎಂದರು.




